ಮುರಿದುಬಿದ್ದ ಎ.ಆರ್. ರೆಹಮಾನ್ ದಾಂಪತ್ಯ ಬದುಕು; ಆಸ್ಕರ್ ವಿಜೇತ ಸಂಗೀತ ಮಾಂತ್ರಿಕನ ಒಟ್ಟು ಆಸ್ತಿ ಎಷ್ಟು?
ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆಯಲಿದ್ದಾರೆ ಎಂದು ಘೋಷಿಸಿದ್ದಾರೆ. ಅವರ ಆಸ್ತಿಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ
ಎ.ಆರ್. ರೆಹಮಾನ್ ಪತ್ನಿ ಸೈರಾ ಬಾನು
ಮಣಿರತ್ನಂ ನಿರ್ದೇಶನದ ರೋಜಾ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಎ.ಆರ್.ರೆಹಮಾನ್. ರೋಜಾ ಚಿತ್ರದ ಮೂಲಕ ಜನರಿಗೆ ಹೊಸ ರೀತಿಯ ಸಂಗೀತವನ್ನು ನೀಡಿ ಮೊದಲ ಚಿತ್ರದಲ್ಲೇ ಇಡೀ ತಮಿಳು ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದರು ರೆಹಮಾನ್.
ಎ.ಆರ್. ರೆಹಮಾನ್, ಇಳಯರಾಜ
ರೋಜಾ ಚಿತ್ರಕ್ಕೆ ಅವರು ಸಂಗೀತ ಸಂಯೋಜಿಸಿದ ಹಾಡುಗಳು ಇಂದಿಗೂ ಹಳೆಯದೆನಿಸುವುದಿಲ್ಲ. ಅವರ ಈ ಶ್ರಮಕ್ಕೆ ಮೊದಲ ಚಿತ್ರದಲ್ಲೇ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು ರೆಹಮಾನ್.
ಎ.ಆರ್. ರೆಹಮಾನ್
ನಂತರ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಕಾಲಿವುಡ್‌ನಲ್ಲಿ ರಾರಾಜಿಸಲು ಪ್ರಾರಂಭಿಸಿದರು. ಬಾಲಿವುಡ್, ಹಾಲಿವುಡ್ ಹೀಗೆ ಮುಂದುವರೆದು 2008 ರಲ್ಲಿ ಸ್ಲಂ ಡಾಗ್ ಮಿಲಿಯನೇರ್ ಚಿತ್ರಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದರು.
ಇಸೈಪುಯಲ್ ಎ.ಆರ್. ರೆಹಮಾನ್
ತಮಿಳು ಚಿತ್ರರಂಗದಲ್ಲಿ ಎ.ಆರ್. ರೆಹಮಾನ್ 30 ವರ್ಷಗಳನ್ನು ಪೂರೈಸಿದ್ದಾರೆ. ಇಂದಿಗೂ ಭಾರತದ ನಂಬರ್ 1 ಸಂಗೀತ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎ.ಆರ್. ರೆಹಮಾನ್ ಸಂಭಾವನೆ
ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್. ಒಂದು ಚಿತ್ರಕ್ಕೆ 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಒಂದು ಹಾಡಿಗೆ 3 ಕೋಟಿ ರೂ. ವರೆಗೆ ಸಂಭಾವನೆ ಪಡೆಯುತ್ತಾರೆ.
ಎ.ಆರ್. ರೆಹಮಾನ್ ಕುಟುಂಬ
ರೆಹಮಾನ್ ದುಬೈನಲ್ಲಿ ಅತ್ಯಾಧುನಿಕ ಸಂಗೀತ ಕೊಠಡಿಯನ್ನು ಹೊಂದಿದ್ದಾರೆ. ಚೆನ್ನೈನಲ್ಲಿ ಫಿಲ್ಮ್ ಸ್ಟುಡಿಯೋವನ್ನು ಹೊಂದಿದ್ದಾರೆ. ಸಂಗೀತ ಮಾಂತ್ರಿಕ 1995 ರಲ್ಲಿ ಸೈರಾ ಬಾನು ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ದಾರೆ.
ಎ.ಆರ್. ರೆಹಮಾನ್ ಆಸ್ತಿ
29 ವರ್ಷಗಳ ದಾಂಪತ್ಯ ಜೀವನಕ್ಕೆ ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ವಿಚ್ಛೇದನ ನೀಡಿದ್ದಾರೆ. ಎ.ಆರ್. ರೆಹಮಾನ್ ಅವರ ಆಸ್ತಿ 600 ರಿಂದ 650 ಕೋಟಿ ರೂ. ಇದೆ ಎಂದು ಅಂದಾಜಿಸಲಾಗಿದೆ.