ಮಾವ ಸೊಸೆಯ ಬಾಂಧವ್ಯ‌ ಬಹಿರಂಗ ಪಡಿಸಿದ ಅತ್ತೆ ಜಯಾ ಬಚ್ಚನ್‌

First Published Jun 3, 2020, 7:47 PM IST

ಬಚ್ಚನ್‌ ಕುಟುಂಬ ಎಂದರೆ ಚಿರಪರಿಚಿತ. ಬಾಲಿವುಡ್‌ನ ಪವರ್‌ಫುಲ್‌ ಹಾಗೂ ಫೇಮಸ್‌ ಫ್ಯಾಮಿಲಿ ಅಮಿತಾಬ್ ಬಚ್ಚನ್‌ರದು. ಫ್ಯಾನ್ಸ್‌ಗಳ ಒಂದು ಕಣ್ಣು ಸದಾ ಇವರ ಪರ್ಸನಲ್‌ ಲೈಫ್‌ನ ಆಗುಹೋಗುಗಳ ಮೇಲೆ ಇರುತ್ತವೆ. ಬಾಲಿವುಡ್‌ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಈ ಮನೆತನದ ಸೊಸೆಯಾದ ಮೇಲಂತೂ ಕೇಳುವುದೇ ಬೇಡ. ಒಂದಲ್ಲ ಒಂದು ಘಟನೆ  ಹೆಡ್‌ಲೈನಲ್ಲಿಸ ಜಾಗ ಪಡೆಯುತ್ತಲೇ ಇರುತ್ತದೆ. ಜಯಾ ಬಚ್ಚನ್‌ರ ಹಳೆ ಇಂಟರ್‌ವ್ಯೂವ್‌ವೊಂದು ವೈರಲ್‌ ಆಗಿದೆ. ಜಯಾಜಿ ಅದರಲ್ಲಿ ಪತಿ ಅಮಿತಾಬ್‌ ಮತ್ತು ಸೊಸೆ ಐಶ್ವರ್ಯಾರ ನಡುವಿನ ಸಂಬಂಧದ ಬಗ್ಗೆ ಮಾತಾನಾಡಿದ್ದಾರೆ.