ಲಂಕನ್ ಬ್ಯೂಟಿ ಜಾಕ್ವೇಲಿನ್‌ಗೆ 50 ವರ್ಷದ ನಿರ್ಮಾಪಕನ ಮೇಲೆ ಲವ್ ಆಗಿದ್ಹೇಗೆ?
ಬಾಲಿವುಡ್‌ನ 50 ವರ್ಷದ ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ಮತ್ತು 35 ವರ್ಷದ ನಟಿ ಜಾಕ್ವೆಲಿನ್ ಫರ್ನಾಂಡೀಸ್ ನಡುವೆ 'ಹೌಸ್‌ಫುಲ್ 2' ಚಿತ್ರದ ಸೆಟ್‌ನಲ್ಲಿ ಪ್ರೀತಿ ಪ್ರಾರಂಭವಾಗಿತ್ತು ಎಂದು ನಿಮಗೆ ಗೊತ್ತಾ? ಆದರೆ ಸಾಜಿದ್ ಜಾಕಿಯ 3 ವರ್ಷಗಳ ಸಂಬಂಧ ಕೊನೆಗೆ ಬ್ರೇಕಪ್‌ನಲ್ಲಿ ಮುಕ್ತಾಯವಾಯಿತು. ಶ್ರೀಲಂಕಾ ಚೆಲುವೆ ಜೊತೆಯ ಲವ್ ಆಫೇರ್ ಹಾಗೂ ಬ್ರೇಕಪ್ ಬಗ್ಗೆ ಸ್ವತಃ ಫಿಲ್ಮ್ ಮೇಕರ್ ಸಾಜಿದ್ ಖಾನ್ ಮಾತಾನಾಡಿದ್ದಾರೆ. ಇಲ್ಲಿದೆ ವಿವರ.
ಬಾಲಿವುಡ್‌ನ ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ಒಮ್ಮೆ ಜಾಕ್ವೆಲಿನ್ ಫರ್ನಾಂಡೀಸ್ ಜೊತೆಗಿನ ಸಂಬಂಧದ ಹಾಗೂ ಬ್ರೇಕಪ್ ಬಗ್ಗೆಯೂ ಮಾತನಾಡಿದರು.
2013 ರಲ್ಲಿ ಈ ಕಪಲ್ ತಮ್ಮ 3 ವರ್ಷದ ರಿಲೆಷನ್‌ಶಿಪ್ ಕೊನೆಗೊಳಿಸಿದರು. ಏಕೆಂದರೆ ಇಬ್ಬರ ನಡುವೆ ವಿಷಯಗಳು ಸರಿ ಬರಲಿಲ್ಲ. ವರದಿಗಳ ಪ್ರಕಾರ, ಜಾಕ್ವೆಲಿನ್ ಕಡೆಗೆ ಖಾನ್‌ರ ಅತಿಯಾದ ಪೋಸೆಸೀವ್‌ನೆಸ್ ಬ್ರೇಕಪ್‌ಗೆ ಮಹತ್ವದ ಕಾರಣವಾಗಿದೆ.
ಅವನು ಯಾವಾಗಲೂ ಪ್ರೊಟೆಕ್ಟೀವ್ ಆಗಿದ್ದನು, ಆದರೆ ಕೆಲವೊಮ್ಮೆ ಅವನ ಗರ್ಲ್‌ಫ್ರೆಂಡ್ ಬಗ್ಗೆ ತುಂಬಾ ಪೋಸೆಸಿವ್‌ನೆಸ್ ಹೊಂದಿದ್ದನು. ಅವಳು ಧರಿಸಿರುವ ಬಟ್ಟೆ, ಅವಳ ಪಾತ್ರಗಳು ... ಎಲ್ಲವೂ ಅವನಿಗೆ ಸಮಸ್ಯೆಯಾಗಿತ್ತು . ಎಂದು ಸಾಜಿದ್ ಅಪ್ತ ಮೂಲ ಬಹಿರಂಗ ಪಡಿಸಿದೆ.
ಈ ಸಂಬಂಧದ ಕಾರಣ ಜಾಕ್ವೆಲಿನ್ ಜಿಸ್ಮ್ -2 ಮತ್ತು ಕ್ರಿಶ್ -3 ಚಿತ್ರಗಳಲ್ಲಿನ ಪಾತ್ರಗಳ ಬೆಲೆ ತೆರಬೇಕಾಯಿತು ಎಂದೂ ಕೆಲವರು ಹೇಳುತ್ತಾರೆ.
ಇಬ್ಬರ ಸಂಬಂಧ ಮುರಿಯಲು ಪೊಸೆಸಿವ್‌ನೆಸ್ ಕಾರಣ ಎನ್ನಲಾಗುತ್ತದೆ
ವರದಿಯ ಪ್ರಕಾರ, ಸಾಜಿದ್ ನಟಿಗೆ ಕ್ರಿಶ್ -3 ಮಾಡದಂತೆ ತೆಡೆದರು. ಹೃತಿಕ್ ರೋಷನ್ ಜೊತೆ ಕಿಸ್ಸಿಂಗ್ ಸೀನ್ ಅಥವಾ ಅರುಣೋದಯ್ ಸಿಂಗ್ ಮತ್ತು ರಂದೀಪ್ ಹೂಡಾ ಜೊತೆ ಇಂಟೀಮೇಟ್ ಸೀನ್ ಶೂಟ್ ಮಾಡುವುದನ್ನು ಸಾಜಿದ್ ನಿಷೇಧಿಸಿದ್ದರು ಎಂದು ವರದಿಗಳು ಸೂಚಿಸಿವೆ.
ಸಾಜಿದ್ ಅವರ ಕರಡಿ ಪ್ರೀತಿ ಜಾಕಿಯನ್ನು ಉಸಿರುಗಟ್ಟಿಸುತ್ತಿತ್ತು. ಇದು ನೋವಿನ ನಿರ್ಧಾರವಾಗಿದ್ದರೂ, ಗಲಾಟೆ ಮಾಡುವ ಲವರ್ಸ್ ಆಗಿ ಕೊನೆಗೊಳ್ಳುವುದಕ್ಕಿಂತ ಉತ್ತಮ ಸ್ನೇಹಿತರಾಗಿ ಉಳಿಯುವುದು ಉತ್ತಮ ಎಂದು ಡಿಸೈಡ್ ಮಾಡಿದರು' ಎಂದು ಮೂಲ ಹೇಳಿದೆ.
ಆದಾಗ್ಯೂ, ಜಾಕ್ವೆಲಿನ್ ಜೊತೆ ಬ್ರೇಕಪ್ ಬಗ್ಗೆ ಸಾಜಿದ್ TOIಗೆ ನೀಡಿದ ಸಂದರ್ಶನದಲ್ಲಿ ಬೇರೆಯದೇ ಹೇಳಿಕೆ ನೀಡಿದ್ದರು.
ನಮ್ಮ ಸಂಬಂಧ ಡಿಸೆಂಬರ್ 2012ರಿಂದಲೂ ಕೆಡಲು ಶುರವಾಗಿತ್ತು. ಆದರೆ, ಮನಸ್ಸನ್ನು ಸಿದ್ಧಪಡಿಸಿಕೊಳ್ಳಲು ಐದು ತಿಂಗಳು ತೆಗೆದುಕೊಂಡೆ. 2013ರ ಮೇನಲ್ಲಿ ಬೇರೆಯಾದೆವು. ಜಾಕ್ ಜೊತೆ ಹಿಮತ್‌ವಾಲಾ ಶೂಟಿಂಗ್ ವೇಳೆ ಐದು ದಿನ ಟ್ರಿಪ್ ಹೋಗಿದ್ದೆ. ಆಗಲೂ ನಂಗೆ ಚಿತ್ರದ ಮೇಲೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಜೀವವದಲ್ಲಿ ಮಹಿಳೇ ಇಲ್ಲವೆಂದರೆ ಕಿರಿಕಿರಿ ಮಾಡಲೂ ಯಾರೂ ಇರುವುದಿಲ್ಲ. ಮಾಡುವ ಕೆಲಸದೆಡೆ ಮತ್ತಷ್ಟು ಗಮನಹರಿಸಬಹುದು. ನಂತರದ ಚಿತ್ರದ ಶೂಟಿಂಗ್ ವೇಳೆ ಒಮ್ಮೆಯೂ ರಜೆ ತೆಗೆದುಕೊಳ್ಳಲಿಲ್ಲ, ಎನ್ನುತ್ತಾರೆ.
ಜಾಕ್ವೆಲಿನ್ ಜೊತೆ ಸಂಬಂಧದ ಬಗ್ಗೆ ಸಾಜಿದ್ ಯಾವಾಗಲೂ ಓಪನ್ ಆಗಿದ್ದರು. ಆದರೆ ನಟಿ ಚಲನಚಿತ್ರ ನಿರ್ಮಾಪಕನೊಂದಿಗಿನ ತನ್ನ ಪ್ರೀತಿಯ ಬಗ್ಗೆ ಮೌನವಾಗಿ ಉಳಿದುಕೊಂಡಿದ್ದರು.