ಮಗನ ಕಿಸ್ಸಿಂಗ್‌ ಸೀನ್‌ ನೋಡಿದಾಗ ಈ ನಟನ ತಾಯಿ ಆತ್ತಿದ್ದರಂತೆ

First Published Jun 5, 2020, 8:03 PM IST

ಕಾರ್ತಿಕ್ ಆರ್ಯನ್ ಬಾಲಿವುಡ್‌ನ ಯಂಗ್ ಸ್ಟಾರ್‌. ಅಭಿಮಾನಿಗಳ ನೆಚ್ಚಿನ ನಟರಲ್ಲಿ ಒಬ್ಬರೂ ಹೌದು. ಎಂಜಿನಿಯರಿಗ್‌ ಓದುವಾಗಲೇ ಮಾಡೆಲಿಂಗ್‌ನತ್ತ ಮುಖ ಮಾಡಿದವರು ಕಾರ್ತಿಕ್‌. ಹಲವು ಪ್ರಯತ್ನಗಳ ನಂತರ  'ಪ್ಯಾರ್ ಕಾ ಪಂಚನಾಮ' ಚಿತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಹುಡುಗಿಯರ ನಿದ್ರೆ ಕದ್ದಿರುವ ಇವರಿಗೆ ಹಲವು ಬಾರಿ ಹುಡುಗಿಯರು ರಸ್ತೆಯಲ್ಲೇ ಪ್ರಪೋಸ್‌ ಮಾಡಿದ ಘಟನೆಗಳಿವೆ. ಹಳೆಯ ಸಂದರ್ಶನವೊಂದರಲ್ಲಿ, ಅವರ ಸಿನಿಮಾದಲ್ಲಿ ಕಿಸ್ಸಿಂಗ್‌ ಸೀನ್‌ ನೋಡಿದ  ನಂತರ ಕುಟುಂಬದ ಪ್ರತಿಕ್ರಿಯೆ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ ನಟ.