ಕಿಚ್ಚ ಸುದೀಪ್ ಟು, ಚೇತನ್- ಪರರಾಜ್ಯದ ಹುಡುಗಿಯರನ್ನು ಮದುವೆಯಾದ ಕನ್ನಡದ ಸ್ಟಾರ್ ನಟರಿವರು!
ಪ್ರೀತಿ ಯಾವಾಗ, ಎಲ್ಲಿ ಹುಟ್ಟುತ್ತದೆ ಎಂದು ಹೇಳೋಕೆ ಆಗದು, ಅಂತೆಯೇ ಕನ್ನಡದ ಕೆಲ ನಟರು ಪ್ರೀತಿಯಲ್ಲಿ ಬಿದ್ದು, ಈಗ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಅವರು ಯಾರು? ಯಾರು?

ಕನ್ನಡದ ಈ ಸ್ಟಾರ್ ನಟರು ಬೇರೆ ಭಾಷೆಯ ಮಹಿಳೆಯರನ್ನು ಮದುವೆಯಾಗಿದ್ದಾರೆ. ಈ ಸ್ಟಾರ್ ಪತ್ನಿಯರು ಕನ್ನಡ ಕಲಿತು ಮಾತನಾಡೋದನ್ನು ನೋಡಿದರೆ ಪಕ್ಕಾ ಕನ್ನಡದ ಸೊಸೆ ಎಂದು ಅನಿಸುತ್ತಾರೆ!

ನಟಿ ಭಾವನಾ ಅವರು ಮಲಯಾಳಂನವರು. ಕನ್ನಡ ಸಿನಿಮಾ ನಿರ್ಮಾಪಕ ನವೀನ್ ಅವರು ಭಾವನಾರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. 2017ರಲ್ಲಿ ಕೇರಳದಲ್ಲಿ ಈ ಮದುವೆ ನಡೆದಿದೆ.
ಪ್ರಿಯಾಂಕಾ ಉಪೇಂದ್ರ ಅವರು ಪಶ್ಚಿಮ ಬಂಗಾಳದವರು. ʼರಾʼ, ʼH20ʼ ಸಿನಿಮಾದಲ್ಲಿ ಉಪೇಂದ್ರ, ಪ್ರಿಯಾಂಕಾ ಒಟ್ಟಿಗೆ ನಟಿಸಿದ್ದರು. 14 ಡಿಸೆಂಬರ್ 2003 ರಂದು ಈ ಜೋಡಿ ಮದುವೆ ಆಯ್ತು.
ಪ್ರಿಯಾ ರಾಧಾಕೃಷ್ಣನ್ ಅವರು ಮಲಯಾಳಂನವರು. 2001 ಅಕ್ಟೋಬರ್ 18ರಂದು ಪ್ರಿಯಾ ಹಾಗೂ ಸುದೀಪ್ ಅವರು ಮದುವೆಯಾದರು. ಕಿಚ್ಚ ಸುದೀಪ್ ಹೀರೋ ಆಗುವ ಮುನ್ನವೇ ಪ್ರೀತಿಯಲ್ಲಿ ಬಿದ್ದಿದ್ದರು.
ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ವಿಶಾಲ್ ಅವರು ಪ್ರಿಯಾ ಎಂಬುವವರನ್ನು ಮದುವೆಯಾಗಿದ್ದಾರೆ. ಪ್ರಿಯಾ ಮುಂಬೈ ಮೂಲದವರು. ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಇವರಿಗೆ 2022ರಲ್ಲಿ ಮಗ ಜನಿಸಿದ್ದಾನೆ.
ನಟಿ ಭಾವನಾ ಅವರು ಮಲಯಾಳಂನವರು. ಕನ್ನಡ ಸಿನಿಮಾ ನಿರ್ಮಾಪಕ ನವೀನ್ ಅವರು ಭಾವನಾರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. 2017ರಲ್ಲಿ ಕೇರಳದಲ್ಲಿ ಈ ಮದುವೆ ನಡೆದಿದೆ.