ಅಮ್ಮನ ಜೊತೆ ಹೋಗಿದ್ದೆ, ಹೀರೋ ಜೊತೆ ಮಲಗೋಕೆ ಹೇಳಿದ್ರು ಎಂದ ನಟಿ
- ಕಾಸ್ಟಿಂಗ್ ಕೌಚ್ ಅನುಭವ ಶೇರ್ ಮಾಡಿದ ನಟಿ
- ಅಮ್ಮನ ಜೊತೆ ಹೋಗಿದ್ದಾಗ ಹೀರೋ ಜೊತೆ ಮಲಗ್ಬೇಕು ಎಂದ ಷರತ್ತು
ನಟ ಕಿಶ್ವರ್ ಮರ್ಚೆಂಟ್ ಪ್ರಸ್ತುತ ತನ್ನ ಜೀವನದ ಅತ್ಯುತ್ತಮ ಹಂತದಲ್ಲಿದ್ದಾರೆ. ಏಕೆಂದರೆ ಅವರು ಮೊದಲ ಬಾರಿಗೆ ಅಮ್ಮನಾಗುತ್ತಿದ್ದಾರೆ.
ಪ್ಯಾರ್ ಕಿ ಯೆ ಏಕ್ ಕಹಾನಿ ನಟಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಪತಿ ಸುಯಾಶ್ ರಾಯ್ ಅವರೊಂದಿಗೆ ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದ್ದಾರೆ.
ತಾಯಿಯಾಗುತ್ತಿರುವ ಸಂದರ್ಭ ಪ್ರತಿಯೊಂದು ಹಂತವನ್ನು ಆನಂದಿಸುತ್ತಿದ್ದಾರೆ ನಟಿ. ಆಗಾಗ ತನ್ನ ಇನ್ಸ್ಟಾಗ್ರಾಮ್ನಲ್ಲಿ ತನ್ನ ವೀಡಿಯೊಗಳು ಮತ್ತು ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.
ನಟಿ ಎಂದೂ ತನ್ನ ಕುರಿತು ಹೇಳುವುದರಿಂದ ಹಿಂದೆ ಸರಿದಿಲ್ಲ, ತನ್ನ ನಟನಾ ಪ್ರಯಾಣದ ಬಗ್ಗೆ ಮಾತನಾಡುತ್ತಾರೆ. ಅವರ ಬೆಡ್ ಟೈಂ ಅನುಭವವನ್ನು ಹಂಚಿಕೊಳ್ಳುತ್ತಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಕಿಶ್ವರ್ ಅವರು ಕಾಸ್ಟಿಂಗ್ ಕೌಚ್ ಎದುರಿಸುವ ಬಗ್ಗೆ ಮಾತನಾಡಿದ್ದಾರೆ.
'ನನ್ನನ್ನು ನಾಯಕನೊಂದಿಗೆ ಮಲಗಲು' ಕೇಳಲಾಗಿತ್ತು ಎಂದು ಬಹಿರಂಗಪಡಿಸಿದ್ದಾರೆ ಈಕೆ.
ನಾನು ಸಭೆಗೆ ಹೋದಾಗ ಘಟನೆ ನಡೆಯಿತು. ಆದರೆ ಒಮ್ಮೆ ಮಾತ್ರ. ನನ್ನ ತಾಯಿ ನನ್ನ ಜೊತೆಯಲ್ಲಿದ್ದರು.
ನಾನು ನಾಯಕನೊಂದಿಗೆ ಮಲಗಬೇಕು ಎಂದು ನನಗೆ ತಿಳಿಸಲಾಯಿತು. ನಾನು ನಯವಾಗಿ ಪ್ರಸ್ತಾಪ ತಿರಸ್ಕರಿಸಿ ಹೊರಟೆವು. ಇದು ಬಹಳಷ್ಟು ನಡೆಯುತ್ತದೆ ಎಂದು ನಾನು ಹೇಳುವುದಿಲ್ಲ. ಇದು ಸಾಮಾನ್ಯ ವಿಷಯ ಎಂದಿದ್ದಾರೆ ನಟಿ.
ಉದ್ಯಮವು ಇದೇ ವಿಚಾರ ಕುಖ್ಯಾತವಾಗಿದೆ. ಆದರೆ ಇದು ಪ್ರತಿ ಉದ್ಯಮದಲ್ಲಿಯೂ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.
ನಾಯಕ ಮತ್ತು ನಿರ್ಮಾಪಕರು ಇಬ್ಬರದೂ ದೊಡ್ಡ ಹೆಸರುಗಳು ಎಂದು ಉತ್ತರಿಸಿದ್ದಾರೆ ಈಕೆ.
ಕೆಲಸದಲ್ಲಿ ಹೆಚ್ಚು ಗಮನಹರಿಸಿದ್ದರಿಂದ ಈ ಘಟನೆಗಳು ಹೆಚ್ಚು ಕಾಡುವುದಿಲ್ಲ ಎಂದು ಹೇಳಿದ್ದಾರೆ.
ನಾನು ಟಿವಿಯತ್ತ ಹೆಚ್ಚು ಒಲವು ಹೊಂದಿದ್ದೆ. ನನ್ನ ವೃತ್ತಿಜೀವನವನ್ನು ರೂಪಿಸಿದ ರೀತಿ ನನಗೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.