Diwali 2021: ಲಕ್ಷ್ಮೀ ಪೂಜೆ ಸಂಭ್ರಮ, ಪಕ್ಕಾ ಸೌತ್ ಸ್ಟೈಲ್‌ನಲ್ಲಿ ಶ್ರೀದೇವಿ ಪುತ್ರಿಯರು
- Diwali 2021: ಲಕ್ಷ್ಮೀ ಪೂಜೆಗೆ ಸಿದ್ಧರಾದ ಬಾಲಿವುಡ್ ಸಿಸ್ಟರ್ಸ್(Bollywood Sisters)
- ಪಕ್ಕಾ ತಮಿಳು ಚೆಲುವೆಯರಾದ ಶ್ರಿದೇವಿ(Sridevi) ಪುತ್ರಿಯರು
- ಲಂಗ-ದಾವಣಿಯಲ್ಲಿ ಮಿಂಚಿದ ಜಾಹ್ನವಿ-ಖುಷಿ
ಎಲ್ಲೆಡೆ ದೀಪಾವಳಿಯನ್ನು ಆಚರಿಸುತ್ತಿರುವಾಗ ಹಬ್ಬದ ದಿನಕ್ಕಾಗಿ ಸೆಲೆಬ್ರಿಟಿಗಳು ಸ್ಟೈಲಿಷ್ ಆಗಿ ಸಿದ್ಧರಾಗಿದ್ದಾರೆ. ಫೆಸ್ಟಿವಲ್ ಫ್ಯಾಷನ್‌ನೊಂದಿಗೆ ಬಾಲಿವುಡ್ ಸೆಲೆಬ್ರಿಟಿಗಳು ಮಿಂಚಿದ್ದಾರೆ.
ಬಿಟೌನ್ ಸಿಸ್ಟರ್ಸ್ ಲಕ್ಷ್ಮೀ ಪೂಜೆಗೆ ಲಕ್ಷ್ಮಿಯರಂತೆಯೇ ರೆಡಿಯಾಗಿದ್ದಾರೆ. ಅಪ್ಪಟ ಸೌತ್ ಚೆಲುವೆಯರಂತೆ ಲಂಗ ದಾವಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಅವರು ಲಕ್ಷ್ಮಿ ಪೂಜೆಗಾಗಿ ತಮ್ಮ ಕಚೇರಿಗೆ ಹೋಗಿದ್ದಾರೆ ಎಂದು ವರದಿಯಾಗಿದೆ. ಜಾನ್ಹವಿ ನೀಲಿ ಬಣ್ಣದ ಲಂಗ ದಾವಣಿಯಲ್ಲಿ ಸುಂದರವಾಗಿ ಕಾಣುತ್ತಿದ್ದರು.
ನಿಂಬೆ ಹಸಿರು ಬಣ್ಣದ ಕುಪ್ಪಸದೊಂದಿಗೆ ದಾವಣಿ ಮ್ಯಾಚ್ ಮಾಡಿಕೊಂಡಿದ್ದರು ಜಾಹ್ನವಿ. ಖುಷಿ ಮೆರೂನ್ ಮತ್ತು ಹಸಿರು ಬಣ್ಣದ ದಾವಣಿಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದರು.
ಇಬ್ಬರು ಸಹೋದರಿಯರು ಸುಂದರವಾಗಿ ಸಿಂಪಲ್ ಡ್ರೆಸ್‌ನಲ್ಲಿ ಹಬ್ಬದ ಸಂದರ್ಭ ರೆಡಿಯಾಗಿ ಅಪ್ಪ ಬೋನಿ ಕಪೂರ್ ಜೊತೆ ಪೋಸ್ ಕೊಟ್ಟಿದ್ದಾರೆ.
ಕೆಲಸದ ವಿಚಾರದಲ್ಲಿ ಜಾಹ್ನವಿ ತನ್ನ ಕಿಟ್ಟಿಯಲ್ಲಿ 'ಗುಡ್ ಲಕ್ ಜೆರ್ರಿ' ಮತ್ತು 'ದೋಸ್ತಾನಾ 2' ಸೇರಿದಂತೆ ಕೆಲವು ಸಿನಿಮಾಗಳನ್ನು ಹೊಂದಿದ್ದಾರೆ.
ಅವರು ಕರಣ್ ಜೋಹರ್ ಅವರ ಪ್ಯಾಶನ್ ಪ್ರಾಜೆಕ್ಟ್ 'ತಖ್ತ್' ನ ಭಾಗವಾಗಿದ್ದಾರೆ. ಅದರಲ್ಲಿ ಕರೀನಾ ಕಪೂರ್, ವಿಕ್ಕಿ ಕೌಶಲ್, ಅನಿಲ್ ಕಪೂರ್, ಭೂಮಿ ಪೆಡ್ನೇಕರ್, ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಇತರರು ಕಾಣಿಸಿಕೊಳ್ಳಲಿದ್ದಾರೆ.
ಇಬ್ಬರು ಸಹೋದರಿಯರೂ ಅನಿಲ್ ಕಪೂರ್ ಮನೆಯಲ್ಲಿ ದೀಪಾವಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಸ್ಟೈಲಿಷ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು ಜಾಹ್ನವಿ-ಖುಷಿ