- Home
- Entertainment
- Cine World
- Happy Birthday: ಬುದ್ಧಿ ಇಲ್ಲದ ಕಪೂರ್ ಹುಡುಗಿ ಹಾರ್ವರ್ಡ್‌ನಲ್ಲಿ..! ಬೇಬೋ ಹೇಳಿದ್ದಿಷ್ಟು
Happy Birthday: ಬುದ್ಧಿ ಇಲ್ಲದ ಕಪೂರ್ ಹುಡುಗಿ ಹಾರ್ವರ್ಡ್‌ನಲ್ಲಿ..! ಬೇಬೋ ಹೇಳಿದ್ದಿಷ್ಟು
ಬಾಲಿವುಡ್‌ನ ಖ್ಯಾತ ನಟಿ ಕರೀನಾ ಕಪೂರ್ ಖಾನ್‌ಗೆ 41 ವರ್ಷ ತುಂಬಿದೆ. ಇಬ್ಬರು ಪುಟ್ಟ ಗಂಡು ಮಕ್ಕಳಿರೋ ಬೇಬೋ ನಟಿಯಾಗಿ ಬಾಲಿವುಡ್‌ನಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ಮಿಂಚಿದ್ದ ಇನ್ನೊಂದು ವಿಷಯ ಇತ್ತು. ಅದೇ ಹಾರ್ವರ್ಡ್ ವಿಶ್ವವಿದ್ಯಾಲಯ

ನಟಿ ಕರೀನಾ ಕಪೂರ್ 41 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 2000 ರಲ್ಲಿ ಜೆಪಿ ದತ್ತಾ ಅವರ ರೆಫ್ಯೂಜಿ ಸಿನಿಮಾದಲ್ಲಿ ನಟಿಸುವ ಮೊದಲು, ಕರೀನಾ ಕಂಪ್ಯೂಟರ್ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು ಎನ್ನುವುದು ನಿಮಗೆ ಗೊತ್ತಾ ? ಕರೀನಾ ಬದುಕಿನ ಪುಸ್ತಕದಲ್ಲಿ ಹಾರ್ವರ್ಡ್‌ನ ಚಂದದ ಚಾಪ್ಟರ್ ಒಂದಿದೆ
ರೆಂಡಿಜೌಸ್ ವಿಥ್ ಸಿಮಿ ಅಗರೆವಾಲ್ ಎಪಿಸೋಡ್‌ನಲ್ಲಿ ಕಾಣಿಸಿಕೊಂಡಾಗ ಕರೀನಾ ತನ್ನ ಜೀವನದ ಆ ಅವಧಿಯ ಬಗ್ಗೆ ಮಾತನಾಡಿದ್ದಾರೆ. ಇದು ಬೇಬೋ ಫ್ಯಾನ್ಸ್‌ಗೆ ತುಂಬಾ ಫನ್ನಿಯಾಗಿ ಹಾಗೂ ಇಂಟ್ರೆಸ್ಟಿಂಗ್ ಆಗಿ ಕಂಡ ವಿಚಾರವೂ ಹೌದು.
ಪ್ರಾಮಾಣಿಕವಾಗಿ, ಹಾರ್ವರ್ಡ್ ಒಳ್ಳೆಯ ಸಮಯ ಮತ್ತು ಫನ್ ಹೊಂದಿತ್ತು ಎಂದು ನಟಿ ಸಿಮಿಗೆ ಹೇಳಿದ್ದಾರೆ. ಕರೀನಾ ತನ್ನ ತಾಯಿ ಬಬಿತಾ ಮತ್ತು ಸಹೋದರಿ ಕರಿಷ್ಮಾ ಕಪೂರ್ ತಾನು ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಮೂರು ತಿಂಗಳು ಹೋಗುವುದನ್ನು ಇಷ್ಟಪಡಲಿಲ್ಲ ಎಂದೂ ಹೇಳಿದ್ದಾರೆ.
ಆದರೆ ಕರೀನಾ ಕೇಳಬೇಕಲ್ಲ. ಬೇಡ ಬೇಡ ಅಂತಿದ್ದಾಗೆ ಲಗೇಜು ಕಟ್ಟಿ ಹೊರಟೇ ಬಿಟ್ಟಿದ್ದರು. ಸಿದ್ಧತೆಗಳು, ಭರ್ತಿ ಮಾಡಿದ ಫಾರ್ಮ್ಸ್, ದಾಖಲೆಗಳ ಜೊತೆ ಮೈಕ್ರೊಕಂಪ್ಯೂಟರ್ಸ್ ಮತ್ತು ಮಾಹಿತಿ ತಂತ್ರಜ್ಞಾನವನ್ನು ಅಧ್ಯಯನ ಮಾಡಲು ಹಾರ್ವರ್ಡ್‌ಗೆ ಹಾರಿದರು.
ಕಪೂರ್ ಕುಟುಂಬಕ್ಕೆ ಕರೀನಾ ಆಸ್ಕರ್ ಪ್ರಶಸ್ತಿಗಿಂತ ಹಾರ್ವರ್ಡ್‌ಗೆ ಹೋಗುವುದು ಹೇಗೆ ದೊಡ್ಡದಾಯಿತು ಎಂಬುದನ್ನು ನಟಿ ತುಂಬಾ ಫನ್ನಿಯಾಗಿ ರಿವೀಲ್ ಮಾಡಿದ್ದಾರೆ.
ಓ ದೇವರೇ! ಇದು ಅತ್ಯಂತ ದೊಡ್ಡ ವಿಷಯವಾಗಿತ್ತು. ಎಲ್ಲರೂ ನನ್ನ ಸೋದರ ಸೊಸೆ, ಅವಳು ನನ್ನ ಅದು, ನನ್ನ ಇದು ಹಾರ್ವರ್ಡ್‌ಗೆ ಹೋಗಿದೆ ಎಂದು ಪ್ರತಿಕ್ರಿಯಿಸುತ್ತಿದ್ದರು.
ಬ್ರೈನ್ ಇಲ್ಲದ ಕಪೂರ್ ಹುಡುಗಿ ಹಾರ್ವರ್ಡ್‌ಗೆ ಹೋಗಿದ್ದಳು. ಅವರೆಲ್ಲರೂ ಅತಿಯಾಗಿ ಪ್ರತಿಕ್ರಿಯಿಸುತ್ತಿದ್ದರು. ನಾನು ಹಾರ್ವರ್ಡ್‌ಗೆ ಹೋಗಿದ್ದೇನೆ ಎಂದು ಯಾರೂ ನಂಬಲು ಸಾಧ್ಯವಿಲ್ಲ. ಅವರೆಲ್ಲ ಇದನ್ನು ಸಂಭ್ರಮದಿಂದ ಸೆಲೆಬ್ರೇಟ್ ಮಾಡಿದ್ದರು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.