ಕತ್ರೀನಾಗೆ ಕನ್ಫ್ಯೂಸ್ ಮಾಡ್ತಾಳೆ ಈ ಸುಂದರಿ..! ಇಂಟರ್‌ನೆಟ್‌ನಲ್ಲಿ ವೈರಲ್
- ಬಾಲಿವುಡ್ ನಟಿಯ ಲುಕ್ ಎಲೈಕ್ ವೈರಲ್
- ಕತ್ರೀನಾಗೇ ಕನ್ಫ್ಯೂಸ್ ಮಾಡುವಂತಿದ್ದಾಳೆ ಈಕೆ
ನೆಟ್ಟಿಗರು ಬಾಲಿವುಡ್ ತಾರೆಯ ಇನ್ನೊಂದು ಲುಕ್ ಇರೋ ಚೆಲುವೆಯನ್ನು ಕಂಡುಕೊಂಡಿದ್ದಾರೆ. ಇದೇನು ಸಿಕ್ಕಾಪಟ್ಟೆ ಅಚ್ಚರಿ ಅಲ್ಲ, ಕಾರಣ ಬಾಲಿವುಡ್ ಸ್ಟಾರ್‌ಗಳ ಲುಕ್ ಎಲೈಕ್ ಸುದ್ದಿಯಾಗುತ್ತಲೇ ಇರುತ್ತಾರೆ.
ನೆಟ್ಟಿಗರು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೊಫೈಲ್ ಅನ್ನು ಕಂಡುಕೊಂಡ ನಂತರ ಆಕೆ ಬಿ-ಟೌನ್ ದಿವಾ ಕತ್ರಿನಾ ಕೈಫ್‌ನಂತೆಯೇ(Katrina Kaif) ಇದ್ದಾರೆ. ಇಬ್ಬರಿಗೂ ಹೋಲಿಕೆ ಇದೆ ಎಂದು ಗೊತ್ತಾಗುತ್ತಿದ್ದಂತೆ ಅಲೀನಾ ರೈ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದಾರೆ.

ಅಲೀನಾಳ ಇನ್ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ಒಮ್ಮೆ ನೋಡಿದರೆ ಆಕೆಯ ಇತ್ತೀಚಿನ ಚಿತ್ರಗಳು ಮತ್ತು ವಿಡಿಯೋಗಳಲ್ಲಿ ಅವಳು ಕತ್ರಿನಾ ಕೈಫ್ ನಂತೆಯೇ ಇದ್ದಾಳೆ ಎಂಬುದನ್ನು ನಿರಾಕರಿಸುವುದಿಲ್ಲ. ಆಕೆ ನಿಜವಾಗಿಯೂ ಕತ್ರಿನಾ ಅಥವಾ ಇನ್ನೊಂದು ನೋಟವೇ ಎಂದು ಸಂಶಯ ಪಡುವಷ್ಟು ಒಂದೇ ರೀತಿ ಇದ್ದಾರೆ.
ನೆಟ್ಟಿಗರು ಇದು ಕತ್ರಿನಾವಾ? ಎಂದು ಕಮೆಂಟ್ ಮಾಡಿದ್ದಾರೆ. ಈ ಫೋಟೋ ನಿಜಕ್ಕೂ ಗೊಂದಲಮಯವಾಗಿದೆ. ಕತ್ರಿನಾ ಅಥವಾ ಅಲೀನಾ ಎಂದು ಇನ್ನೊಬ್ಬರು ಕೇಳಿದ್ದಾರೆ. ನೀವು ಕತ್ರಿನಾಳ ಕಾರ್ಬನ್ ಕಾಪಿ ಎಂದು ಇನ್ನೊಬ್ಬ ಬಳಕೆದಾರರು ಕಮೆಂಟಿಸಿದ್ದಾರೆ.
ನಟಿ ಸಲ್ಮಾನ್ ಖಾನ್ ಮತ್ತು ದಿಶಾ ಪಟಾನಿ ಜೊತೆಯಾಗಿ ನಟಿಸಿದ ಅಲಿ ಅಬ್ಬಾಸ್ ಜಾಫರ್ ಅವರ 2019 ರ ಭಾರತ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಆಕೆ ಮುಂದೆ ರೋಹಿತ್ ಶೆಟ್ಟಿಯ ಸೂರ್ಯವಂಶಿಯಲ್ಲಿ ಅಕ್ಷಯ್ ಕುಮಾರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.