ವೀರ ಸಾವರ್ಕರ್ ಇದ್ದ ಸೆಲ್‌ಗೆ ಭೇಟಿ ನೀಡಿ 'ಸತ್ಯ' ಹೇಳಿದ ಕಂಗನಾ!
ಅಂಡಮಾನ್(ಅ. 27) ರಾಷ್ಟ್ರ ಪ್ರಶಸ್ತಿ (National Film Award)ಸ್ವೀಕಾರ ಮಾಡಿರುವ ನಟಿ ಕಂಗನಾ ರಣಾವತ್ (Kangana Ranaut) ಅಂಡಮಾನ್ ನಲ್ಲಿದ್ದಾರೆ. ವೀರ ಸಾವರ್ಕರ್ ( Veer Savarkar) ಇದ್ದ ಸೆಲ್ ಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.

ವೀರ ಸಾವರ್ಕರ್ ಅವರನ್ನು ಬ್ರಿಟಿಷರು ಬಂಧಿಸಿ ಇಟ್ಟಿದ್ದ ಸೆಲ್ ಗೆ ಭೇಟಿ ನೀಡಿದ ಕಂಗನಾ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ.
ಮಾನವೀಯತೆ ಎನ್ನುವುದು ಸತ್ತೇ ಹೋಗಿದ್ದ ಕಾಲದಲ್ಲಿ ಸಾವರ್ಕರ್ ಎಂಬ ಚೇತನದಿಂದ ಮಾನವೀಯತೆಗೆ ಹೊಸ ಅರ್ಥ ಸಿಕ್ಕಿತು,. ಅವರ ಕಣ್ಣಿನ ದೃಷ್ಟಿಯಿಂದಲೇ ಕ್ರೂರತ್ವದ ನಾಶ ಆರಂಭವಾಯಿತು ಎಂದು ಕಂಗನಾ ಹೇಳಿದ್ದಾರೆ.
ಈ ನಡುಗಡ್ಡೆಯಲ್ಲಿ ಕಾಲಾಪಾನಿ ಶಕ್ಷೆ ಅನುಭವಿಸಬೇಕಿದ್ದರೆ ಅವರ ಎದೆಯಲ್ಲಿ ಎಂಥ ಶಕ್ತಿ ಮನೆಮಾಡಿತ್ತು? ಎಂದು ಪ್ರಶ್ನೆ ಕೇಳುತ್ತಲೇ ವೀರ ಸಾವರ್ಕರ್ ಅವರನ್ನು ಸ್ಮರಿಸಿದ್ದಾರೆ.'
ಈ ಸೆಲ್ ಸ್ವಾತಂತ್ರ್ಯದ ನಿಜವಾದ ಕತೆಯನ್ನು ಹೇಳುತ್ತದೆ. ಪಠ್ಯ ಪುಸ್ತಕಗಳು ತಿಳಿಸದ ಸಂಗತಿಯನ್ನು, ಹೋರಾಟವನ್ನು ನಮ್ಮ ಮುಂದೆ ತೆರೆದಿರಿಸುತ್ತದೆ ಎಂದು ಕಂಗನಾ ಹೇಳಿದ್ದಾರೆ.
ಕಂಗನಾ ರಣಾವತ್ ವಿವಾದಿತ ಹೇಳಿಕೆಗಳಿಂದಲೂ ಕೆಲವೊಮ್ಮೆ ಸುದ್ದಿ ಮಾಡುತ್ತಾರೆ. ಬೋಲ್ಡ್ ಅವತಾರದಲ್ಲಿಯೂ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಾರೆ.
ರಾಷ್ಟ್ರ ಪ್ರಶಸ್ತಿ ಸ್ವೀಕಾರ ಮಾಡಿರುವ ನಟಿ ಕಂಗನಾ ರಣಾವತ್ ಅಂಡಮಾನ್ ನಲ್ಲಿದ್ದಾರೆ. ವೀರ ಸಾವರ್ಕರ್ ಇದ್ದ ಸೆಲ್ ಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.