ಕತ್ರಿನಾ ಕೈಫ್ ಯಾ ದೀಪಿಕಾ ಪಡುಕೋಣೆ, ಯಾರು ಹೆಚ್ಚು ಶ್ರೀಮಂತರು?
ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಇಬ್ಬರೂ ಹಿಂದಿ ಚಿತ್ರರಂಗದ ಟಾಪ್ ನಟಿಯರು. ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಹೀರೋಯಿನ್‌ಗಳ ಪಟ್ಟಿಯಲ್ಲಿದ್ದಾರೆ ದೀಪಿಕಾ ಹಾಗೂ ಕತ್ರೀನಾ. ಈ ಇಬ್ಬರು ಸ್ಟಾರ್ಸ್‌ನಲ್ಲಿ ಹೆಚ್ಚು ಶ್ರೀಮಂತರು ಯಾರು ? ಇಬ್ಬರ ಪ್ರಸ್ತುತ ನೆಟ್ ವರ್ತ್ ವಿವರ ಇಲ್ಲಿದೆ.

ಬಾಲಿವುವುಡ್‌ನ ಚೆಲುವೆಯರಾದ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ನಡುವಿನ ಮುಖ್ಯ ಸಂಪರ್ಕ ಅಂದರೆ ರಣಬೀರ್ ಕಪೂರ್.

ಸೌಂದರ್ಯ, ಅಭಿನಯನದಲ್ಲಿ ಇಬ್ಬರೂ ತಮ್ಮದೇ ಛಾಪು ಮೂಡಿಸಿದ್ದಾರೆ.

ಇನ್ನೂ ಪ್ರೊಫೆಷನ್ ವಿಷಯಕ್ಕೆ ಬಂದರೆ ಬ್ರೇಕಪ್ ನಂತರ ರಣಬೀರ್ ಮಾಜಿ ಗೆಳತಿಯರಾದ ದೀಪಿಕಾ ಹಾಗೂ ಕತ್ರೀನಾ ಇಬ್ಬರೂ ಕೆರಿಯರ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಅತಿ ಹೆಚ್ಚು ಸಂಭಾವನೆ ಪಡೆಯುವ ಈ ಇಬ್ಬರು ನಟಿಯರು ಸಾಕಷ್ಟು ಆಸ್ತಿ ಹೊಂದಿದ್ದಾರೆ.

ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಅವರ ಪ್ರಸ್ತುತ ನೆಟ್ ವರ್ಥ್ ವಿವರ ಇಲ್ಲಿದೆ.

ಪ್ರಸ್ತುತ ತಮ್ಮ ನಟನಾ ವೃತ್ತಿ ಜೀವನದ ಟಾಪ್‌ನಲ್ಲಿದ್ದಾರೆ ದೀಪಿಕಾ ಪಡುಕೋಣೆ. ಫಿಲ್ಮಿಸಿಯಪ್ಪ ಡಾಟ್ ಕಾಮ್ ಪ್ರಕಾರ, ಪ್ರಸ್ತುತ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ದೀಪಿಕಾ 2021ರಲ್ಲಿ 47 ಮಿಲಿಯನ್ (351 ಕೋಟಿ ರೂಪಾಯಿಗಳು) ಗಳಿಸಿದ್ದಾರೆ.

ಫೋರ್ಬ್ಸ್ ಪ್ರಕಾರ, ದೀಪಿಕಾ ಭಾರತದ ಅತ್ಯಂತ ದುಬಾರಿ ನಟಿ, ಪ್ರಸ್ತುತ ಬ್ರಾಂಡ್ ಮೌಲ್ಯ $50 ಮಿಲಿಯನ್.

ದೀಪಿಕಾ ಆದಾಯದ ಬಹುಪಾಲು ಚಲನಚಿತ್ರಗಳು ಮತ್ತು ಬ್ರಾಂಡ್ ಮೂಲಕ ಬರುತ್ತದೆ. ವರದಿಗಳ ಪ್ರಕಾರ ನಟಿ ಸಿನಿಮಾವೊಂದಕ್ಕೆ 10 ರಿಂದ 12 ಕೋಟಿ ಕೇಳುತ್ತಾರೆ.

ಕಳೆದ ಮೂರು ವರ್ಷಗಳಲ್ಲಿ, ಅವರ ನಿವ್ವಳ ಮೌಲ್ಯವು 40% ಹೆಚ್ಚಾಗಿದೆ. ಪ್ರತಿ ಸಿನಿಮಾಕ್ಕೆ 10 ಕೋಟಿ ರೂ ಸಂಭಾವನೆಯಾದರೆ, ಎಂಡೊರ್ಸ್‌ಮೆಂಟ್‌ಗೆ 8 ಕೋಟಿ ರೂ. ದೀಪಿಕಾ ಅವರ ನಿವ್ವಳ ಮೌಲ್ಯವು ಪ್ರತಿವರ್ಷ 15% ರಷ್ಟು ಬೆಳೆಯುತ್ತಿದೆ.

ದೀಪಿಕಾ ಲೆವಿಸ್, ನೆಸ್ಲೆ ಫ್ರೂಟಾ ವೈಟಲ್ಸ್, ವಿಸ್ಟಾರಾ ಏರ್ಲೈನ್ಸ್, L'Oréal Paris,ಆಕ್ಸಿಸ್ ಬ್ಯಾಂಕ್, ತನೀಶ್ಕ್, ಲಕ್ಸ್, ಜಿಯೋ, ಜಿಲೆಟ್ ವೀನಸ್, ಬ್ರಿಟಾನಿಯಾ ಮತ್ತು ಹಲವಾರು ಬ್ರಾಂಡ್‌ಗಳ ರಾಯಾಭಾರಿಯಾಗಿದ್ದಾರೆ.

ಜೊತೆಗೆ ದೀಪಿಕಾ ಜಿಲೆಟ್ ವಿನಸ್, ಬ್ರಿಟಾನಿಯಾ ಮತ್ತು ಹಲವಾರು ಕಂಪೆನಿಗಳ ಜೊತೆ ಸಹ ಕಾಂಟ್ರ್ಯಾಕ್ಟ್ ಹೊಂದಿದ್ದಾರೆ.

ತನ್ನದೇ ಆದ ಫ್ಯಾಶನ್ ಬ್ರಾಂಡ್ 'ಆಲ್ ಅಬೌಟ್ ಯು' ಅನ್ನು ಸಹ ಹೊಂದಿರುವ ದೀಪಿಕಾ ಮುಂಬೈ ಮತ್ತು ಬೆಂಗಳೂರಿನಲ್ಲಿ ಅನೇಕ ಅಪಾರ್ಟ್ಮೆಂಟ್‌ಗಳನ್ನು ಹೊಂದಿದ್ದಾರೆ. ಜೊತೆಗೆ ಅನೇಕ ಲಕ್ಷುರಿಯಸ್ ಕಾರುಗಳ ಓನರ್ ಪದ್ಮಾವತ್ ನಟಿ.

ಕತ್ರಿನಾ ಕೈಫ್ ಬಾಲಿವುಡ್‌ನ ಇನ್ನೊಬ್ಬ ಪ್ರತಿಭಾವಂತ ಹಾಗೂ ಸುಂದರ ನಟಿ. 2021 ರಲ್ಲಿ ಕತ್ರಿನಾ ಕೈಫ್ ಒಟ್ಟು ನಿವ್ವಳ ಮೌಲ್ಯ 30 ಮಿಲಿಯನ್ ಡಾಲರ್ (210 ಕೋಟಿ). ಅವರ ವಾರ್ಷಿಕ ಗಳಿಕೆ 10 ಕೋಟಿಗಿಂತ ಹೆಚ್ಚು .

ಫಿಲ್ಮಿಸಿಯಪ್ಪ ಡಾಟ್ ಕಾಮ್ ಪ್ರಕಾರ, ಕತ್ರಿನಾ ಬ್ರಾಂಡ್ ಅನುಮೋದನೆಗಳಿಗಾಗಿ 50 ರಿಂದ 60 ಲಕ್ಷ ಶುಲ್ಕ ವಿಧಿಸುತ್ತಾರೆ.

ಲೆನ್ಸ್‌ಕಾರ್ಟ್, ಟ್ರಾಪಿಕಾನಾ, ಎಫ್‌ಬಿಬಿ ಫ್ಯಾಶನ್, ಟೈಟಾನ್ ರಾಗ, ಸ್ಲೈಸ್, ವೀಟ್, ಲಿನೋ ಪೆರೋಸ್, ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್‌ನಂತಹ ಅನೇಕ ಬ್ರಾಂಡ್ ಎಂಡೊರ್ಸ್‌ಮೆಂಟ್ ತನ್ನ ಹೆಸರಿನಲ್ಲಿ ಹೊಂದಿದ್ದಾರೆ ಕೈಫ್.

ಕೈಫ್ ತನ್ನದೇ ಆದ ಬ್ಯೂಟಿ ಪ್ರಾಂಡೆಕ್ಟ್ಸ್ ಬ್ರಾಂಡ್ ಕೇ ಬ್ಯೂಟಿಯನ್ನು ಹೊಂದಿದ್ದಾರೆ. ನಟಿಯ ಮಾಸಿಕ ಆದಾಯ 30 ಲಕ್ಷ ರೂ.

ರಿಯಲ್ ಎಸ್ಟೇಟ್‌ನಲ್ಲೂ ಹೂಡಿಕೆ ಮಾಡಿರುವ ಕತ್ರಿನಾ ಮುಂಬೈನಲ್ಲಿ ಸಾಕಷ್ಟು ಫ್ಲ್ಯಾಟ್‌ಗಳನ್ನು ಹೊಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.