ಮತ್ತೆ ಅವಳಿಗಳಿಗೆ ತಾಯಿಯಾದ್ರಾ ನಯನತಾರಾ: ಅವಳಿ ಹೆಣ್ಣು ಮಕ್ಕಳ ಫೋಟೋ ಶೇರ್ ಮಾಡಿದ ಪತಿ ವಿಘ್ನೇಶ್ ಶಿವನ್
ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿಗೆ ಈಗಾಗಲೇ ಅವಳಿ ಗಂಡು ಮಕ್ಕಳಿದ್ದಾರೆ. ಈಗ ನಯನತಾರಾ ಅವಳಿ ಹೆಣ್ಣು ಮಕ್ಕಳೊಂದಿಗೆ ಇರುವ ಫೋಟೋವನ್ನು ವಿಘ್ನೇಶ್ ಶಿವನ್ ಪೋಸ್ಟ್ ಮಾಡಿದ್ದಾರೆ.

ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ. 40 ವರ್ಷ ದಾಟಿದ್ರೂ ನಂಬರ್ 1 ನಾಯಕಿಯಾಗಿ ಮುಂದುವರೆದಿದ್ದಾರೆ. ತಮಿಳು ಜೊತೆಗೆ ಮಲಯಾಳಂ, ತೆಲುಗು, ಕನ್ನಡ, ಹಿಂದಿ ಭಾಷೆಗಳಲ್ಲೂ ನಟಿಸುತ್ತಾ ಬ್ಯುಸಿಯಾಗಿದ್ದಾರೆ.

ನಯನತಾರಾ ಅವಳಿ ಮಕ್ಕಳು
ನಟಿ ನಯನತಾರಾ ಅವರ ಮದುವೆ 2022 ರಲ್ಲಿ ನಡೆಯಿತು. ಅವರು ತಮ್ಮ ಪ್ರಿಯಕರ ವಿಘ್ನೇಶ್ ಶಿವನ್ ಅವರನ್ನು ವಿವಾಹವಾದರು. ಮದುವೆಯ ನಾಲ್ಕು ತಿಂಗಳಲ್ಲೇ ಅವಳಿ ಮಕ್ಕಳ ತಾಯಿ ಎಂದು ಘೋಷಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಇದು ದೊಡ್ಡ ವಿವಾದವಾಗಿತ್ತು. ನಂತರ ಅವರು ಸರೋಗಸಿ ಮೂಲಕ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದು ಬಂದಿತ್ತು.
ನಯನತಾರಾ
ತಮ್ಮ ಅವಳಿ ಗಂಡು ಮಕ್ಕಳಿಗೆ ಉಯಿರ್ ಮತ್ತು ಉಲಗಮ್ ಎಂದು ಹೆಸರಿಟ್ಟ ನಯನತಾರಾ, ಅವರ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿರ್ತಾರೆ. ಪ್ರಸ್ತುತ ನಯನತಾರಾ ಪುತ್ರರಿಗೆ ಎರಡು ವರ್ಷ. ಪುತ್ರರು ನಡೆಯಲು ಪ್ರಾರಂಭಿಸಿದ ಈ ಸಮಯದಲ್ಲಿ ನಯನತಾರಾ ಪತಿ ವಿಘ್ನೇಶ್ ಶಿವನ್ ಒಂದು ವಿಡಿಯೋವನ್ನು ಪೋಸ್ಟ್ ಮಾಡಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಆ ವಿಡಿಯೋದಲ್ಲಿ ನಯನತಾರಾ ಅವಳಿ ಹೆಣ್ಣು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ.
ಈ ವಿಡಿಯೋ ನೋಡಿದ ಅಭಿಮಾನಿಗಳು ಮತ್ತೆ ಅವಳಿ ಮಕ್ಕಳೇ ಎಂದು ಶಾಕ್ ಆಗಿದ್ದಾರೆ. ವಾಸ್ತವವಾಗಿ ಆ ವಿಡಿಯೋ AI ತಂತ್ರಜ್ಞಾನದಿಂದ ರಚಿಸಲ್ಪಟ್ಟಿದೆ. ಅದು ನಿಜವಾದಂತೆ ಕಾಣುವುದರಿಂದ ಅಭಿಮಾನಿಗಳು ಗೊಂದಲಕ್ಕೊಳಗಾದರು. ಆ ವಿಡಿಯೋದಲ್ಲಿರುವ ಅವಳಿ ಹೆಣ್ಣು ಮಕ್ಕಳು ನಯನಾತಾರರನ್ನೇ ಹೋಲುತ್ತಿದ್ದು,ತುಂಬಾ ಸುಂದರವಾಗಿದ್ದಾರೆ.
ನಯನತಾರಾ AI ಫೋಟೋಗಳು
ಇದನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡ ವಿಘ್ನೇಶ್ ಶಿವನ್, ಕೆಲವೊಮ್ಮೆ AI ಕೂಡ ತುಂಬಾ ಸುಂದರವಾಗಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಆ ವಿಡಿಯೋದಲ್ಲಿ ವಿಘ್ನೇಶ್ ಶಿವನ್ ಅವರನ್ನೂ ಸೇರಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.