ಕರೀನಾ ಕಸಿನ್‌ ಆಲಿಯಾ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌!

First Published Apr 7, 2021, 6:20 PM IST

ಬಾಲಿವುಡ್ ಇಂಡಸ್ಟ್ರಿಯಲ್ಲಿ ಕಪೂರ್ ಫ್ಯಾಮಿಲಿಯ ಸುಮಾರು 4 ತಲೆಮಾರುಗಳು ಸಕ್ರಿಯವಾಗಿದೆ. ಪೃಥ್ವಿರಾಜ್ ಕಪೂರ್ ಅವರಿಂದ ಕರೀನಾ ಕಪೂರ್ ಮತ್ತು ರಣಬೀರ್ ಕಪೂರ್ ರವರೆಗೆ ಮುಂದುವರಿಯುತ್ತಿದೆ. ಈ ಕುಟುಂಬ ಕೆಲವು ಮಕ್ಕಳು ಎಂದಿಗೂ ಸಿನಿಮಾದತ್ತ ಮುಖ ಮಾಡಿಲ್ಲ. ಶಶಿ ಕಪೂರ್ ಅವರ ಮೂರು ಮಕ್ಕಳಾದ ಕರಣ್ ಕಪೂರ್, ಕುನಾಲ್ ಕಪೂರ್ ಮತ್ತು ಸಂಜನಾ ಕಪೂರ್‌ ಎಂದಿಗೂ ಸಿನಿಮಾದ ಬಗ್ಗೆ ಯೋಚಿಸಿಲ್ಲ. ಶಶಿ ಅವರ ಹಿರಿಯ ಮಗ ಕರಣ್ ಕಪೂರ್. ಕುಟುಂಬದೊಂದಿಗೆ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅವರ ಪುತ್ರಿ ಅಲಿಯಾ ಕಪೂರ್ ಕಸಿನ್‌ ಕರೀನಾ ಮತ್ತು ಕರಿಷ್ಮಾ ಕಪೂರ್. ಬ್ಯೂಟಿಯಲ್ಲಿ ಯಾರಿಗೂ ಕಡಿಮೆ ಇಲ್ಲ. ಈ ದಿನಗಳಲ್ಲಿ ಆಲಿಯಾ ಕಪೂರ್‌ ಅವರ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.