ಮಗನ ಜನನದ ನಂತರ ಸ್ನೇಹಿತರ ಜೊತೆ ಕರೀನಾ ಪಾರ್ಟಿ ಫೋಟೋ ವೈರಲ್‌!

First Published Mar 5, 2021, 12:07 PM IST

ಕೆಲವು ದಿನಗಳ ಹಿಂದೆ ಎರಡನೇ ಮಗುವಿಗೆ ಜನ್ಮ ನೀಡಿದ  ಕರೀನಾ ಕಪೂರ್ ನಿಧಾನವಾಗಿ ತಮ್ಮ ರುಟೀನ್‌ ಲೈಫ್‌ಗೆ ಮರಳುತ್ತಿದ್ದಾರೆ. ಮನೆಯಲ್ಲಿಯೇ ತಮ್ಮ ಫ್ರೆಂಡ್ಸ್‌ ಜೊತೆ ಪಾರ್ಟಿಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ. ಕಳೆದ ರಾತ್ರಿ, ಕರೀನಾ ಸ್ನೇಹಿತರು ಮಗುವಿಗೆ ಸಾಕಷ್ಟು ಉಡುಗೊರೆಗಳೊಂದಿಗೆ ನಟಿಯನ್ನು ಭೇಟಿಯಾದರು. ಡೆಲಿವರಿ ನಂತರ ಮೊದಲ ಫ್ರೆಂಡ್ಸ್‌ ಜೊತೆಯಿರುವ ಬೆಬೋ ಫೋಟೋ ಹೊರಬಂದಿದೆ. ಫೋಟೋದಲ್ಲಿ ಉಬ್ಬಿದ ಕೆನ್ನೆಗಳ ಕರೀನಾರ ಮುಖದಲ್ಲಿ ಡೆಲಿವರಿಯ ನಂತರದ ಗ್ಲೋ ಎದ್ದು ಕಾಣುತ್ತಿದೆ. ಈ ಸಮಯದಲ್ಲಿ ಸೈಫ್ ಅಲಿ ಖಾನ್ ಬಿಳಿ ಪೈಜಾಮಾ ಮತ್ತು ಕುರ್ತಾ ಧರಿಸಿದ್ದಾರೆ. ಈ ಫೋಟೋದಲ್ಲಿ ಕರಣ್ ಜೋಹರ್, ಮಲೈಕಾ ಅರೋರಾ, ಮನೀಶ್ ಮಲ್ಹೋತ್ರಾ, ಅಮೃತ ಅರೋರಾ, ನತಾಶಾ ಪೂನವಾಲ್ಲಾ ಮತ್ತು ಕರಿಷ್ಮಾ ಕಪೂರ್ ಅವರನ್ನು ಕಾಣಬಹುದು.