- Home
- Entertainment
- Cine World
- 'ನಿಮ್ಮ ಗಂಡಗಿಂತ ದಳಪತಿ ವಿಜಯ್, ಪ್ರದೀಪ್ ರಂಗನಾಥ್ ಬೆಟರ್' ಎಂದ ನೆಟ್ಟಿಗರಿಗೆ ಜ್ಯೋತಿಕಾ ಕೊಟ್ಟ ತಿರುಗೇಟು ಹೆಂಗಿದೆ ನೋಡಿ!
'ನಿಮ್ಮ ಗಂಡಗಿಂತ ದಳಪತಿ ವಿಜಯ್, ಪ್ರದೀಪ್ ರಂಗನಾಥ್ ಬೆಟರ್' ಎಂದ ನೆಟ್ಟಿಗರಿಗೆ ಜ್ಯೋತಿಕಾ ಕೊಟ್ಟ ತಿರುಗೇಟು ಹೆಂಗಿದೆ ನೋಡಿ!
ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಹೀರೋ ಅಭಿಮಾನಿಗಳು ಮತ್ತೊಬ್ಬ ಹೀರೋ ಟಾರ್ಗೆಟ್ ಮಾಡೋದು, ಕಾಲೆಳೆಯೋದು ಕಾಮನ್. ತೆಲುಗು, ತಮಿಳು ಚಿತ್ರರಂಗಗಳಲ್ಲಿ ಫ್ಯಾನ್ಸ್ ವಾರ್ ಜಾಸ್ತಿ ಇರುತ್ತೆ. ಹೀರೋಗಳನ್ನ ಅಭಿಮಾನಿಗಳು ಹುಚ್ಚರ ತರ ಪ್ರೀತಿಸೋದೇ ಅದಕ್ಕೆ ಕಾರಣ.

ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ಹೀರೋ ಅಭಿಮಾನಿಗಳು ಮತ್ತೊಬ್ಬ ಹೀರೋ ಟಾರ್ಗೆಟ್ ಮಾಡೋದು, ಕಾಲೆಳೆಯೋದು ಕಾಮನ್. ತೆಲುಗು, ತಮಿಳು ಚಿತ್ರರಂಗಗಳಲ್ಲಿ ಫ್ಯಾನ್ಸ್ ವಾರ್ ಜಾಸ್ತಿ ಇರುತ್ತೆ. ಹೀರೋಗಳನ್ನ ಅಭಿಮಾನಿಗಳು ಹುಚ್ಚರ ತರ ಪ್ರೀತಿಸೋದೇ ಅದಕ್ಕೆ ಕಾರಣ. ಆದರೆ ಈಗ ಕೆಲ ನೆಟ್ಟಿಗರು ಹೀರೋ ಸೂರ್ಯನ ಟಾರ್ಗೆಟ್ ಮಾಡಿದ್ದಾರೆ.
ಜ್ಯೋತಿಕಾ
ಸೂರ್ಯ ಯಾವ ವಿವಾದಕ್ಕೂ ತಲೆ ಕೆಡಿಸಿಕೊಳ್ಳದೆ ತನ್ನ ಕೆಲಸ ಮಾಡಿಕೊಂಡು ಹೋಗುವ ಮನುಷ್ಯ. ಸಿನಿಮಾಕ್ಕೋಸ್ಕರ ಸೂರ್ಯ 100% ಡೆಡಿಕೇಶನ್ ಕೊಡ್ತಾನೆ. ಕಂಗುವ ಚಿತ್ರಕ್ಕೋಸ್ಕರ ಸೂರ್ಯ ಮೈ ಮುರಿದುಕೊಂಡು ಕಷ್ಟಪಟ್ಟಿದ್ದಾರೆ. ಆದರೆ ಆ ಸಿನಿಮಾ ನಿರಾಸೆ ಮೂಡಿಸಿತು. ಸದ್ಯಕ್ಕೆ ಸೂರ್ಯ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನೆಟ್ಟಿಗರು ಕೆಲವರು ಸೂರ್ಯ ಮೇಲೆ ನೆಗೆಟಿವ್ ಕಾಮೆಂಟ್ಸ್ ಶುರು ಮಾಡಿದ್ದಾರೆ. ಸೂರ್ಯನ ಮಾತ್ರ ಅಲ್ಲ ಅವರ ಹೆಂಡತಿ ಜ್ಯೋತಿಕಾನ ಕೂಡ ವಿವಾದಕ್ಕೆ ಎಳೆದಿದ್ದಾರೆ.
ಜ್ಯೋತಿಕಾ
ಜ್ಯೋತಿಕಾ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಕೆಲ ನೆಟ್ಟಿಗರು ಕಾಮೆಂಟ್ಸ್ ಮಾಡ್ತಾ.. ನಿಮ್ಮ ಗಂಡನಿಗಿಂತ ದಳಪತಿ ವಿಜಯ್ ತುಂಬಾ ಬೆಟರ್ ಅಂತ ಕಾಮೆಂಟ್ ಹಾಕಿದ್ದಾರೆ. ಇನ್ನೊಬ್ಬ ನೆಟ್ಟಿಗ ನಿಮ್ಮ ಗಂಡನಿಗಿಂತ ಯುವ ಹೀರೋ ಪ್ರದೀಪ್ ರಂಗನಾಥ್ ತುಂಬಾ ಚೆನ್ನಾಗಿ ಆಕ್ಟ್ ಮಾಡ್ತಾನೆ ಅಂತ ಹೇಳಿದ್ದಾನೆ. ಇನ್ನೂ ಕೆಲವರು ಸೂರ್ಯ, ಕಾರ್ತಿ ಗಿಂತ ವಿಜಯ್ ಒಳ್ಳೆ ನಟ ಅಂತ ಕಾಮೆಂಟ್ ಮಾಡಿದ್ದಾರೆ.
ಜ್ಯೋತಿಕಾ
ಅವರ ಕಾಮೆಂಟ್‌ಗಳಿಗೆ ಕೂಲ್ ಆಗಿ ಪ್ರತಿಕ್ರಿಯಿಸಿರುವ ಜ್ಯೋತಿಕಾ, ನಗುಮುಖದ ಎಮೋಜಿಗಳನ್ನು ಪೋಸ್ಟ್ ಮಾಡುವ ಮೂಲಕ ಅದು ನಿಜವೇ? ಬೆದರಿಸುವವರು ಯಾವಾಗಲೂ ಈ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಾರೆ ಎಂದು ಎಲ್ಲರನ್ನೂ ಬಾಯಿ ಮುಚ್ಚಿಸಿದ್ದಾರೆ.