14 ವರ್ಷದ ಪ್ರೀತಿಗೆ ಮದುವೆ ಅರ್ಥ, ಹುಡುಗರು ಸಿನಿಮಾ ನಟಿ ಅಭಿನಯಗೆ ಕಂಕಣ ಭಾಗ್ಯ
ಪುನೀತ್ ರಾಜ್‌ಕುಮಾರ್, ಶ್ರೀನಗರ ಕಿಟ್ಟಿ, ಯೋಗೇಶ್ ಅಭಿನಯದ ಹುಡುಗರು ಸಿನಿಮಾ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ನಟಿ ಅಭಿಯನ ಮದುವೆಯಾಗಿದ್ದಾರೆ. ಬಹುಕಾಲದ ಗೆಳೆಯನ ವರಿಸಿದ್ದಾರೆ. ಅಭಿನಯ ಕೈಹಿಡಿದ ವರ ಯಾರು?

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ನಟಿ ಅಭಿನಯ ಇದೀಗ ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದಾರೆ. ಕಳೆದದ 14 ವರ್ಷಗಳಿಂದ ಉದ್ಯಮಿ ವೆಗೆಶನಾ ಕಾರ್ತಿಕ್ ಜೊತೆ ಪ್ರೀತಿಯಲ್ಲಿದ್ದ ಅಭಿನಯ, ಇದೀಗ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿ ಮದುವೆಗೆ ಹಲವ ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು.
ಅಭಿನಯ ಕಳೆದ ಹಲವು ವರ್ಷಗಳಿಂದ ಮದುವೆ ಪ್ರಶ್ನೆ ಎದುರಿಸಿದ್ದಾರೆ. ಈ ವೇಳೆ ಮೌನಕ್ಕೆ ಜಾರಿದ್ದ ಅಭಿನಯ ಕಳೆದ ವರ್ಷ ತಮ್ಮ ಪ್ರೀತಿ ವಿಚಾರ ಬಹಿರಂಗಪಡಿಸಿದ್ದರು. ಶಾಲಾ ದಿನಗಳಲ್ಲಿ ಗೆಳೆಯನಾಗಿದ್ದ ವೆಗೆಶನಾ ಕಾರ್ತಿಕ್ ಬಳಿಕ ಆತ್ಮೀಯರಾಗಿದ್ದರು. ಈ ಆತ್ಮೀಯತೆ ಪ್ರೀತಿಯಾಗಿ ತಿರುಗಿತ್ತು. ಇಬ್ಬರು ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ಅಭಿನಯ ಪ್ರೀತಿ ಕುರಿತು ಹಲವು ಗಾಳಿ ಸುದ್ದಿಗಳು ಹರಿದಾಡಿತ್ತು. ಈ ವೇಳೆ 14 ವರ್ಷಗಳಿಂದ ಒಬ್ಬರ ಜೊತೆ ಸಂಬಂಧದಲ್ಲಿದ್ದೇನೆ ಎಂದು ಹೇಳಿದ್ದರು. ತಮ್ಮನ್ನು ಯಾರೊಂದಿಗೂ ಹೋಲಿಸಬೇಡಿ ಎಂದು ಮನವಿ ಮಾಡಿದ್ದರು.. ತಮ್ಮ ಶಾಲಾ ಗೆಳೆಯ ವೆಗೆಶನಾ ಕಾರ್ತಿಕ್ ಜೊತೆ ಪ್ರೀತಿಯಲ್ಲಿದ್ದೇನೆ ಎಂದಿದ್ದ ಅಭಿನಯ ನಿಶ್ಚಿತಾರ್ಥದ ಫೋಟೋ ಬಿಡುಗಡೆ ಮಾಡಿ ಖಚಿತಪಡಿಸಿದರು.
ವೆಗೆಶನಾ ಕಾರ್ತಿಕ್ ಹೈದರಾಬಾದ್ ಮೂಲದ ಉದ್ಯಮಿ. ಹಲವು ಉದ್ಯಮಗಳಲ್ಲಿ ಕಾರ್ತಿಕ್ ತೊಡಗಿಸಿಕೊಂಡಿಿದ್ದಾರೆ. ಫಾರ್ಮ್, ಹೊಟೆಲ್ ಜೊತೆಗೆ ಹಲವು ಕಂಪನಿಗಳ ಮಾಲೀಕರಾಗಿದ್ದಾರೆ. ಮಾರ್ಚ್ 9 ರಂದು ನಿಶ್ಚಿತಾರ್ಥ ನಡೆದಿತ್ತು. ಏಪ್ರಿಲ್ 18 ರಂದು ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ. ಅಭಿನಯಾ ಅವರ ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ. ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ತಮಿಳು, ತೆಲೆಗು, ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿ ಭಾರಿ ಜನಪ್ರಿಯತ ಪಡೆದಿದ್ದ ಅಭಿನಯ, ಹುಡುಗರು ಸಿನಿಾಮಾ ಮೂಲಕ ಸ್ಯಾಂಡಲ್‌ವುಡ್ ಪ್ರೇಕ್ಷಕರ ಮನ ಗೆದ್ದಿದ್ದರು. ಪುನೀತ್ ರಾಜ್‌ಕುಮಾರ್ ಕುಮಾರ್, ಶ್ರೀಗನರ ಕಿಟ್ಟಿ, ಯೋಗೇಶ್, ರಾಧಿಕಾ ಪಂಡಿತ್ ಸೇರಿದಂತೆ ಪ್ರಮುಖ ತಾರಾಗಣದ ಜೊತೆ ಅಭಿನಯ ಕಾಣಿಸಿಕೊಂಡಿದ್ದರು.
ಮಾಡೆಲ್ ಆಗಿದ್ದ ಅಭಿನಯಾ ಆನಂದ್ 2008ರಲ್ಲಿ ನಟಿಯಾಗಿ ಕರಿಯರ್ ಆರಂಭಿಸಿದ್ದರು. ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶನದ ರವಿತೇಜ ಮತ್ತು ಸಿಯಾ ಗೌತಮ್ ನಟಿಸಿದ್ದ 'ನೇನಿಂತೆ' ಎಂಬ ಸೂಪರ್ ಹಿಟ್ ಚಿತ್ರದ ಮೂಲಕ ಅಭಿನಯ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ತಮಿಳು, ತೆಲೆಗು ಹಾಗೂ ಮಳೆಯಾಳಂ ಸಿನಿಮಾಗಳಲ್ಲಿ ಅಭಿನಯ ಹೆಚ್ಚಿನ ಅವಕಾಶ ಪಡೆದಿದ್ದಾರೆ.