ಹಳದಿ ಡ್ರೆಸ್ಸಲ್ಲಿ ಥೇಟ್ ಸೂರ್ಯಕಾಂತಿ ತರ ಮಿಂಚ್ತಾ ಇದ್ದಾರೆ ಕಾಜಲ್ ಅಗರ್ವಾಲ್!
ಬಾಲಿವುಡ್ ಹಾಗೂ ದಕ್ಷಿಣ ಭಾರತೀಯ ನಟಿ ಕಾಜಲ್ ಅಗರ್ವಾಲ್ ನಟನೆಯ ತಮ್ಮ ಲುಕ್ ಹಾಗೂ ಸ್ಟೈಲಿಗೂ ಫೇಮಸ್. ಸಿಂಘಮ್ ನಟಿ ತಮ್ಮ ಇತ್ತೀಚಿನ ಫೋಟೋಶೂಟ್‌ನ ಕ್ಯಾಂಡಿಡ್ ಫೋಟೋವನ್ನು ಹಂಚಿಕೊಳ್ಳಲು ಇನ್ಸ್ಟಾಗ್ರಾಮ್ ಮೋರೆ ಹೋಗಿದ್ದಾರೆ. ಹಳದಿ ಡ್ರೆಸ್ ಧರಸಿರುವ ಕಜಲ್ ಸೇಮ್ ಸೂರ್ಯಕಾಂತಿ ಹೂವನ್ನು ಹೋಲುತ್ತಿದ್ದಾರೆ. ನಟಿಯ ಈ ಫೋಟೋವನ್ನು ಫ್ಯಾನ್ಸ್ ಸಖತ್ ಲೈಕ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಕಾಜಲ್ ಇತ್ತೀಚೆಗೆ ಅವರ ದೈನಂದಿನ ಜೀವನದ ಸಣ್ಣ ನೋಟಗಳನ್ನು ಮತ್ತು ಅವರ ಫೋಟೋಶೂಟ್‌ಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕಾಜಲ್ ಅಗರ್ವಾಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಫೀಡ್‌ನಲ್ಲಿ ಹಂಚಿಕೊಂಡ ಈ ಫೋಟೋದಲ್ಲಿ ಹಳದಿ ಉಡುಪಿನಲ್ಲಿ ಸೂರ್ಯಕಾಂತಿಯಂತೆ ಸುಂದರವಾಗಿ ಕಾಣುತ್ತಿದ್ದಾರೆ.
ಕಾಜಲ್ ಸಂಪೂರ್ಣ ಲೆಮನ್ ಎಲ್ಲೋ ಬಣ್ಣದ ಉಡುಪನ್ನು ಧರಿಸಿ ದೊಡ್ಡ ಗೋಲ್ಡನ್ ಕಲರ್‌ನ ಕಿವಿಯೋಲೆ ಫೇರ್ ಮಾಡಿಕೊಂಡಿದ್ದಾರೆ ಹಾಗೂ ಕೂದಲನ್ನು ಒಪನ್ ಆಗಿ ಬಿಟ್ಟಿದ್ದಾರೆ. ನಟಿ ಈ ಫೋಟೋದಲ್ಲಿ ಬಿಸಿಲಿನ ಕಿರಣದಂತೆ ಕಾಣುತ್ತಿದ್ದರು.
ಸೀ ಗ್ರೀನ್ ಲೈನರ್ ಮತ್ತು ಪರ್ಪಲ್ ಕಲರ್ ಐಷಾಡೋ ಜೊತೆ ನ್ಯೂಡ್ ಲಿಪ್‌ಸ್ಟಿಕ್‌ನ ಮಿನಿಮಮ್ ಮೇಕಪ್‌ನಲ್ಲಿ ಮಿಂಚುತ್ತಿದ್ದಾರೆ ಇತ್ತೀಚೆಗೆ ಸಪ್ತಪದಿ ತುಳಿ ನಟಿ.
ದಕ್ಷಿಣ ಸೂಪರ್ ಸ್ಟಾರ್ ಮತ್ತು ಬಾಲಿವುಡ್ ದಿವಾ ಕಾಜಲ್ ಅಗರ್ವಾಲ್ ಈ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಕಾಜಲ್ ತನ್ನ ಬಾಲ್ಯದ ಸ್ನೇಹಿತ ಗೌತಮ್ ಕಿಚ್ಲು ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಕೆಲವು ಕ್ಲೋಸ್ ಫ್ಯಾಮಿಲಿ ಸದಸ್ಯರು ಮತ್ತು ಸ್ನೇಹಿತರ ಸಮ್ಮಖದಲ್ಲಿ ಖಾಸಗಿ ಫಂಕ್ಷನ್‌ನಲ್ಲಿ ನೆಡೆಯಿತು ಇವರ ಮದುವೆ.
ಕಾಜಲ್ ಶ್ರೀಘ್ರದಲ್ಲೇ, ಲೈವ್ ಪ್ಲಾಟ್‌ಫಾರ್ಮ್, ಹಾರರ್ ಫ್ಲಿಕ್‌ನೊಂದಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ .
ಪ್ರಸ್ತುತ ಈ ನಟಿ ರಕುಲ್ ಪ್ರೀತ್ ಸಿಂಗ್, ಕಮಲ್ ಹಾಸನ್, ನೆಡುಮುಡಿ ವೇಣು ಮತ್ತು ಇತರರು ನಟಿಸಿರುವ ಬಹು ನಿರೀಕ್ಷಿತ ಚಿತ್ರ ಇಂಡಿಯನ್ 2 ಚಿತ್ರೀಕರಣದಲ್ಲಿದ್ದಾರೆ.