ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಗನ ಜೊತೆ ಮಾಲ್ಡೀವ್ಸ್‌ನಲ್ಲಿ ಜಾನ್ವಿ; ಅನುಮಾನ ಮೂಡಿಸಿದ ಫೋಟೋ
ಜಾನ್ವಿ ಫೋಟೋ ನೋಡಿದ ನೆಟ್ಟಿಗರು ಮಾಜಿ ಬಾಯ್ ಫ್ರೆಂಡ್ ಶಿಖರ್ ಪಹಾರಿಯಾ ಜೊತೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಅನುಮಾನ ಮೂಡಲು ಕಾರಣವಾಗಿದ್ದು ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್ ಫೋಟೋ ಶೇರ್ ಮಾಡಿರುವುದು.
ಜಾನ್ವಿ ಕಪೂರ್ ಹೆಚ್ಚಾಗಿ ಮಾಲ್ಡೀವ್ಸ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸೆಲೆಬ್ರಿಟಿಗಳ ನೆಚ್ಚಿನ ತಾಣ ಮಾಲ್ಡೇವ್ಸ್‌ಗೆ ಜಾನ್ವಿ ಆಗಾಗ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಸದ್ಯ ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು, ಮಾಲ್ಡೀವ್ಸ್‌ನಲ್ಲಿ ರಜೆಯನ್ನು ಆನಂದಿಸುತ್ತಿದ್ದಾರೆ ಜಾನ್ವಿ.
ಮಾಲ್ಡೀವ್ಸ್ ಹೋದ ಮೇಲೆ ಬಿಕಿನಿ ಫೋಟೋ ಶೇರ್ ಮಾಡದೆ ಇರಲು ಸಾಧ್ಯನಾ. ಜಾನ್ವಿ ಒಂದಿಷ್ಟು ಹಾಟ್ ಆಂಡ್ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬಿಕಿನಿಯಲ್ಲಿ ಮಸ್ತ್ ಪೋಸ್ ನೀಡಿರುವ ಜಾನ್ವಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಡೆನಿಮ್ ಸ್ಕರ್ಟ್ ಮತ್ತು ನಿಲಿ ಬಿಕಿನಿ ಟಾಪ್ ಧರಿಸಿರುವ ಫೋಟೋವನ್ನು ಜಾನ್ವಿ ಶೇರ್ ಮಾಡಿದ್ದಾರೆ. ಒಂದು ಕೈಯಲ್ಲಿ ಎಳನೀರು ಹಿಡಿದು ಕ್ಯಾಮರಾ ಮುಂದೆ ಬೋಲ್ಡ್ ಆಗಿದ್ದಾರೆ. ಜಾನ್ವಿಯ ತರಹೇವಾರಿ ಪೋಸ್‌ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಂದಹಾಗೆ ಜಾನ್ವಿ ಫೋಟೋ ನೋಡಿದ ನೆಟ್ಟಿಗರು ಮಾಜಿ ಬಾಯ್ ಫ್ರೆಂಡ್ ಶಿಖರ್ ಪಹಾರಿಯಾ ಜೊತೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಅನುಮಾನ ಮೂಡಲು ಕಾರಣವಾಗಿದ್ದು ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್ ಫೋಟೋ ಶೇರ್ ಮಾಡಿರುವುದು.
ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಅವರ ಮೊಮ್ಮಗ. ಈ ಮೊದಲು ಜಾನ್ವಿ ಶಿಖರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಬಳಿಕ ಬ್ರೇಕಪ್ ಮಾಡಿಕೊಂಡು ದೂರ ಆಗಿದ್ದರು. ಇದೀಗ ಮತ್ತೆ ಒಂದಾಗಿದ್ದಾರೆ, ಮಾಲ್ಡೀವ್ಸ್ ಪ್ರವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಮೊನ್ನೆಯಷ್ಟೆ ಜಾನ್ವಿ ಹಳದಿ ಹಾಟ್ ಬಿಕಿನಿಯಲ್ಲಿ ತನ್ನ ಟೋನ್ ಫಿಗರ್ ಅನ್ನು ತೋರಿಸಿದ್ದರು. ಮೇಕಪ್ ಇಲ್ಲದೇ ಸಖತ್ ಬೋಲ್ಡ್ ಹಾಗೂ ಮಾದಕವಾಗಿ ಕ್ಯಾಮರಾಗೆ ಪೋಸ್ ನೀಡಿದ್ದರು. ಬಿಕಿನಿ ಫೋಟೋಗಳನ್ನು ಶೇರ್ ಮಾಡಿದ ಬೆನ್ನಲ್ಲೇ ಮತ್ತಷ್ಟು ಫೋಟೋ ಹಂಚಿಕೊಂಡಿದ್ದಾರೆ.
ಮತ್ತಷ್ಟು ಫೋಟೋ ಶೇರ್ ಮಾಡಿ ಚಂದ್ರನ ಬೆಳಕಲ್ಲಿ ನನ್ನ ಭೇಟಿ ಮಾಡಿ ಎಂದು ಕ್ಯಾಪ್ಷನ್ ನೀಡಿದ್ದರು. ರಾತ್ರಿ ಹೊತ್ತು ಸಮುದ್ರ ತೀರದಲ್ಲಿ ಕುಳಿತಿರುವ ಜಾನ್ವಿ ಚಂದ್ರನ ಬೆಳಕನ್ನು ಎಂಜಾಯ್ ಮಾಡಿದ್ದಾರೆ. ಬಿಳಿ ಬಣ್ಣದ ಡ್ರೆಸ್ ಧರಿಸಿರುವ ಜಾನ್ವಿ ಚಂದ್ರನ ಬೆಳಕಲ್ಲಿ ಹೊಳೆಯುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಸಮುದ್ರದ ಕಡೆ ಮುಖ ಮಾಡಿ ನಿಂತಿದ್ದರು.
ಜಾನ್ವಿ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಬೆಂಕಿ, ಹಾರ್ಟ್ ಇಮೋಜಿ ಇರಿಸಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಸದಾ ಹಾಟ್ ಫೋಟೋಗಳ ಮೂಲಕವೇ ಹೆಚ್ಚು ಸದ್ದು ಮಾಡುವ ಜಾನ್ವಿ ಇದೀಗ ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.