- Home
- Entertainment
- Cine World
- ತನ್ನನ್ನು ಅಮಿತಾಬ್ ಬಚ್ಚನ್‌ಗೆ ಹೋಲಿಸಿಕೊಂಡ ಕಂಗನಾ ರಣಾವತ್; ಇದ್ಯಾಕೋ ಅತಿಯಾಯ್ತು ಅಂದ್ರು ನೆಟಿಜನ್ಸ್
ತನ್ನನ್ನು ಅಮಿತಾಬ್ ಬಚ್ಚನ್‌ಗೆ ಹೋಲಿಸಿಕೊಂಡ ಕಂಗನಾ ರಣಾವತ್; ಇದ್ಯಾಕೋ ಅತಿಯಾಯ್ತು ಅಂದ್ರು ನೆಟಿಜನ್ಸ್
ಕಂಗನಾ ರಣಾವತ್ ಉತ್ತಮ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಬಿಜೆಪಿ ಅಭ್ಯರ್ಥಿಯಾಗಿರುವ ನಟಿ ಇತ್ತೀಚಿಗೆ ತನ್ನ ಭಾಷಣದಲ್ಲಿ ತನ್ನನ್ನು ಅಮಿತಾಬ್ ಬಚ್ಚನ್‌ಗೆ ಹೋಲಿಸಿಕೊಂಡಿರುವುದು ಟ್ರೋಲ್ ಆಗುತ್ತಿದೆ.

ನಟಿ ಕಂಗನಾ ರಣಾವತ್ ಬಾಲಿವುಡ್‌ನಲ್ಲಿ ಸದಾ ಬೋಲ್ಡ್ ಹೇಳಿಕೆಗಳನ್ನು ನೀಡುತ್ತಾ, ನೆಪೋಟಿಸಂ ವಿರುದ್ಧ ಕಿಡಿ ಕಾರುತ್ತಾ ಸುದ್ದಿಯಲ್ಲಿರುತ್ತಾರೆ.
ಇದೀಗ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಭಾಗವಹಿಸುತ್ತಿರುವ ಕಂಗನಾ, ತಮ್ಮನ್ನು ತಾವು ಅಮಿತಾಬ್ ಬಚ್ಚನ್‌ಗೆ ಹೋಲಿಸಿಕೊಂಡು ರಾಜಕೀಯರಂಗದಲ್ಲೂ ಸುದ್ದಿಯಾಗಿದ್ದಾರೆ.
ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವ ನಟಿ ವಿಪರೀತ ಹುರುಪಿನಲ್ಲಿದ್ದಾರೆ. ಅವರ ಭಾಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಚಿತ್ರರಂಗದಲ್ಲಿ ತನ್ನ ಪ್ರಭಾವ ಮತ್ತು ಸ್ಥಾನಮಾನವನ್ನು ಅಮಿತಾಬ್ ಬಚ್ಚನ್‌ಗೆ ಹೋಲಿಸಿದ ನಂತರ ಅವರ ಭಾಷಣವು ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಚರ್ಚೆಗಳನ್ನು ಹುಟ್ಟುಹಾಕಿದೆ.
ತಮ್ಮ ಭಾಷಣದ ವೀಡಿಯೋ ಕ್ಲಿಪ್‌ನಲ್ಲಿ ಕಂಗನಾ, 'ನಾನು ರಾಜಸ್ಥಾನಕ್ಕೆ ಹೋಗಲಿ, ಪಶ್ಚಿಮ ಬಂಗಾಳಕ್ಕೆ ಹೋಗಲಿ, ದೆಹಲಿಗೆ ಹೋಗಲಿ, ಮಣಿಪುರಕ್ಕೆ ಹೋಗಲಿ ನನಗೆ ಅಪಾರ ಗೌರವ ಪ್ರೀತಿ ನೀಡುತ್ತಿದ್ದಾರೆ' ಎಂದಿದ್ದಾರೆ.
ಮುಂದುವರಿದು, 'ಅಮಿತಾಬ್ ಬಚ್ಚನ್ ನಂತರ, ಇಂದು ನನಗೆ ಸಿಗುವಷ್ಟು ಪ್ರೀತಿ, ಗೌರವವನ್ನು ಇನ್ಯಾರೂ ಪಡೆಯುತ್ತಿಲ್ಲ' ಎಂದು ಹೇಳಿದ್ದಾರೆ.
ಕಂಗನಾ ಈ ಮಾತು ಹಲವರ ಹುಬ್ಬೇರಿಸಿದೆ. ಜನರು, ಇದ್ಯಾಕೋ ಅತಿಯಾಯ್ತು, ಹೋದಲ್ಲೆಲ್ಲ ಜನ ಸೇರುವುದು ಕಂಡು ನಟಿಗೆ ತಲೆ ತಿರುಗಿದಂತಿದೆ ಎನ್ನುತ್ತಿದ್ದಾರೆ.
'ಬಿಜೆಪಿ ಬೆಂಬಲಿಗರು ಕೂಡ ಇವರ ಅಸಂಬದ್ಧತೆಯನ್ನು ಪದೇ ಪದೇ ಕೇಳಿದ ನಂತರ ಪ್ರತಿಪಕ್ಷದ ವಿಕ್ರಮಾದಿತ್ಯ ಅವರನ್ನು ಆಯ್ಕೆ ಮಾಡುತ್ತಾರೆ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
'ಈ ಮಾತನ್ನು ಕೇಳಿ ಬಾಲಿವುಡ್‌ನ ಖಾನ್ ತ್ರಯರು ಮೂಲೆಯಲ್ಲಿ ಮುಸಿಮುಸಿ ನಗುತ್ತಿದ್ದಾರೆ' ಎಂದು ಮತ್ತೊಬ್ಬ ಸೋಷ್ಯಲ್ ಮೀಡಿಯಾ ಬಳಕೆದಾರರು ಬರೆದಿದ್ದಾರೆ.
ಕೆಲಸದ ಮುಂಭಾಗದಲ್ಲಿ, ಕಂಗನಾ ಅವರು ಎಮರ್ಜೆನ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅವರು ಭಾರತದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಪಾತ್ರವನ್ನು ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.