2020ರಲ್ಲಿ ಹೊಸ ಮನೆ ಖರೀದಿಸಿದ ಬಾಲಿವುಡ್ ಸೆಲೆಬ್ರೆಟಿಗಳು!
ಕೊರೋನಾ ವೈರರಸ್ ಕಾರಣದಿಂದ 2020 ವರ್ಷ ಹೆಚ್ಚಿನವರ ಜೀವನದಲ್ಲಿ ಸಾಕಷ್ಟು ಅಕಸ್ಮಿಕ ಬದಲಾವಣೆಗಳನ್ನು ತಂದಿದೆ. ಸಾಕಷ್ಟು ಜನರ ಪಾಲಿಗೆ ಈ ವರ್ಷ ಅತ್ಯಂತ ಕಹಿಯಾಗಿದೆ. ಇದರ ನಡುವೆ ಬಾಲಿವುಡ್ನ ಕೆಲವು ಸ್ಟಾರ್ಸ್ಗೆ ಸಿಹಿಯಾಗಿದೆ. ಕೆಲವು ನಟಿಯರ ಮನೆಗೆ ಹೊಸ ಅತಿಥಿ ಆಗಮನದ ಸಂಭ್ರಮವಾದರೆ, ಇನ್ನೂ ಕೆಲವರು ಹೊಸ ಮನೆ ಖರೀದಿಸಿದರು. 2020 ರಲ್ಲಿ ಹೊಸ ಐಷಾರಾಮಿ ಮನೆಗಳನ್ನು ಖರೀದಿಸಿದ ಬಿ-ಟೌನ್ ಸೆಲೆಬ್ರೆಟಿಗಳ ಪಟ್ಟಿ ಇಲ್ಲಿದೆ.
ಜಾನ್ವಿ ಕಪೂರ್ ಯಿಂದ ಆಯುಷ್ಮಾನ್ ಖುರಾನಾ ವರಗೆ ಹಲವು ಬಾಲಿವುಡ್ ಸ್ಟಾರ್ಸ್ 2020ರಲ್ಲಿ ಹೊಸ ಮನೆಗಳನ್ನು ಖರೀದಿಸಿದ್ದಾರೆ.
ಜಾನ್ವಿ ಕಪೂರ್: 39 ಕೋಟಿ ರೂ. ಬೆಲೆಯ ದೊಡ್ಡ ದುಬಾರಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಜಾನ್ವಿ.
ಆಲಿಯಾ ಭಟ್: ಬಾಲಿವುಡ್ನ ಯಶಸ್ವಿ ಹೆಸರುಗಳಲ್ಲಿ ಮಹೇಶ್ ಭಟ್ ಮಗಳು ಆಲಿಯಾ ಭಟ್ ಒಂದು. ಈ ನಟಿ ಬಾಂದ್ರಾದಲ್ಲಿ ತನ್ನ ಬಾಯ್ಫ್ರೆಂಡ್ ರಣಬೀರ್ ಕಪೂರ್ ಮನೆಗೆ ಹತ್ತಿರವಿರುವ ಅಪಾರ್ಟ್ಮೆಂಟ್ ಅನ್ನು 32 ಕೋಟಿ ರೂಗೆ ಖರೀದಿಸಿದ್ದಾರೆ.
ಆಯುಷ್ಮಾನ್ ಖುರಾನಾ: ಆಯುಷ್ಮಾನ್ ಮೊದಲು ಬಾಂಬೆಯಲ್ಲಿ ಲುಕ್ಷರಿಯಸ್ ಮನೆ ಹೊಂದಿದ್ದರು. 2020ರಲ್ಲಿ ಇವರು ತಮ್ಮ ಊರಾದ ಚಂಡೀಗಡದಲ್ಲಿ 9 ಕೋಟಿ ರೂ ಬೆಲೆಯ ಮತ್ತೊಂದು ಆಸ್ತಿಯನ್ನು ಖರೀದಿಸಿದರು.
ಅರ್ಷದ್ ವಾರ್ಸಿ: ದುರ್ಗಮತಿ ನಟ ಅರ್ಷದ್ ವಾರ್ಸಿ ಹೊಸ ಮನೆ ಪರ್ಚೇಸ್ ಮಾಡಲು ಗೋವಾವನ್ನು ಆರಿಸಿಕೊಂಡಿದ್ದಾರೆ. 2020ರಲ್ಲಿ ಪೋರ್ಚುಗೀಸ್ ಶೈಲಿಯ ಹೆರಿಟೇಜ್ ವಿಲ್ಲಾದ ಮಾಲೀಕರಾದರು ಅರ್ಷದ್.
ಹೃತಿಕ್ ರೋಷನ್: ಬಾಲಿವುಡ್ನ ಗ್ರೀಕ್ ಗಾಡ್ 97.50 ಕೋಟಿ ರೂ.ಗಳ ಒಂದು ಅದ್ದೂರಿ ಸೀ ಫೇಸಿಂಗ್ ಮತ್ತು ಇನ್ನೊಂದು ಡ್ಯುಪ್ಲೆಕ್ಸ್ ಅಪಾರ್ಟ್ಮೆಂಟ್ಗಳನ್ನು ಖರೀದಿಸಿದ್ದಾರೆ. ಜುಹು-ವರ್ಸೋವಾ ಲಿಂಕ್ನಲ್ಲಿರುವ ಮನ್ನತ್ನ 14, 15 ಮತ್ತು 16 ನೇ ಮಹಡಿಯಲ್ಲಿದೆ.
ಕರೀಷ್ಮಾ ಕಪೂರ್: ಕಪೂರ್ ಕುಟುಂಬದ ಕುಡಿ ನಟಿ ಕರೀಷ್ಮಾ ಸಹ ಮುಂಬೈನಲ್ಲಿ ಹೊಸ ಮನೆಯನ್ನು ರಿಜಿಸ್ಟರ್ ಮಾಡಿಕೊಂಡಿದ್ದಾರೆ.
ಯಾಮಿ ಗೌತಮ್: ಚಂಡೀಗಡದಲ್ಲಿ ಮತ್ತೊಂದು ಅದ್ದೂರಿ ಡ್ಯುಪ್ಲೆಕ್ಸ್ ಅಪಾರ್ಟ್ಮೆಂಟ್ ಪರ್ಚೇಸ್ ಮಾಡಿದ್ಡಾರೆ ಯಾಮಿ.
ಕರೀನಾ ಕಪೂರ್ : ಮಮ್ಮಿ ಟು ಬಿ ಕರೀನಾ ಕಪೂರ್ ತಮ್ಮ ಹೊಸ ಮಗುವನ್ನು ಸ್ವಾಗತಿಸಲು ಹೊಸ ಅಪಾರ್ಟ್ಮೆಂಟ್ ಖರೀಸಿದ್ದಾರೆ.