ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣದ ನಟಿ ಈಕೆ, ಒಂದು ಐಟಂ ಸಾಂಗ್‌ಗೆ 5 ಕೋಟಿ ರೂ!
ವಿಶೇಷ ನೃತ್ಯ ಅಥವಾ ಐಟಂ ಹಾಡುಗಳು, ಐಟಂ ನೃತ್ಯ ಸಿನೆಮಾದ ಒಂದು ಪ್ರಮುಖ ಭಾಗವಾಗಿದೆ. ಐಟಂ ಹಾಡುಗಳು ಯಾವುದೇ ಚಲನಚಿತ್ರದ ಪ್ರಚಾರ ಮತ್ತು ಮಾರುಕಟ್ಟೆ ಪ್ರಚಾರದ ದೊಡ್ಡ ಭಾಗವಾಗಿದೆ. ಈ ಹಾಡಿನ ನೃತ್ಯದಲ್ಲಿ ಹೆಚ್ಚಾಗಿ ಈಗ ದೊಡ್ಡ ಹೆಸರು ಮಾಡಿದ ನಟಿಯರು ತಮ್ಮ ಸೊಂಟ ಬಳಕಿಸುತ್ತಾರೆ. ಇದು ಚಲನಚಿತ್ರಕ್ಕೆ ದೊಡ್ಡ ಆಕರ್ಷಣೆಯಾಗಿ ಬಿಂಬಿಸಲಾಗಿದೆ. ಸ್ವಾಭಾವಿಕವಾಗಿ, ಅವುಗಳಲ್ಲಿ ಕಾಣಿಸಿಕೊಳ್ಳುವ ನೃತ್ಯಗಾರರು, ನಟಿಯರು ಹಾಟ್ ಆಗಿಯೇ ಕಾಣಿಸುತ್ತಾರೆ. ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಟಾಪ್ ನಲ್ಲಿದ್ದಾರೆ ದಕ್ಷಿಣ ಭಾರತದ ಈ ನಟಿ. ಇವರು ಒಂದೇ ಹಾಡಿಗೆ 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
ನಟ ಅಲ್ಲು ಅರ್ಜುನ್‌ನ ಪುಷ್ಪಾ ಸಿನೆಮಾ ಬ್ಲಾಕ್ ಬ್ಲಸ್ಟರ್ ಹಿಟ್ ಆಗಿತ್ತು. ಈ ಚಿತ್ರದ ಊ ಅಂಟವಾ ಮಾಮ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಸಮಂತಾ ರುತ್ ಪ್ರಭು ಅವರು 5 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದರು ಎಂಬ ಅಂಶ ಬಯಲಾಗಿದೆ.
ಅಂದರೆ ಪುಷ್ಪಾ ಚಿತ್ರದ ಈ ಹಾಡು 4 ನಿಮಿಷಗಳ ಒಳಗೆ ಇದೆ. 1 ನಿಮಿಷಕ್ಕೆ 1 ಕೋಟಿಗೂ ಹೆಚ್ಚು ಸಂಭಾವನೆ ಪಡೆದಂತಾಗಿದೆ. ಒಂದು ಹಾಡಿಗೆ ಈ ರೀತಿಯ ಗಳಿಕೆಯನ್ನು ಯಾವುದೇ ಭಾರತೀಯ ನಟಿ ಪಡೆದಿಲ್ಲ ಎನ್ನಲಾಗಿದೆ.
ನಟಿ ಸಮಂತಾ (Samantha) ಹಾಗೂ ವಿಜಯ್ ದೇವರಕೊಂಡ (Vijay Deverakonda) ಅಭಿನಯಿಸಿರುವ ಖುಷಿ ಸಿನಿಮಾ (Kushi Movie) ಸೆಪ್ಟೆಂಬರ್ 1ರಂದು ತೆರೆಗೆ ಬರಲಿದೆ. ಸಿನಿಮಾ ಟ್ರೈಲರ್, ಹಾಡು ಹಿಟ್ ಆಗಿದೆ. ಸದ್ಯ ನಟಿ ಸಮಂತಾ ಅಮೆರಿಕಾದಲ್ಲಿದ್ದಾರೆ. ಅವರೂಪದ ಕಾಯಿಲೆ ಮೈಯೋಸಿಟಿಸ್ ಗೆ (ಸ್ನಾಯು ಉರಿಯೂತ) ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ ಕೂಡ ಅವರು ಚಿಕಿತ್ಸೆ ಪಡೆದು ಬಂದಿದ್ದರು.
ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಳ್ಳಲು ಹೆಸರುವಾಸಿಯಾದ ಹಲವಾರು ನಟಿಯರಿದ್ದಾರೆ. ಮಲೈಕಾ ಅರೋರಾ ಬಹುಶಃ ಈ ಹೆಸರುಗಳಲ್ಲಿ ಅತ್ಯಂತ ಟಾಪ್‌ನಲ್ಲಿದ್ದಾರೆ. ನಟಿ ಪ್ರತಿ ಹಾಡಿಗೆ 50 ಲಕ್ಷದಿಂದ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಡ್ಯಾನ್ಸ್ ನಂಬರ್‌ಗಳ ರಾಣಿ ನೋರಾ ಫತೇಹಿ, ವರದಿಗಳ ಪ್ರಕಾರ ಪ್ರತಿ ಹಾಡಿಗೆ 2 ಕೋಟಿ ರೂ. ಬಾಲಿವುಡ್‌ನ ಅತ್ಯಂತ ದುಬಾರಿ ಐಟಂ ಹುಡುಗಿಯರಲ್ಲಿ ಸನ್ನಿ ಲಿಯೋನ್ ಕೂಡ ಒಬ್ಬರು, ಪ್ರತಿ ಹಾಡಿಗೆ 2-3 ಕೋಟಿ ರೂ. ಪಡೆಯುತ್ತಾರೆ.
ಆದರೆ ಐಟಂ ಡ್ಯಾನ್ಸ್ ವಿಚಾರಕ್ಕೆ ಬಂದರೆ ಹೆಚ್ಚು ಹಣ ವಸೂಲಿ ಮಾಡುವವರು ಪ್ರಮುಖ ನಟಿಯರೇ ಆಗಿದ್ದಾರೆ. ಕರೀನಾ ಕಪೂರ್ ಹಲವಾರು ವರ್ಷಗಳ ಹಿಂದೆ ಈ ಐಟಂ ಡ್ಯಾನ್ಸ್ ಮಾಡುವಾಗ 1.5 ಕೋಟಿ ರೂ. ಸಂಭಾವನೆ ಪಡೆದಿದ್ದರು.
ತಮನ್ನಾ ಭಾಟಿಯಾ ಪ್ರತಿ ಹಾಡಿಗೆ 1 ಕೋಟಿ ರೂ ಗಳಿಸಿದ್ದಾರೆ ಎಂದು ವರದಿಯಾಗಿದೆ, ಆದರೆ ಕತ್ರಿನಾ ಕೈಫ್ ಪ್ರತಿ ಹಾಡಿಗೆ 2 ಕೋಟಿ ರೂ. ಈ ಕೆಲಸಕ್ಕಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇನ್ನು ಜಾಕ್ವೆಲಿನ್ ಫರ್ನಾಂಡೀಸ್ ಅವರು ಕಾಣಿಸಿಕೊಳ್ಳುವ ಪ್ರತಿ ಹಾಡಿಗೆ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಇನ್ನು ಖ್ಯಾತ ನಟಿ, ಮಾಡೆಲ್ ಊರ್ವಶಿ ರೌಟೇಲ ಕೂಡ ಇದಕ್ಕೆ ಹೊರತಾಗಿಲ್ಲ. 3 ನಿಮಿಷದ ಐಟಂ ಡ್ಯಾನ್ಸ್ ಗೆ 3 ಕೋಟಿ ಸಂಭಾವನೆ ಪಡೆಯುತ್ತಾರೆ ಎಂದು ವರದಿ ತಿಳಿಸಿದೆ. ಮಾತ್ರವಲ್ಲ ಅಲ್ಲು ಅರ್ಜುನ್ ಅವರ ಪುಷ್ಪಾ-2 ಸಿನೆಮಾದ ಮೂರು ನಿಮಿಷಗಳ ಹಾಡಿಗೆ 6 ರಿಂದ 7 ಕೋಟಿ ರೂ. ಪಡೆದಿದ್ದಾರೆ ಎಂದು ಸುದ್ದಿ ಹಬ್ಬಿದೆ. ಆದರೆ ಇದು ಎಷ್ಟು ನಿಜವೋ ಗೊತ್ತಿಲ್ಲ.