ಪೇಸ್ ಜೊತೆ ರೋಮ್ಯಾಂಟಿಕ್ ಪೋಟೋ: ಸಂಬಂಧ ಕನ್ಫರ್ಮ್ ಮಾಡಿದ ನಟಿ!
ಬಾಲಿವುಡ್ ನಟಿ ಕಿಮ್ ಶರ್ಮಾ ಮತ್ತು ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ನಡುವಿನ ಸಂಬಂಧದ ಬಗ್ಗೆ ಈ ದಿನಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿವೆ. ಕಿಮ್ ಶರ್ಮಾ ಇತ್ತೀಚೆಗೆ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಲಿಯಾಂಡರ್ ಪೇಸ್ ಕೂಡ ಜೊತೆಗೆ ಇದ್ದಾರೆ. ಈ ರೋಮ್ಯಾಂಟಿಕ್ ಫೋಟೋ ನೋಡಿದ ನಂತರ ಕಿಮ್ ಶರ್ಮಾ ತನ್ನ ಸಂಬಂಧವನ್ನು ದೃಢಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಿಮ್ ಲಿಯಾಂಡರ್ ಜೊತೆಗಿನ ಈ ಫೋಟೋಗೆ ಯಾವುದೇ ಕ್ಯಾಪ್ಷನ್ ನೀಡಿಲ್ಲ. ಆದರೆ ಹುಡುಗ ಮತ್ತು ಹುಡುಗಿಯ ನಡುವಿನ ಪ್ರೀತಿಯನ್ನು ಚಿತ್ರಿಸುವ ಎಮೋಜಿಯನ್ನು ಬಳಸಿದರು. ಸಿನಿಮಾದ ಕೆರಿಯರ್‌ನಲ್ಲಿ ಕಿಮ್ ಕೆಲವೇ ಚಿತ್ರಗಳನ್ನು ಮಾಡಿದ್ದಾರೆ. ಆದರೆ ಆಕೆಯ ತಮ್ಮ ಆಫೇರ್‌ಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.
ಸಿನಿಮಾಗಳಿಗಿಂತ ಲವ್ ಲೈಫ್‌ನಿಂದಲ್ಲೇ ಹೆಚ್ಚು ಪೇಮಸ್ ಆಗಿರುವ ಕಿಮ್ ಶರ್ಮರ ಹೆಸರು ಲಿಯಾಂಡರ್ ಪೇಸ್‌ಗೂ ಮೊದಲೂ ಕೆಲವರ ಜೊತೆ ಕೇಳಿಬಂದಿತ್ತು. ಕಿಮ್ ಶರ್ಮಾ ಯಾರೊಂದಿಗೆ ಸಂಬಂಧ ಹೊಂದಿದ್ದರು. ಇಲ್ಲಿದೆ ನೋಡಿ.
ಯುವರಾಜ್ ಸಿಂಗ್:
ಯುವರಾಜ್ ಸಿಂಗ್ ಮತ್ತು ಕಿಮ್ ಶರ್ಮಾ ಹಲವು ವರ್ಷಗಳು ರಿಲೆಷನ್‌ಶಿಪ್‌ನಲ್ಲಿದ್ದರು. ಇವರ ನಡುವಿನ ಸಂಬಂಧದ ಸುದ್ದಿ ಯುವರಾಜ್ ಸಿಂಗ್ ಅವರು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದಾಗ ಬಂದಿತು. 2003 ರಲ್ಲಿ, ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು.
ಸುಮಾರು 4 ವರ್ಷಗಳ ಕಾಲ ಇಬ್ಬರೂ ಲೀವ್ ಇನ್ ರಿಲೆಷನ್‌ಶಿಪ್‌ನಲ್ಲಿದ್ದರು. ಇದಾದ ನಂತರ ಇಬ್ಬರ ನಡುವೆ ಬಿರುಕಿನ ಮೂಡಿರುವ ವರದಿಗಳು ಬಂದವು ಮತ್ತು ಇಬ್ಬರೂ ಬೇರೆಯಾದರು. ಯುವರಾಜ್ ನಂತರ ಬಾಲಿವುಡ್ ನಟಿ ಹ್ಯಾಜೆಲ್ ಕೀಚ್ ಅವರನ್ನು ವಿವಾಹವಾದರು.
ಅಲಿ ಪುಂಜಾನಿ:
ಯುವರಾಜ್‌ನಿಂದ ಬೇರ್ಪಟ್ಟ ನಂತರ ಕಿಮ್ ಭಾರತವನ್ನು ತೊರೆದರು ಎಂದು ಹೇಳಲಾಗಿದೆ. ನಂತರ ಕಿಮ್ ಕೀನ್ಯಾದಲ್ಲಿ ವಾಸಿಸುತ್ತಿರುವ ಉದ್ಯಮಿ ಅಲಿ ಪುಂಜಾನಿಯನ್ನು ವಿವಾಹವಾದರು. ಇಬ್ಬರ ಮದುವೆ ಬಹಳ ದಿನ ಉಳಿಯಲಿಲ್ಲ. ಅಲಿ ಪುಂಜಾನಿಯನ್ನು ಬಿಟ್ಟು, ಮತ್ತೆ ಕಿಮ್ ಶರ್ಮಾ ಮುಂಬೈನಲ್ಲಿ ವಾಸಿಸುತ್ತಿದ್ದಾರೆ.
ಹರ್ಷವರ್ಧನ್ ರಾಣೆ:
2017 ರಲ್ಲಿ ಕಿಮ್ ಶರ್ಮಾ ಹರ್ಷವರ್ಧನ್ ರಾಣೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಗಳು ಬಂದಿದ್ದವು. ಅವರ ಅನೇಕ ರೊಮ್ಯಾಂಟಿಕ್ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಸಂದರ್ಶನದಲ್ಲಿ ಹರ್ಷವರ್ಧನ್ ಅವರ ಸಂಬಂಧವನ್ನು ಒಪ್ಪಿಕೊಂಡಿದ್ದರು. ಆದರೆ 2019 ರಲ್ಲಿ ಇಬ್ಬರ ಬ್ರೇಕಪ್ ಆಯಿತು.
ಲಿಯಾಂಡರ್ ಪೇಸ್:
ಲಿಯಾಂಡರ್ ಪೇಸ್ ಮತ್ತು ಕಿಮ್ ಶರ್ಮಾ ಅವರ ಗೋವಾ ಹಾಲಿಡೇ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆದ ನಂತರ ಅವರ ಸಂಬಂಧದ ಸುದ್ದಿ ಹರಿದಾಡುತ್ತಿವೆ. ಆ ಫೋಟೋದಲ್ಲಿ, ಇಬ್ಬರೂ ತುಂಬಾ ರೋಮ್ಯಾಂಟಿಕ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಗೋವಾದಲ್ಲಿ ಇಬ್ಬರು ಜೊತೆಯಲ್ಲಿರುವ ಲವು ಫೋಟೋಗಳು ಬಹಿರಂಗಗೊಂಡವು. ನಂತರ ನಟಿ ಕಿಮ್ ಶರ್ಮಾ ಮತ್ತು ಲಿಯಾಂಡರ್ ಪೇಸ್ ಇಬ್ಬರನ್ನು ಆಗಾಗ ಒಟ್ಟಿಗೆ ನೋಡಲಾಗುತ್ತದೆ. ಇದು ಇಬ್ಬರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಊಹಾಪೋಹಕ್ಕೆ ಕಾರಣವಾಯಿತು.
Kim Sharma
ಈಗ ಅವರು ಪೇಸ್ ಜೊತೆಯ ರೋಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಕಿಮ್ ಶರ್ಮಾ ಲಿಯಾಂಡರ್ ಇನ್‌ಸ್ಟಾಗ್ರಾಮ್ ಇವರ ಸಂಬಂಧವನ್ನು ಅಧಿಕೃತಗೊಳಿಸುವ ಮೂಲಕ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.