ಡಿಸೆಂಬರ್‌ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ?
ಈ ದಿನಗಳಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಲವು ಬಾರಿ ಕತ್ರಿನಾರ ಅಪಾರ್ಟ್ಮೆಂಟ್ ಹೊರಗೆ ವಿಕ್ಕಿ ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಕೆಲವು ದಿನಗಳ ಹಿಂದೆ ಕತ್ರಿನಾ ಮತ್ತು ವಿಕ್ಕಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಹ ಬಂದಿತು. ಈಗ ಇಬ್ಬರೂ ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಇಲ್ಲಿದೆ ವರದಿಯ ವಿವರ.
ಲೈಫ್‌ಸ್ಟೈಲ್ ಏಷ್ಯಾದಲ್ಲಿ ಪ್ರಕಟವಾದ ಸುದ್ದಿವೊಂದರಲ್ಲಿ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ವಿವಾಹದ ಬಗ್ಗೆ ವಿಕ್ಕಿ ಅಥವಾ ಕತ್ರಿನಾ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಕತ್ರಿನಾ-ವಿಕ್ಕಿ ಅವರ ನಿಶ್ಚಿತಾರ್ಥದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗ, ಅಭಿಮಾನಿಗಳು ಈ ಜೋಡಿಗೆ ವಿಶ್ ಮಾಡಲು ಪ್ರಾರಂಭಿಸಿದರು. ನಂತರ ವಿಕ್ಕಿಯ ತಂದೆ ಶ್ಯಾಮ್ ಕೌಶಲ್ ಈ ವರದಿಯನ್ನು ತಳ್ಳಿ ಹಾಕಿದ್ದರು ಮತ್ತು ಅವರ ಮಗನಿಗೆ ನಿಶ್ಚಿತಾರ್ಥವಾಗಿಲ್ಲ ಎಂದು ಹೇಳಿದರು.
ಆದರೆ ಈಗ ಕತ್ರಿನಾ ಮತ್ತು ವಿಕ್ಕಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಂದಿದೆ. ಈ ದಿನಗಳಲ್ಲಿ ಕತ್ರಿನಾ ಕೈಫ್ ದೇಶದಿಂದ ಹೊರಗಿದ್ದಾರೆ. ಅವರು ಸಲ್ಮಾನ್ ಖಾನ್ ಜೊತೆ ರಷ್ಯಾದಲ್ಲಿ ಟೈಗರ್ 3 ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.
ವಿವಾಹದ ಬಗ್ಗೆ ವಿಕ್ಕಿ ಅಥವಾ ಕತ್ರಿನಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ ಈ ವರದಿಗಳಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾಗುವ ಸ್ಥಳದ ಬಗ್ಗೆ ಉಲ್ಲೇಖಿಸಲಾಗಿದೆ.
ಲೈಫ್‌ಸ್ಟೈಲ್ ಏಷ್ಯಾದಲ್ಲಿನ ವರದಿಯ ಪ್ರಕಾರ, ಇಬ್ಬರೂ ರಾಜಸ್ಥಾನದ ಉದಯಪುರದಲ್ಲಿ ಮದುವೆಯಾಗಲಿದ್ದಾರೆ ಮತ್ತು ಇದಕ್ಕಾಗಿ ಸಿದ್ಧತೆಗಳನ್ನು ಕೂಡ ಮಾಡಲಾಗುತ್ತಿದೆ. ಸುದ್ದಿಯ ಪ್ರಕಾರ, ಇಬ್ಬರ ಕುಟುಂಬ ಸದಸ್ಯರು ಈ ಮದುವೆಯಲ್ಲಿ ಭಾಗಿಯಾಗುತ್ತಾರೆ.
ಇಬ್ಬರ ನಡುವಿನ ನಿಶ್ಚಿತಾರ್ಥದ ಸುದ್ದಿಯ ಬಗ್ಗೆ ಸಾಕಷ್ಟು ಚರ್ಚೆಗಳಿವೆ ಎಂದು ಬಾಲಿವುಡ್ ಲೈಫ್ ತನ್ನ ಒಂದು ವರದಿಯಲ್ಲಿ ಹೇಳಿಕೊಂಡಿದೆ. ನಿಶ್ಚಿತಾರ್ಥದ ಸುದ್ದಿಯಿಂದ ಇಬ್ಬರೂ ಅಸಮಾಧಾನಗೊಂಡಿದ್ದಾರೆ ಎಂದು ವರದಿ ಹೇಳಿದೆ.
ಅಂದಹಾಗೆ, ಪ್ರಸ್ತುತ ವಿಕ್ಕಿ ಮತ್ತು ಕತ್ರಿನಾ ಇಬ್ಬರೂ ತಮ್ಮ ಆಕೌಂಟ್‌ನಲ್ಲಿ ಅನೇಕ ಚಲನಚಿತ್ರಗಳನ್ನು ಹೊಂದಿದ್ದಾರೆ ಮತ್ತು ಇಬ್ಬರೂ ತಮ್ಮ ಕೆಲಸವನ್ನು ಮಾಧ್ಯಮದಲ್ಲಿ ಚರ್ಚಿಸಬೇಕು. ಅವರ ಸಂಬಂಧದ ಬಗ್ಗೆ ಅಲ್ಲ ಎಂದು ಇಬ್ಬರು ಬಯಸುತ್ತಾರೆ.
ಕೆಲವು ದಿನಗಳ ಹಿಂದೆ, ಈ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿಯವರ ಸಿನಿಮಾ ಶೇರ್ಶಾದ ಸ್ಕ್ರೀನಿಂಗ್ ಶೋನಲ್ಲಿ ಕಾಣಿಸಿಕೊಂಡಿತ್ತು. ಕತ್ರಿನಾ ಕೈಫ್, ರೋಹಿತ್ ಶೆಟ್ಟಿ ಅವರ ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್ ಕುಮಾರ್ ಎದುರು ಕಾಣಿಸಿಕೊಳ್ಳಲಿದ್ದಾರೆ.
ಇದಲ್ಲದೇ, ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಜೊತೆ ಫೋನ್ ಭೂತ್ ಚಿತ್ರದಲ್ಲಿ ಮತ್ತು ಟೈಗರ್ 3 ರಲ್ಲಿ ಸಲ್ಮಾನ್ ಜೊತೆಗೆ ಕ್ಯಾಟ್ ಕೆಲಸ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ವಿಕ್ಕಿ ಕೌಶಲ್ ಅನೇಕ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ.