ಮುಂಬೈನಲ್ಲಿರುವ ತಮನ್ನಾ ಭಾಟಿಯಾ ಐಶಾರಾಮಿ ಮನೆ ಹೇಗಿದೆ ನೋಡಿ, ಇದರ ಬೆಲೆ ಎಷ್ಟು ಗೊತ್ತಾ?
ಭಾರತೀಯ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ತಮನ್ನಾ ಭಾಟಿಯಾ ಬಹುಕಾಂತೀಯ ನೋಟ ಹೊಂದಿದ್ದು, ಪಡ್ಡೆ ಹುಡುಗರ ಹಾಟ್ ಫೇವರಿಟ್ ನಟಿ ಎನಿಸಿಕೊಂಡಿದ್ದಾರೆ. ನಟ ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ. ತಮನ್ನಾರ ಮುಂಬೈ ಮನೆಯ ಬೆಲೆ ಎಷ್ಟು ಗೊತ್ತಾ?
ತಮನ್ನಾ ಬಾಟಿಯಾ ಅವರು ಮುಂಬೈನಲ್ಲಿ ಐಶಾರಾಮಿ ಮನೆಯನ್ನು ಹೊಂದಿದ್ದಾರೆ. ಒಂಬತ್ತು ವರ್ಷಗಳಿಂದ ಈ ಮನೆಯಲ್ಲಿ ವಾಸವಿದ್ದು, ಈ ಮನೆಯನ್ನು ಅವರ ತಂದೆಯೇ ಅಲಂಕರಿಸಿದ್ದಾರಂತೆ.
ತಮನ್ನಾ ಅವರ ಮುಂಬೈ ಮನೆಯ ಅತ್ಯಂತ ಉತ್ತಮ ರೀತಿಯಲ್ಲಿ ವಿನ್ಯಾಸಗೊಂಡಿದೆ. ಮನೆಯ ಒಳಾಂಗಣ ಬಿಳಿ ಬಣ್ಣದಿಂದ ಕೂಡಿದೆ. ವಿಶಾಲವಾದ ಲಿವಿಂಗ್ ರೂಮ್ ಅದರ ಮಧ್ಯಭಾಗದಲ್ಲಿ ಗಾಜಿನ ಮೇಜು ಜೊತೆಗೆ ಎಲ್-ಆಕಾರದ ಸುಂದರವಾದ ಸೋಫಾವಿದೆ.
ಇದೇ ಹಾಲ್ ನಲ್ಲಿ ಒಂದು ಗೋಡೆ ಇದ್ದು, ಇನ್ನೊಂದು ಬದಿಯಲ್ಲಿನ ಊಟದ ಕೋಣೆಯನ್ನು ವಿಭಾಗಿಸುತ್ತದೆ. ಇಲ್ಲಿ ಎಂಟು ಆಸನಗಳ ಊಟದ ಟೇಬಲ್ ಇದೆ. ಅಲ್ಲೇ ಗೋಡೆಯ ಮೇಲೆ ತಮನ್ನಾ ಅವರ ಅತ್ತಿಗೆ ಮಾಡಿದ ಬೃಹತ್ ಬುದ್ಧನ ವರ್ಣ ಚಿತ್ರ ಎದ್ದು ಕಾಣುತ್ತದೆ.
ತಮನ್ನಾ ಅವರ ಮನೆಯಲ್ಲಿ ಮಾಡ್ಯುಲರ್ ಪ್ಯಾರಲಲ್ ಕಿಚನ್ ಇದೆ. ಬೆಳಗಿನ ಉಪಾಹಾರದ ಸಮಯದಲ್ಲಿ ನೈಸರ್ಗಿಕ ಬೆಳಕು ಇಲ್ಲಿ ಬಂದು ಸ್ಪರ್ಶಿಸುತ್ತದೆ. ಇಲ್ಲಿ ತಮನ್ನಾ ತನ್ನ ಹೆಚ್ಚಿನ ಸಮಯವನ್ನು ಹೆತ್ತವರೊಂದಿಗೆ ಕಾಫಿ ಮತ್ತು ತಿಂಡಿಗಳನ್ನು ಸೇವಿಸುತ್ತಾ ಕಳೆಯುತ್ತಾರಂತೆ.
ತಮನ್ನಾ ಅವರ ಮನೆಯ ಮತ್ತೊಂದು ಪ್ರಮುಖ ಅಂಶವೆಂದರೆ ಅವರ ಮೇಕಪ್ ರೂಮ್ ಇದು ಅವರ ಬೆಡ್ ರೂಂ ಗೂ ಮುನ್ನ ಕಾಣಸಿಗುತ್ತದೆ. ಕೊಠಡಿಯು ದೊಡ್ಡ ಕಿಟಕಿಯನ್ನು ಹೊಂದಿದೆ. ಇದಕ್ಕೂ ನೈಸರ್ಗಿಕ ಬೆಳಕು ಚೆನ್ನಾಗಿ ಬರುತ್ತದೆ. ಪರಿಪೂರ್ಣವಾದ ಮೇಕಪ್ ಗೆ ಹೇಳಿ ಮಾಡಿಸಿದಂತಿದೆ.
ತಮನ್ನಾ ಅವರ ಮನೆಯ ಪ್ರಮುಖ ಅಂಶವೆಂದರೆ ಅವರ ಸುಂದರವಾದ ಬೆಡ್‌ರೂಮ್, ಅದು ಅತಿ ಹೆಚ್ಚು ವೈಬ್‌ಗಳನ್ನು ಸೃಷ್ಟಿಸುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ ದೊಡ್ಡ ಕಿಟಕಿಯ ಮೂಲಕ ಸ್ನೇಹಶೀಲ ಅನುಭವ ನೀಡುತ್ತದೆ. ಗುಲಾಬಿ ಬಣ್ಣದ ಪಾರದರ್ಶಕ ಪರದೆಗಳಿಂದ ಇದನ್ನು ಅಲಂಕರಿಸಿದ್ದಾರೆ. ಈ ಕೋಣೆಯಲ್ಲಿ ತನ್ನ ಅಜ್ಜನ ಹಳೆಯ ಚಯರ್ ಒಂದನ್ನು ತಮನ್ನಾ ಇಟ್ಟಿದ್ದಾರೆ.
ಇನ್ನು ಈ ಪ್ರಸಿದ್ಧ ನಟಿಯ ಮನೆ ಮುಂಬೈನ ಜುಹು-ವರ್ಸೋವಾ ಲಿಂಕ್ ರಸ್ತೆಯಲ್ಲಿರುವ 'ಬೇವ್ಯೂ ಅಪಾರ್ಟ್‌ಮೆಂಟ್' ನ 14ನೇ ಮಹಡಿಯಲ್ಲಿದೆ. ಈ ಮನೆಯ ಮೌಲ್ಯ 16.6 ಕೋಟಿ. ನಟಿ ನಿವ್ವಳ ಮೌಲ್ಯ 110 ಕೋಟಿ ಎಂದು ವರದಿ ತಿಳಿಸಿದೆ.