- Home
- Entertainment
- Cine World
- ಬಾಲಿವುಡ್'ತ್ರಿವಳಿ ಖಾನ್'ಗಳ ಜೊತೆ ಸಿನಿಮಾ ಮಾಡದಿರಲು ಕಾರಣ ಬಿಚ್ಚಿಟ್ಟ ಕಂಗನಾ ರಣಾವತ್!
ಬಾಲಿವುಡ್'ತ್ರಿವಳಿ ಖಾನ್'ಗಳ ಜೊತೆ ಸಿನಿಮಾ ಮಾಡದಿರಲು ಕಾರಣ ಬಿಚ್ಚಿಟ್ಟ ಕಂಗನಾ ರಣಾವತ್!
ಕಂಗನಾ ರಣಾವತ್ 'ಎಮರ್ಜೆನ್ಸಿ' ಸಿನಿಮಾ ಪ್ರಮೋಷನ್ ಸಂದರ್ಭದಲ್ಲಿ ಸಲ್ಮಾನ್, ಶಾರುಖ್ ಹಾಗೂ ಅಮೀರ್ ತ್ರಿವಳಿ ಖಾನ್‌ಗಳ ಜೊತೆ ಸಿನಿಮಾ ಮಾಡದಿರಲು ಕಾರಣ ಬಹಿರಂಗಪಡಿಸಿದ್ದಾರೆ. ಮಹಿಳಾ ಪಾತ್ರಗಳ ಸೀಮಿತ ಚಿತ್ರಣ ಹಾಗೂ 'ಪದ್ಮಾವತ್' ಆಫರ್ ಬಗ್ಗೆಯೂ ಮಾತನಾಡಿದ್ದಾರೆ.

ಕಂಗನಾ ರಣಾವತ್ ಈಗ ತಮ್ಮ 'ಎಮರ್ಜೆನ್ಸಿ' ಸಿನಿಮಾ ಬಗ್ಗೆ ಮಾತನಾಡುತ್ತಾ, ಈ ಚಿತ್ರದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಪಾತ್ರಕ್ಕೆ ಭಾರೀ ಮೆಚ್ಚುಗೆ ಸಿಕ್ತಿದೆ. ಕಂಗನಾ ಸಿನಿಮಾ ಗೆಲ್ಲಿಸೋಕೆ ಏನೇನೋ ಮಾಡ್ತಿದ್ದಾರೆ. ಸಿನಿಮಾ ಪ್ರಮೋಷನ್‌ಗಾಗಿ ಸಂದರ್ಶನಗಳನ್ನು ಕೊಡ್ತಾ, ಕೆಲವು ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಕಂಗನಾ ಯಾವ ಖಾನ್ ಸೂಪರ್‌ಸ್ಟಾರ್ ಜೊತೆಗೂ ಸಿನಿಮಾ ಮಾಡಿಲ್ಲ. ಇದಕ್ಕೆ ಕಾರಣವನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರು ದೀಪಿಕಾ ಪಡುಕೋಣೆ ನಟಿಸಿದ್ದ 'ಪದ್ಮಾವತ್' ಚಿತ್ರವನ್ನು ತಮಗೆ ಆಫರ್ ಮಾಡಿದ್ದರು ಅಂತಲೂ ಹೇಳಿದ್ದಾರೆ.
ಖಾನ್‌ಗಳ ಜೊತೆ ಸಿನಿಮಾ ಮಾಡದಿರಲು ಕಂಗನಾ ಕೊಟ್ಟ ಕಾರಣ: ಅಜಿತ್ ಭಾರತಿ ಅವರಿಗೆ ನೀಡಿದ ಸಂದರ್ಶನದಲ್ಲಿ ಕಂಗನಾ ಅವರು, ಸಿನಿಮಾಗಳಲ್ಲಿ ಮಹಿಳೆಯರಿಗೆ ಸಿಗುವ ಪಾತ್ರಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 'ದೊಡ್ಡ ಸಿನಿಮಾಗಳಲ್ಲಿ ನಟಿಯರ ಪಾತ್ರಗಳು ತುಂಬಾ ಚಿಕ್ಕದಾಗಿರುತ್ತವೆ. ನನಗೆ ಅಂತಹ ಅನೇಕ ಆಫರ್‌ಗಳು ಬಂದಿವೆ. ಖಾನ್‌ಗಳಿಂದಲೂ (ಸಲ್ಮಾನ್ ಖಾನ್, ಆಮೀರ್ ಖಾನ್ ಮತ್ತು ಶಾರುಖ್ ಖಾನ್) ಬಂದಿವೆ. ಆದರೆ, ನನ್ನ ಪಾತ್ರ ಕೇವಲ 10-15 ನಿಮಿಷಗಳದ್ದಾಗಿತ್ತು. ಇದು ನನಗೆ ಹಾಗೂ ನನ್ನ ನಟನಾ ಕೌಶಲ್ಯಕ್ಕೆ ತೀವ್ರ ಅವಮಾನಕರ ಅನಿಸಿತು. ಅಂತಹ ಸಿನಿಮಾಗಳು ಮಹಿಳೆಯರನ್ನು ಸರಿಯಾಗಿ ತೋರಿಸುವುದಿಲ್ಲ.' ಹಾಗಾಗಿಯೇ ಅವರ ಸಿನಿಮಾಗಳಿಂದ ನಾನು ಅಂತರ ಕಾಯ್ದುಕೊಂಡಿದ್ದಾಗಿ ತಿಳಿಸಿದ್ದಾರೆ.
ಪದ್ಮಾವತ್' ಆಫರ್ ನನಗೇ ಬಂದಿತ್ತು:
ಸಂಜಯ್ ಲೀಲಾ ಬನ್ಸಾಲಿ ಹೆಸರು ಹೇಳದೆ, ಸ್ಟಾರ್ ನಿರ್ದೇಶಕರೊಬ್ಬರು ವೇಶ್ಯೆಯರ ಬಗ್ಗೆ 'ಹೀರಾ ಮಂಡಿ' ಮತ್ತು 'ಬಾಜಿರಾವ್ ಮಸ್ತಾನಿ' ಸಿನಿಮಾ ಮಾಡಿದ್ದಾರೆ. ಮಹಿಳೆಯರಿಗೆ ತೋರಿಸಲು ಇನ್ನೂ ಬಹಳಷ್ಟು ಪಾತ್ರಗಳಿವೆ. ನಾನು ಈ ವೃತ್ತಿಯ ಜನರನ್ನು ಗೌರವಿಸುತ್ತೇನೆ. ನಾನು 'ರಜ್ಜೋ'ದಲ್ಲಿ ವೇಶ್ಯೆಯ ಪಾತ್ರ ಮಾಡಿದ್ದೇನೆ. ಆದರೆ, ಸೀಮಿತ ಚಿತ್ರಣ ಬೇಸರ ತರಿಸುತ್ತದೆ.
ನನಗೆ 'ಪದ್ಮಾವತ್' ಸಿನಿಮಾದ ಆಫರ್ ಮಾಡಿದಾಗ, ನಾನು ಸ್ಕ್ರಿಪ್ಟ್ ಕೇಳಿದೆ. ಅವರು 'ನಾನು ಸ್ಕ್ರಿಪ್ಟ್ ಕೊಡಲ್ಲ' ಎಂದುಬಿಟ್ಟರು. ನನ್ನ ಪಾತ್ರದ ಬಗ್ಗೆ ಕೇಳಿದಾಗ, 'ಇದು ಕನ್ನಡಿಯಲ್ಲಿ ಹೀರೋ-ಹೀರೋಯಿನ್ ಸಿದ್ಧರಾಗುವುದನ್ನು ನೋಡುವ ನೋವಿನ ಬಗ್ಗೆ' ಎಂದು ಒದು ಸಾಲಿನಲ್ಲಿ ಹೇಳಿದರು ಎಂಬುದರ ಬಗ್ಗೆ ಕಂಗನಾ ಹೇಳಿಕೊಂಡಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಅವರ'ಪದ್ಮಾವತ್' ಸಿನಿಮಾದ ಪಾತ್ರದ ಬಗ್ಗೆ ಮಾತನಾಡಿ, ದೀಪಿಗಾ ಈ ಪಾತ್ರಕ್ಕಾಗಿ ತು ಹೆಚ್ಚಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ. 'ನಾನು ಯಾರದೇ ರಹಸ್ಯವನ್ನೂ ಬಯಲು ಮಾಡಲು ಬಯಸುವುದಿಲ್ಲ. ಆದರೆ ನಾನು ಅಂತಹ ನಿರ್ದೇಶಕರ ಜೊತೆ ಕೆಲಸ ಮಾಡಬೇಕೆ? ಎಂದು ಸಂದರ್ಶಕರನ್ನು ಪ್ರಶ್ನಿಸಿದ್ದಾರೆ.
'ಎಮರ್ಜೆನ್ಸಿ' ಬಾಕ್ಸ್ ಆಫೀಸ್ ದಾಖಲೆ ಹೇಗಿದೆ?
ಕಂಗನಾ ನಿರ್ದೇಶನದ ಹಾಗೂ ಅವರೇ ನಟಿಸಿರುವ 'ಎಮರ್ಜೆನ್ಸಿ' ಜನವರಿ 17 ರಂದು ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ದೇಶದಾದ್ಯಂತ ಕೇವಲ 3 ದಿನಗಳಲ್ಲಿ 10.35 ಕೋಟಿ ರೂ. ಮತ್ತು ವಿಶ್ವಾದ್ಯಂತ 12.30 ಕೋಟಿ ರೂ. ಗಳಿಸಿದೆ. ಈ ಚಿತ್ರದಲ್ಲಿ ಅನುಪಮ್ ಖೇರ್, ಸತೀಶ್ ಕೌಶಿಕ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್ ಮತ್ತು ವಿಶಾಕ್ ನಾಯರ್ ಕೂಡ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.