ಕಬೀರ್‌ಬೇಡಿ 4ನೇ ಪತ್ನಿ ನಟನ ಮಗಳಿಗಿಂತ 5 ವರ್ಷ ಕಿರಿಯವಳು!
ಬಾಲಿವುಡ್ ನಟ ಕಬೀರ್ ಬೇಡಿ ಅವರಿಗೆ 75 ವರ್ಷ. ಜನವರಿ 16, 1946 ರಂದು ಲಾಹೋರ್ (ಪಾಕಿಸ್ತಾನ) ದಲ್ಲಿ ಜನಿಸಿದ ಕಬೀರ್ ಬೇಡಿ ನಟ ಅಫ್ತಾಬ್ ಶಿವದಾಸಾನಿಯ ಸಂಬಂಧಿ ಕೂಡ ಹೌದು. ವಾಸ್ತವವಾಗಿ, ಕಬೀರ್ ಬೇಡಿ ಅವರ ನಾಲ್ಕನೆಯ ಪತ್ನಿ ಪರ್ವೀನ್ ದೋಸಾಂಜ್ ಮತ್ತು ಅಫ್ತಾಬ್ ಪತ್ನಿ ನಿನ್ ದೋಸಾಂಜ್ ಸಹೋದರಿಯರು. ಕಬೀರ್ ಬೇಡಿ ತನ್ನ 70 ನೇ ಹುಟ್ಟುಹಬ್ಬದ ಒಂದು ದಿನದ ಮೊದಲು 29 ವರ್ಷದ ಗೆಳತಿ ಪರ್ವೀನ್ ದೋಸಾಂಜ್ ಅವರನ್ನು 2016 ರಲ್ಲಿ ವಿವಾಹವಾದರು. ಇದು ಕಬೀರ್ ಬೇಡಿ ಅವರ ನಾಲ್ಕನೇ ಮದುವೆ.
ಪರ್ವೀನ್ ದೋಸಾಂಜ್ ಅವರಿಗೆ 45 ವರ್ಷ, ಕಬೀರ್ ಬೇಡಿ ಅವರ ಪುತ್ರಿ ಪೂಜಾ ಬೇಡಿ (50) ಗಿಂತ 5 ವರ್ಷ ಕಿರಿಯರು. ಬ್ರಿಟಿಷ್ ಮೂಲದ ನಟಿ ಮತ್ತು ರೂಪದರ್ಶಿ ಪರ್ವೀನ್ ದೋಸಾಂಜ್ ಅವರು ಕಬೀರ್ ಬೇಡಿ ಮದುವೆಗೆ ಮೊದಲು ಸುಮಾರು 10 ವರ್ಷಗಳ ಕಾಲ ಲೀವ್-ಇನ್ ರಿಲೆಷನ್‌ಶಿಪ್‌ನಲ್ಲಿದ್ದರು.
ಕಬೀರ್ ಬೇಡಿ ಅವರು 1969 ರಲ್ಲಿ ನರ್ತಕಿ ಪ್ರೊತಿಮಾ ಬೇಡಿ ಅವರನ್ನು ಮೊದಲ ಬಾರಿಗೆ ವಿವಾಹವಾದರು. ಮಗಳು ಪೂಜಾ ಬೇಡಿ ಮತ್ತು ಮಗ ಸಿದ್ಧಾರ್ಥ್ ಪ್ರೊತಿಮಾ-ಕಬೀರ್ ಮಕ್ಕಳು. ಈ ಜೋಡಿ ಸುಮಾರು 5 ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು ಮತ್ತು ನಂತರ 1974 ರಲ್ಲಿ ವಿಚ್ಛೇದನ ಪಡೆದರು. ಮಗ ಸಿದ್ಧಾರ್ಥ್ ಅವರ ಆತ್ಮಹತ್ಯೆಯಿಂದ ಕಬೀರ್ ಮತ್ತು ಪ್ರೊತಿಮಾ ಇಬ್ಬರೂ ಆಘಾತಕ್ಕೆ ಒಳಾಗದರು. ಸ್ವಲ್ಪ ಸಮಯದ ನಂತರ, ಪ್ರೊತಿಮಾ ಕೂಡ ಅಪಘಾತದಲ್ಲಿ ಮೃತಪಟ್ಟರು.
ಪ್ರೊತಿಮಾ ಅವರೊಂದಿಗಿನ ಸಂಬಂಧ ಹದಗೆಟ್ಟ ನಂತರ ಕಬೀರ್ ಬೇಡಿ ಅವರು ಪರ್ವೀನ್ ಬಾಬಿ ಜೊತೆ ಆಫೇರ್ ಹೊಂದಿದ್ದರು. ಪರ್ವೀನ್ ಕಬೀರ್ ಜೊತೆ ಹಾಲಿವುಡ್‌ಗೆ ಪ್ರಯಾಣ ಬೆಳೆಸಿದರು, ಆದರೆ ಕಬೀರ್ ಅವರ ಕೆಲಸದಲ್ಲಿ, ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಪರ್ವೀನ್ ಬಾಬಿ ಭಾವಿಸಿದರು. ಸ್ವಲ್ಪ ಸಮಯದ ನಂತರ ಪರ್ವೀನ್ ಬಾಬಿ ಕೂಡ ಕಬೀರ್ ಬೇಡಿಯಿಂದ ಬೇರೆಯಾದರು.
ಪರ್ವೀನ್ ಬಾಬಿಯಿಂದ ಬೇರ್ಪಟ್ಟ ನಂತರ, ಕಬೀರ್ ಬೇಡಿ ಬ್ರಿಟಿಷ್ ಫ್ಯಾಷನ್ ಡಿಸೈನರ್ ಸುಸಾನ್ ಹಂಫ್ರೆಸ್ ಜೊತೆ ಮರುಮದುವೆಯಾದರು. ಸುಸೇನ್ ಮತ್ತು ಕಬೀರ್‌ಗೆ ಆಡಮ್ ಬೇಡಿ ಎಂಬ ಮಗನೂ ಇದ್ದಾನೆ. ಆಡಮ್ ಇಂಟರ್ನ್ಯಾಷನಲ್ ಮಾಡೆಲ್. ಸ್ವಲ್ಪ ಸಮಯದ ನಂತರ ಕಬೀರ್ ಬೇಡಿ ಮತ್ತು ಸುಸಾನ್ ಹಂಫ್ರೆಸ್ ಕೂಡ ಬೇರ್ಪಟ್ಟರು.
ಕಬೀರ್ ಬೇಡಿ 1992 ರಲ್ಲಿ ಟಿವಿ ಮತ್ತು ರೇಡಿಯೋ ನಿರೂಪki ನಿಕ್ಕಿಯನ್ನು ವಿವಾಹವಾದರು. ಸುಮಾರು 13 ವರ್ಷಗಳ ನಂತರ 2005 ರಲ್ಲಿ ವಿಚ್ಚೇದನದಲ್ಲಿ ಕೊನೆಗೊಂಡಿತು ಈ ಸಂಬಂಧ. ಅವರಿಬ್ಬರಿಗೂ ಮಕ್ಕಳಿಲ್ಲ.
ಅಂದಿನಿಂದ ಕಬೀರ್ ಬ್ರಿಟಿಷ್ ಮೂಲದ ನಟಿ ಮತ್ತು ರೂಪದರ್ಶಿ ಪರ್ವೀನ್ ದೋಸಾಂಜ್ ಅವರೊಂದಿಗೆ ಸಂಬಂಧ ಹೊಂದಿದ್ದರು.
ಸುಮಾರು 15 ವರ್ಷಗಳ ಹಿಂದೆ 2005ರಲ್ಲಿ ಕಬೀರ್ ಬೇಡಿ ಲಂಡನ್‌ನಲ್ಲಿ ಮೊದಲ ಬಾರಿಗೆ ಪರ್ವೀನ್‌ರನ್ನು ಭೇಟಿಯಾದರು. ಕಬೀರ್ ಆಗ ಸೆಂಟ್ರಲ್ ಲಂಡನ್‌ನ ಶಾಫ್ಟ್ಸ್‌ಬರಿ ಥಿಯೇಟರ್‌ನಲ್ಲಿ ನಾಟಕವನ್ನು ಮಾಡುತ್ತಿದ್ದರು. ಪರ್ವೀನ್ ಸ್ನೇಹಿತರೊಂದಿಗೆ ಬಂದಿದ್ದರು. ನಂತರ, ಪರ್ವೀನ್ ಕಬೀರ್ ಬೇಡಿ ಕಡೆಗೆ ಆಕರ್ಷಿತರಾದರು .
ತಾನು ಇಂಗ್ಲೆಂಡಿನಲ್ಲಿ ಜನಿಸಿದ್ದೇನೆ, ಆದರೆ ಪಂಜಾಬಿ ಸಿಖ್ ಕುಟುಂಬಕ್ಕೆ ಸೇರಿದವಳು. ನಾನು ಗುರುಮುಖಿಯನ್ನು ಚೆನ್ನಾಗಿ ಓದಬಲ್ಲೆ. ಕಬೀರ್ ಅವರನ್ನು ಪ್ರೀತಿಯಿಂದ 'ಪಂಜಾಬಿ ಸಿಂಹಿಣಿ' ಎಂದು ಕರೆಯುತ್ತಾರೆ ಎಂದು ಅವರು ಎಂದು ಪರ್ವೀನ್ ದೋಸಂಜ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಕಬೀರ್ ಅವರ ಪುತ್ರಿ ಪೂಜಾ ಬೇಡಿ ಅವರ ಮಲತಾಯಿ ಪರ್ವೀನ್ ದೋಸಾಂಜ್ ಜೊತೆ ಸಂಬಂಧ ಉತ್ತಮವಾಗಿಲ್ಲ. ಒಮ್ಮೆ ಪೂಜಾ ಪರ್ವೀನ್‌ಗೆ 'ಮಾಟಗಾತಿ' ಎಂಬ ಪದವನ್ನು ಬಳಸಿದರು.
'ಪ್ರತಿ ಕಥೆಯಲ್ಲಿ ಮಾಟಗಾತಿ ಅಥವಾ ಮಲತಾಯಿ ಇದ್ದಾರೆ. ನನ್ನ ಅಮ್ಮ ಬಂದಳು ' ಎಂದು ಕಬೀರ್ ಮತ್ತು ಪರ್ವೀನ್ ಅವರ ಮದುವೆಯ ನಂತರ ಪೂಜಾ ಟ್ವೀಟ್ ಮಾಡಿದ್ದರು.
ಕಬೀರ್ ಬೇಡಿ ಮತ್ತು ಪರ್ವೀನ್, ನಟ ಅಫ್ತಾಬ್ ಶಿವದಾಸಾನಿ ಮತ್ತು ಅವರ ಪತ್ನಿ ನಿನ್ ದೋಸಾಂಜ್ ಜೊತೆ.