ಬಚ್ಚನ್ ಮದ್ವೆಯಾಗೋದು ಜಯಾ ತಂದೆಗೆ ಇಷ್ಟವೇ ಇರಲಿಲ್ಲವಂತೆ!
75 ವರ್ಷ ವಯಸ್ಸಿನ ಜಯಾ ಬಚ್ಚನ್ (Jaya Bachchan), ಕಳೆದ 50 ವರ್ಷಗಳಿಂದ ಅಮಿತಾಬ್ ಬಚ್ಚನ್ (Amitabh Bachchan) ಅವರನ್ನು ಅವರ ಪತ್ನಿಯಾಗಿ ಬೆಂಬಲಿಸುತ್ತಿದ್ದಾರೆ. ಆದರೆ ಜಯಾ ಅವರ ತಂದೆ ಅಮಿತಾಬ್ ಜೊತೆಗಿನ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ಸಮಯವೊಂದಿತ್ತು . ಇದನ್ನು ಸ್ವತಃ ಜಯಾ ಅವರೇ ಬಹಿರಂಗಪಡಿಸಿದ್ದರು .
ಜಯಾ ತನ್ನ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರ ಪಾಡ್ಕಾಸ್ಟ್ 'ವಾಟ್ ದಿ ಹೆಲ್ ನವ್ಯಾ' ನಲ್ಲಿ ಬಿಗ್ ಬಿ ಜೊತೆಗಿನ ಮದುವೆಯ ನೆನಪುಗಳನ್ನು ಮೆಲುಕು ಹಾಕಿದರು ಮತ್ತು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
'ಜಯಾ ಜೊತೆ ರಜೆ ಮೇಲೆ ಹೋಗಲು ಸಾಧ್ಯವಿಲ್ಲ ಮತ್ತು ಅವಳೊಂದಿಗೆ ರಜೆಯ ಮೇಲೆ ಹೋಗಲು ಬಯಸಿದರೆ, ನೀವು ಅವಳನ್ನು ಮದುವೆಯಾಗಬೇಕಾಗುತ್ತದೆ ಎಂದು ಬಚ್ಚನ್ ಪೋಷಕರು ಹೇಳುತ್ತಿದ್ದರಂತೆ. ನೀನು ಏನು ಮಾಡುತ್ತೀ? ಎಂದು 'ಅಮಿತಾಭ್ ನನಗೆ ಕರೆ ಮಾಡಿ ಹೇಳಿದ್ದರು 'ನಾವು ಈಗಾಗಲೇ ಅಕ್ಟೋಬರ್ನಲ್ಲಿ ಮದುವೆಯಾಗಲು ಯೋಜಿಸಿದ್ದೆವು. ಆದ್ದರಿಂದ ಅದನ್ನು ಜೂನ್ನಲ್ಲಿ ಮಾಡೋಣ ಎಂದೆ,' ಎಂಬ ವಿಷಯವನ್ನು ಜಯಾ ಬಚ್ಚನ್ ಹಂಚಿಕೊಂಡಿದ್ದಾರೆ.
'ಆ ಸಮಯದಲ್ಲಿ ನನ್ನ ಕೆಲಸ ಕಡಿಮೆಯಾದ ಕಾರಣ ನಾವು ಅಕ್ಟೋಬರ್ನಲ್ಲಿ ಮದುವೆಯಾಗಲು ಯೋಜಿಸಿದ್ದೆವು. ನನಗೆ 9 ರಿಂದ 5 ಕೆಲಸ ಮಾಡುವ ಹೆಂಡತಿ ಬೇಡ. ದಯವಿಟ್ಟು ಕೆಲಸ ಮಾಡಿ. ನೀವು ಕೆಲಸ ಮಾಡಿ, ಆದರೆ ಪ್ರತಿದಿನ ಅಲ್ಲ. ನೀವು ನಿಮ್ಮ ಯೋಜನೆಗಳನ್ನು ಆಯ್ಕೆ ಮಾಡಿಕೊಂಡು, ಸೂಕ್ತ ಜನರೊಂದಿಗೆ ಕೆಲಸ ಮಾಡಿ,' ಎಂದು ಅಮಿತಾಬ್ ಮದುವೆಗೂ ಮುನ್ನ ಜಯಾ ಅವರಿಗೆ ಹೇಳಿದ್ದರಂತೆ.
ಅಮಿತಾಭ್ ಬಚ್ಚನ್ ಜೊತೆಗಿನ ಮದುವೆಯ ಬಗ್ಗೆ ತನ್ನ ತಂದೆಗೆ ಸಂತೋಷವಿರಲಿಲ್ಲ ಎಂದು ನವ್ಯಾ ಅವರೊಂದಿಗಿನ ಸಂಭಾಷಣೆಯಲ್ಲಿ ಜಯಾ ಬಹಿರಂಗಪಡಿಸಿದ್ದಾರೆ.
ನೀವು ನನ್ನ ಹೆತ್ತವರೊಂದಿಗೆ ಮಾತನಾಡಬೇಕು ಎಂದು ನಾನು ಅಮಿತಾಬ್ಗೆ ಹೇಳಿದೆ ಅವರು ನನ್ನ ತಂದೆಗೆ ಕಾಲ್ ಮಾಡಿದ್ದರು. ಆದರೆ, ನನ್ನ ತಂದೆಗೆ ಸಂತೋಷವಾಗಿರಲಿಲ್ಲ, ನನ್ನ ತಂದೆ ನಾನು ಅಮಿತಾಭ್ ಅವರನ್ನು ಮದುವೆಯಾವುದು ಎಂದಿಗೂ ಬಯಸರಿಲಿಲ್ಲ ಎಂದು ಜಯಾ ಹೇಳಿದ್ದಾರೆ.
'ನಾನು ನಿನ್ನನ್ನು ಈ ಜಗತ್ತಿಗೆ ಕರೆತಂದಿರುವುದು ಕೇವಲ ಓದಲು, ಮದುವೆಯಾಗಿ, ನೆಲೆಸಲು ಮತ್ತು ಮಕ್ಕಳನ್ನು ಹೊಂದಲು ಅಲ್ಲವೆಂದು ತಂದೆ ಹೇಳುತ್ತಿದ್ದರು. ಜೀವನದಲ್ಲಿ ಏನಾದರೂ ಮಾಡಬೇಕೆಂದು ತಂದೆಯವರು ಸದಾ ಬಯಸುತ್ತಿದ್ದರು, ಎಂದು ಜಯಾ ಬಚ್ಚನ್ ಹೇಳಿಕೊಂಡಿದ್ದಾರೆ
'ನಮಗೆ ದೊಡ್ಡ ಮದುವೆ ಬೇಡ, ನನ್ನ ಪೋಷಕರು ಬದುಕಿದ್ದಾರೆ. ಅವರು ಮದುವೆಗೆ ಆಗಮಿಸಿ, ಆಶೀರ್ವದಿಸಬೇಕೆಂಬುದು ನನ್ನ ಆಸೆ, ಎಂದು ಹೇಳಿ ಅಮಿತಾಭ್ ನನ್ನ ತಂದೆಗೆ ಕರೆ ಮಾಡಿದರು.
ಜಯಾ ಮತ್ತು ಅಮಿತಾಭ್ ಅವರ ಮೊದಲ ಭೇಟಿಯು ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ನಡೆಯಿತು. ಜಯಾ ಅಲ್ಲಿ ವಿದ್ಯಾರ್ಥಿನಿಯಾಗಿದ್ದರು ಮತ್ತು ಮೊದಲ ನೋಟದಲ್ಲೇ ಅಮಿತಾಭ್ನನ್ನು ಪ್ರೀತಿಸಲು ಪ್ರಾರಂಭಿಸಿದ್ದರು.
ವರದಿಗಳ ಪ್ರಕಾರ, ಜಂಜೀರ್ ಚಿತ್ರದ ಯಶಸ್ಸನ್ನು ಆಚರಿಸಲು ಅಮಿತಾಭ್ ಲಂಡನ್ಗೆ ಹೋಗುವ ಸಮಯದಲ್ಲಿ, ಜಯಾ ಸಹ ಇತರ ಸ್ನೇಹಿತರ ಜೊತೆಗೂಡಿದರು. ಆ ವೇಳೆ ಅಮಿತಾಬ್ ಅವರ ತಂದೆ ಹರಿವಂಶ್ ರಾಯ್ ಬಚ್ಚನ್ ಅವರು ಜಯಾ ಅವರನ್ನು ಲಂಡನ್ಗೆ ಕರೆದುಕೊಂಡು ಹೋಗಬೇಕಾದರೆ ಮದುವೆಯಾಗಬೇಕು ಎಂದು ಷರತ್ತು ಹಾಕಿದ್ದರು. ಹೀಗಾಗಿ ಅಮಿತಾಭ್ ಮತ್ತು ಜಯಾ 3 ಜೂನ್ 1973 ರಂದು ವಿವಾಹವಾದರು.