ಕಾಜೋಲ್ - ಗೋವಿಂದ: ಸರ್‌ನೇಮ್ ಬಳಸದ ಬಾಲಿವಡ್ ಸ್ಟಾರ್ಸ್!
First Published Dec 22, 2020, 4:51 PM IST
ಬಾಲಿವುಡ್‌ನ ಹೆಚ್ಚಿನ ನಟನಟಿಯರು ತಮ್ಮ ಹೆಸರಿನ ಜೊತೆ ಸರ್‌ನೇಮ್ ಬಳಸುತ್ತಾರೆ. ಆದರೆ ಕೆಲವು ಸ್ಟಾರ್ಸ್ ತಮ್ಮ ಸರ್‌ನೇಮ್ ಅನ್ನು ಎಂದಿಗೂ ಉಪಯೋಗಿಸುವುದಿಲ್ಲ. ಈ ಪಟ್ಟಿಯಲ್ಲಿ ಕಾಜೋಲ್‌ನಿಂದ ಹಿಡಿದು ರಣವೀರ್‌ಸಿಂಗ್ ವರೆಗೆ ಹಲವು ಪ್ರಮುಖ ನಟ ನಟಿಯರಿದ್ದಾರೆ. ಯಾರು ತಮ್ಮ ಸರ್‌ನೇಮ್ ಎಂದಿಗೂ ಬಳಸುವುದಿಲ್ಲ ಎಂದು ನೋಡೋಣ.

ಬಾಲಿವುಡ್ ನಟಿ ಕಾಜೋಲ್ ಸರ್ ನೇಮ್ ಮುಖರ್ಜಿ. ಮದುವೆಯ ನಂತರ, ಅವರು ಕಾಜೋಲ್ ದೇವಗನ್ ಆದರು. ಆದರೂ ಅವರು ಕೇವಲ ಕಾಜೋಲ್ ಎಂಬ ಹೆಸರಿನಿಂದ ಮಾತ್ರ ಫೇಮಸ್. ಅವರ ಹೆತ್ತವರಿಂದ ಬೇರ್ಪಟ್ಟ ನಂತರ ಕಾಜೋಲ್ ತನ್ನ ಉಪನಾಮವನ್ನು ತೆಗೆದುಹಾಕಿದ್ದರೆಂದು ಹೇಳಲಾಗುತ್ತದೆ.

ರೇಖಾ ಅವರ ನಿಜವಾದ ಹೆಸರು ಭನುರೇಖಾ ಗಣೇಶನ್. ತಮ್ಮ ಹೆಸರು ಶಾರ್ಟ್ ಮಾಡಿದ್ದಲ್ಲದೆ ಎಂದಿಗೂ ಸರ್‌ನೇಮ್ ಬಳಿಸಿದ ಉದಾಹರಣೆ ಇಲ್ಲ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?