Celebrity Engagement: ಅನ್ವಿತಾ ಗಂಗರಾಜು ಜತೆ ಹೊಸ ಬಾಳಿಗೆ ಬಾಹುಬಲಿ ಗಾಯಕ
ಹೈದರಾಬಾದ್(ಡಿ. 27) ಇಂಡಿಯನ್ ಐಡಲ್ (Indian Idol) ಸೀಸನ್ 9 ವಿನ್ನರ್ ಬಾಹುಬಲಿ (Baahubali) ಸಿಂಗರ್ ಎನ್ ವಿ ರೇವಂತ್ (LV Revanth) ಹೊಸ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಎಂಗೆಜ್ ಮೆಂಟ್ (Engagement) ಪೋಟೋಗಳನ್ನು ಶೇರ್ ಮಾಡಿದ್ದಾರೆ.

ಎಲ್ ವಿ ರೇವಂತ್ ತಮ್ಮ ಜೀವನದ ಸಂಗಾತಿಯನ್ನು ಆರಿಸಿಕೊಂಡಿದ್ದಾರೆ. ಅನ್ವಿತಾ ಗಂಗರಾಜು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಶುಕ್ರವಾರ ನಿಶ್ಚಿತಾರ್ಥ ನಡೆಯಿತು. ಸಮಾರಂಭದ ಚಿತ್ರಗಳನ್ನು ಅವರು Instagramನಲ್ಲಿ ಪೋಸ್ಟ್ ಮಾಡಿದ್ದು ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.
ಹೊಸ ಜೋಡಿ ರಿಂಗ್ ಬದಲಾಯಿಸಿಕೊಂಡಿದ್ದಾರೆ. ಪರಸ್ಪರರ ಕೊರಳಿಗೆ ಹೂಮಾಲೆ ಹಾಕುವ ಸಂಭ್ರಮವೂ ಕಳೆ ಕಟ್ಟಿದೆ. ಸಮಾರಂಭದ ಕ್ಯಾಂಡಿಡ್ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಜೋಡಿ ಮಿಂಚಿದ್ದಾರೆ.
ಸಂಭ್ರಮದ ಕ್ಷಣ ಎಂದು ಬರೆದುಕೊಂಡಿದ್ದಾರೆ. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಸಮಾರಂಭ ನೆರವೇರಿದೆ. ಗುಂಟೂರು ಗಾಯಕನ ಹುಟ್ಟೂರು.
ಇಂಡಿಯನ್ ಐಡಲ್ ಮೂಲಕ ಹೆಸರು ಸಂಪಾದನೆ ಮಾಡಿಕೊಂಡ ರೇವಂತ್ ನಂತರ ತಿರುಗಿ ನೋಡಲಿಲ್ಲ. ರಾಜಣ್ಣ, ಬದರಿನಾಥ್. 2015 ರಲ್ಲಿ ಬಾಹುಬಲಿ: ದಿ ಬಿಗಿನಿಂಗ್‌ಗೆ ದನಿ ನೀಡಿದರು.
ಅನೇಕ ಪುರಸ್ಕಾರಗಳಿಗೆ ಗಾಯಕ ಪಾತ್ರವಾಗಿದ್ದಾರೆ. 2017 ರಲ್ಲಿ ಇಂಡಿಯನ್ ಐಡಲ್ 9 ನಲ್ಲಿ ಜಯಗಳಿಸುವ ಮೂಲಕ ಹಿಂದಿ ಕೇಳುಗರಿಗೂ ಹತ್ತಿರವಾದರು. ಸೀಟಿಮಾರ್, ಬಿಗಿಲ್ ನ ಹಿಟ್ ಸಾಂಗ್ ಗಳು ಅವರದ್ದೇ ದನಿಯಲ್ಲಿ ಮೂಡಿಬಂದಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.