ಪತಿಯ ಅಪರೂಪದ ಫೋಟೋ ಜೊತೆಗೆ ಭಾವುಕ ಸಾಲು ಹಂಚಿಕೊಂಡ ಇರ್ಫಾನ್ ಖಾನ್ ಪತ್ನಿ
ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್ ನಿಧನಹೊಂದಿ ಎರಡು ವರ್ಷಗಳೇ ಕಳೆಯಿತು. ಕುಟುಂಬದವರು ಇನ್ನು ಇರ್ಫಾನ್ ಖಾನ್ ನೆನಪಲ್ಲೇ ಜೀವನ ಕಳೆಯುತ್ತಿದ್ದಾರೆ. ಇರ್ಫಾನ್ ಖಾನ್ ಪತ್ನಿ ಸುತಾಪಾ ಆಗಾಗ ಫೋಟೋಗಳನ್ನು ಶೇರ್ ಮಾಡಿ ಭಾವುಕರಾಗುತ್ತಿರುತ್ತಾರೆ.

ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್ ನಿಧನಹೊಂದಿ ಎರಡು ವರ್ಷಗಳೇ ಕಳೆಯಿತು. ಕುಟುಂಬದವರು ಇನ್ನು ಇರ್ಫಾನ್ ಖಾನ್ ನೆನಪಲ್ಲೇ ಜೀವನ ಕಳೆಯುತ್ತಿದ್ದಾರೆ. ಇರ್ಫಾನ್ ಖಾನ್ ಪತ್ನಿ ಸುತಾಪಾ ಆಗಾಗ ಫೋಟೋಗಳನ್ನು ಶೇರ್ ಮಾಡಿ ಭಾವುಕರಾಗುತ್ತಿರುತ್ತಾರೆ.
ಬಾಲಿವುಡ್ ನ ಬಹುಬೇಡಿಕೆಯ ನಟ ಇರ್ಫಾನ್ ಖಾನ್ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಬಳಿಕ ವಿದೇಶದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಾಸ್ ಆಗಿದ್ದರು. ಚಿಕಿತ್ಸೆ ಬಳಿಕ ಕೆಲವೇ ದಿನಗಳಲ್ಲಿ ಇರ್ಫಾನ್ ಖಾನ್ ಬಾರದ ಲೋಕಕ್ಕೆ ಹೊರಟು ಹೋದರು.
ಇರ್ಫಾನ್ ಖಾನ್ ಪತ್ನಿ ಸುತಾಪಾ ಮತ್ತು ಇಬ್ಬರು ಮಕ್ಕಳಾದ ಬಾಬಿಲ್ ಮತ್ತು ಅಯಾನ್ಅವರನ್ನು ಅಗಲಿದ್ದಾರೆ. ಮಕ್ಕಳು ಸಹ ಆಗಾಗಾ ತಂದೆಯ ಬಗ್ಗೆ ಭಾವುಕ ಪೋಸ್ಟ್ ಶೇರ್ ಮಾಡುತ್ತಿರುತ್ತಾರೆ. ಅಂದಹಾಗೆ ಬಾಬಿಲ್ ಸದ್ಯ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಓದು ಮುಗಿಸಿರುವ ಬಾಬಿಲ್ ಬಣ್ಣದ ಲೋಕಕ್ಕೆ ಸಕ್ರೀಯರಾಗಲು ತಯಾರಿ ನಡೆಸುತ್ತಿದ್ದಾರೆ.
ಇರ್ಫಾನ್ ನೆನಪಲ್ಲೇ ದಿನಕಳೆಯುತ್ತಿರುವ ಪತ್ನಿ ಸುತಾಪಾ ಪತಿಯ ಅಪರೂಪದ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಬಾಬಿಲ್ ಹೊಟ್ಟೆಯಲ್ಲಿದ್ದ ಕ್ಷಣದ ಫೋಟೋಗಳು ಮತ್ತು ಇರ್ಫಾನ್ ಖಾನ್ ಪುಟ್ಟ ಮಗನನ್ನು ಎತ್ತಿ ಮುದ್ದಾಡುತ್ತಿರುವ ಫೋಟೋವನ್ನು ಹಂಚಿಕಂಡಿದ್ದಾರೆ.
ಇರ್ಫಾನ್ ಖಾನ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಫ್ಯಾಮಿಲಿಗೆ ಅಷ್ಟೆ ಸಮಯ ಕೊಡುತ್ತಿದ್ದರು. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದರು. ಸುತಾಪಾ ಗರ್ಭಿಣಿಯಾಗಿದ್ದಾಗ ಮತ್ತು ಬಾಬಿಲ್ ಗೆ ಜನ್ಮ ನೀಡಿದ ಬಳಿಕ ಇರ್ಫಾನ್ ಹೇಗೆ ನೋಡಿಕೊಳ್ಳುತ್ತಿದ್ದರು ಎನ್ನುವುದನ್ನು ಸುತಾಪಾ ಫೋಟೋ ಶೇರ್ ಮಾಡುವ ಬಹಿರಂಗ ಪಡಿಸಿದ್ದಾರೆ.
ಮಗ ಬಾಬಿಲ್ ಹುಟ್ಟುಹಬ್ಬದ ವಿಶೇಷವಾಗಿ ಸುತಾಪಾ ಈ ಎಲ್ಲಾ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ ದೀರ್ಘವಾದ ಸಾಲುಗಳನ್ನು ಬರೆದು ಮಗನಿಗೆ ಪ್ರೀತಿಯ ವಿಶ್ ತಿಳಿಸಿದ್ದಾರೆ. ಸುತಾಪಾ ಹಂಚಿಕೊಂಡಿರುವ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದು ಬಂದಿವೆ.