ಹೀರೋಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ಕಾಮಿಡಿಯನ್; ಸಿನ್ಮಾವೊಂದಕ್ಕೆ ಭರ್ತಿ 2 ಕೋಟಿ ರೂ.!
ಸಿನಿಮಾರಂಗದಲ್ಲಿ ಖ್ಯಾತ ನಟ-ನಟಿಯರು ಚಿತ್ರವೊಂದಕ್ಕೆ ಕೋಟಿ, ಲಕ್ಷದಲ್ಲಿ ಸಂಭಾವನೆ ಪಡೆಯುತ್ತಾರೆ. ಹಾಗೆಯೇ ಕೆಲವು ಹಾಸ್ಯನಟರು ಸಹ ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಾರೆ. ಹಾಗಿದ್ರೆ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋ ಕಾಮಿಡಿಯನ್ ಯಾರು? ಕಪಿಲ್ ಶರ್ಮಾ, ಭಾರತಿ ಸಿಂಗ್ ಅಲ್ಲ..ಮತ್ಯಾರು?
ಸಿನಿಮಾರಂಗದಲ್ಲಿ ಖ್ಯಾತ ನಟ-ನಟಿಯರು ಚಿತ್ರವೊಂದಕ್ಕೆ ಕೋಟಿ, ಲಕ್ಷದಲ್ಲಿ ಸಂಭಾವನೆ ಪಡೆಯುತ್ತಾರೆ. ಆದ್ರೆ ಕಾಮಿಡಿಯನ್ಸ್ ಇಷ್ಟರಮಟ್ಟಿಗೆ ಹಣ ಸಿಗುವುದಿಲ್ಲ ಎಂಬುದು ಸಾಮಾನ್ಯವಾಗಿ ಇರೋ ತಪ್ಪು ಕಲ್ಪನೆಯಾಗಿದೆ. ಕೆಲವು ವರದಿಗಳ ಪ್ರಕಾರ, ಹಾಸ್ಯನಟರು ಸಹ ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಾರೆ.
ಸಿನಿಮಾವೊಂದನ್ನು ಖುಷಿಯಿಂದ ಎಂಜಾಯ್ ಮಾಡಲು ಹೀರೋ, ಹೀರೋಯಿನ್ ಇರೋ ಹಾಗೆ ಕಾಮಿಡಿಯನ್ ಕೂಡಾ ಇರಲೇಬೇಕು. ಇಲ್ಲದಿದ್ದರೆ ಸಿನಿಮಾ ನೋಡೋದ್ರಲ್ಲಿ ಮಜಾ ಬರಲ್ಲ. ಭಾರತೀಯ ಚಿತ್ರರಂಗದಲ್ಲಿ ಹಲವಾರು ಖ್ಯಾತ ನಟ-ನಟಿಯರಿದ್ದಾರೆ. ಬಾಲಿವುಡ್‌ನಲ್ಲಿ ಕಪಿಲ್ ಶರ್ಮಾರಿಂದ ತೊಡಗಿ ಕನ್ನಡದ ಸಾಧುಕೋಕಿಲ ವರೆಗೆ ಹಲವರು ಜನರನ್ನು ರಂಜಿಸುತ್ತಾರೆ.
ಅದರಲ್ಲೂ ಹಿಂದಿಯ ಕಪಿಲ್ ಶರ್ಮಾ ಶೋ ಕಾಮಿಡಿಗಾಗಿಯೇ ಇರೋ ಶೋ ಆಗಿದೆ. ಆದ್ರೆ ಭಾರತದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟ ಬಾಲಿವುಡ್‌ನವರು ಅಲ್ಲ. ಕೆಲವು ವರದಿಗಳ ಪ್ರಕಾರ, ಹಾಸ್ಯನಟ ಕಪಿಲ್ ಶರ್ಮಾ ಭಾರತದ ಶ್ರೀಮಂತ ಹಾಸ್ಯನಟ. ಕಪಿಲ್ ಶರ್ಮಾ ಅಥವಾ ಭಾರತಿ ಸಿಂಗ್ ಅಲ್ಲ. ಬದಲಿಗೆ ಪ್ರಸಿದ್ಧ ತೆಲುಗು ಹಾಸ್ಯನಟ ಬ್ರಹ್ಮಾನಂದಂ.
67 ವರ್ಷ ವಯಸ್ಸಿನ ಕಾಮಿಡಿಯನ್ ಇಲ್ಲಿಯವರೆಗೆ 1000ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ. ಕಲೆಗೆ ನೀಡಿದ ಕೊಡುಗೆಗಾಗಿ ಅವರು 2009ರಲ್ಲಿ ಪದ್ಮಶ್ರೀ ಪಡೆದರು. ಸದ್ಯ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟರಲ್ಲಿ ಒಬ್ಬರು. ಬ್ರಹ್ಮಾನಂದಂ, 2 ಕೋಟಿಗೂ ಹೆಚ್ಚು ಮಾಸಿಕ ವೇತನ ಪಡೆಯುತ್ತಾರೆ.
ಬ್ರಹ್ಮಾನಂದಂ ಅವರು ಕಪಿಲ್ ಶರ್ಮಾ, ಭಾರತಿ ಸಿಂಗ್ ಮತ್ತು ಇತರ ಪ್ರಸಿದ್ಧ ಹೆಸರುಗಳು ಚಿರಪರಿಚಿತರಾಗುವುದಕ್ಕಿಂತ ಮುಂಚೆಯೇ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. ಅವರು ತಮ್ಮ ಚಲನಚಿತ್ರ ಪಾತ್ರಗಳಿಗೆ 1 ಕೋಟಿಯಿಂದ 2 ಕೋಟಿ ರೂಪಾಯಿಗಳ ವರೆಗೆ ಮತ್ತು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಗೆ 1 ಕೋಟಿ ರೂಪಾಯಿಗಳವರೆಗೆ ಸಂಭಾವನೆ ಪಡೆಯುತ್ತಾರೆ.
ಇದರ ಜೊತೆಗೆ, ಬ್ರಹ್ಮಾನಂದಂ ಐಷಾರಾಮಿ ಕಾರುಗಳ ಒಡೆಯರೂ ಹೌದು. Mercedes-Benz, Audi R8 ಮತ್ತು Audi Q7 ಮಾಲೀಕರಾಗಿದ್ದಾರೆ. ಜೊತೆಗೆ ಲಕ್ಷಾಂತರ ಬೆಲೆ ಬಾಳುವ ಕೃಷಿ ಭೂಮಿಯ ಒಡೆಯ ಎಂಬ ಹೆಗ್ಗಳಿಕೆ ಇವರದು. ಹೆಚ್ಚುವರಿಯಾಗಿ, ಹೈದರಾಬಾದ್‌ನ ವಿಶೇಷ ಜುಬಿಲಿ ಹಿಲ್ಸ್‌ನಲ್ಲಿ ಬ್ರಹ್ಮಾನಂದಂ ಬಂಗಲೆಯನ್ನು ಹೊಂದಿದ್ದಾರೆ.
ಬ್ರಹ್ಮಾನಂದಂ 1985ರಲ್ಲಿ ಡಿಡಿ ತೆಲುಗಿನ ಪಕಪಕಲು ಮೂಲಕ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು. ಶ್ರೀ ತಾತಾವತಾರಂ ಅವರು ಕಾಣಿಸಿಕೊಂಡ ಮೊದಲ ಚಲನಚಿತ್ರವಾಗಿದೆ, ನಂತರ ಸತ್ಯಾಗ್ರಹಂ ಮತ್ತು ಅಹಾ ನಾ ಪೆಲ್ಲಂಟಾದಲ್ಲಿ ಅಭಿನಯಿಸಿದರು.
35 ವರ್ಷಗಳ ವೃತ್ತಿಜೀವನದ ಅವಧಿಯಲ್ಲಿ ಆರು ರಾಜ್ಯ ನಂದಿ ಪ್ರಶಸ್ತಿಗಳು, ಒಂದು ಫಿಲ್ಮ್‌ಫೇರ್ ಪ್ರಶಸ್ತಿ ಸೌತ್ ಮತ್ತು ಆರು ಸಿನಿಮಾ ಪ್ರಶಸ್ತಿಗಳನ್ನು ಗೆದ್ದಿದ್ದಾರೆ