ಭಾರತದ ಅತ್ಯಂತ ವಿವಾದಿತ ನಟಿಯ ಬಾಲ್ಯದ ಫೋಟೋಗಳು: ಯಾರೆಂದು ಗುರುತಿಸಬಲ್ಲಿರಾ?!
ಬಾಲಿವುಡ್ ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದ ಈ ನಟಿ, ಬರ ಬರುತ್ತಾ ತಮ್ಮ ಹೇಳಿಕೆ ಹಾಗೂ ಉಡುಗೆಗಳಿಂದ ಭಾರೀ ವಿವಾದಕ್ಕೆ ಒಳಗಾಗಿದ್ದಾಳೆ. ತನ್ನ ಬಗ್ಗೆ ತಾನೇ ವಿವಾದ ಮೈಮೇಲೆ ಎಳೆದುಕೊಂಡ ಈ ನಟಿಯ ಬಾಲ್ಯದಿಂದ ಈಯವರೆಗಿನ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ..

ಬಾಲಿವುಡ್‌ನಲ್ಲಿ ನಟಿಸಿದ ಎಲ್ಲ ನಟಿಯರೂ ಕೂಡ ಸ್ಟಾರ್ ನಟಿಯರ ಪಟ್ಟ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಪ್ರತಿಭೆಗಿಂತಲೂ ಹೆಚ್ಚಾಗಿ ಮೈಮಾಟ ತೋರಿಸಿದ ಅನೇಕ ನಟಿಯರು ಹೇಳ ಹೆಸರಿಲ್ಲದಂತೆ ಹೋಗಿದ್ದಾರೆ. ಅದೇ ರೀತಿ ಈ ಬಾಲಿವುಡ್ ನಟಿಯೂ ಕೂಡ ಅಗತ್ಯಕ್ಕಿಂತ ಹೆಚ್ಚಾಗಿ ಬಟ್ಟೆ ಬಿಚ್ಚಿದ್ದೇ ವಿವಾದಿತ ನಟಿ ಎಂಬ ಕುಖ್ಯಾತಿಗೆ ಕಾರಣಬವಾಗಿದೆ. ಈ ನಟಿ ಯಾರೆಂದು ಈಗಲಾದರೂ ಗುರುತಿಸುತ್ತೀರಾ?
ಬಹುತೇಕರು ಫೋಟೋ ನೋಡಿದಾಕ್ಷಣ ಹೋಲಿಕೆ ಮಾಡಿ ಯಾರೆಂದು ಗುರುತಿಸಿರಬಹುದು. ಇನ್ನು ಕೆಲವರು ಬೇರೆ ಬೇರೆ ಹೆಸರುಗಳನ್ನು ಕೂಡ ಊಹಿಸಿರಬಹುದು. ಈ ನಟಿ ಬೇರೆ ಯಾರೂ ಅಲ್ಲ, ವಿವಾದಿತ ನಟಿ ಎಂದೇ ಖ್ಯಾತಿ ಪಡೆದ ಪೂನಂ ಪಾಂಡೆ. ಪೂನಂ ಪಾಂಡೆ ಅಪರೂಪದ ಫೋಟೋಗಳು ಇಲ್ಲಿವೆ. ಬಾಲಿವುಡ್ ನಟಿ ಮತ್ತು ಮಾಡೆಲ್ ಪೂನಂ ಪಾಂಡೆ ಮಾ.11ರ 1991 ರಂದು ಕಾನ್ಪುರದಲ್ಲಿ ಜನಿಸಿದ್ದಾರೆ. ಇದೀಗ ಪೂನಂ ಪಾಂಡೆಗೆ 34 ವರ್ಷವಾಗಿದೆ.
ಪೂನಂ ಪಾಂಡೆ ಕಾನ್ಪುರದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. 2010 ರಲ್ಲಿ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪೂನಂ ಪಾಂಡೆ 2013 ರಿಂದ ಫಿಲ್ಮ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರು. ಆದರೆ ಅವರಿಗೆ ನಿಜವಾದ ಜನಪ್ರಿಯತೆ ಸಾಮಾಜಿಕ ಮಾಧ್ಯಮದಿಂದ ಸಿಕ್ಕಿತು.
2011 ರಲ್ಲಿ ಪೂನಂ ಪಾಂಡೆ ಭಾರತೀಯ ಕ್ರಿಕೆಟ್ ತಂಡವು ವರ್ಲ್ಡ್ ಕಪ್ ಗೆದ್ದರೆ ನಾನು ಬೆತ್ತಲಾಗುತ್ತೇನೆ ಎಂದು ಹೇಳಿದಾಗ ಸುದ್ದಿಯಲ್ಲಿದ್ದರು. ಇದಾದ ನಂತರ BCCI ನನಗೆ ಬೆತ್ತಲಾಗಲು ಅನುಮತಿ ನೀಡಲಿಲ್ಲ ಎಂದು ಪೂನಂ ಪಾಂಡೆ ಹೇಳಿಕೊಂಡಿದ್ದರು. ನಂತರ ಪೂನಂ ತಮ್ಮ ಬೆತ್ತಲೆ ವಿಡಿಯೋವನ್ನು ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ್ದರು.
2012 ರಲ್ಲಿ ಐಪಿಎಲ್ ಸಮಯದಲ್ಲಿ ಶಾರುಖ್ ಖಾನ್ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದಾಗ, ಪೂನಂ ಪಾಂಡೆ ಬೆತ್ತಲೆ ಫೋಸ್ ನೀಡಿದ್ದರು. ಇದಾದ ನಂತರ ಆಕೆ ಹೆಚ್ಚಾಗಿ ವಿವಾದಗಳಲ್ಲಿಯೇ ಸುದ್ದಿಯನ್ನು ಹಾಗೂ ಜನಪ್ರಿಯತೆಯನ್ನು ಗಿಟ್ಟಿಸಿಕೊಳ್ಳಲು ಮುಂದಾದರು.
ಪೂನಂ ಪಾಂಡೆ 2013 ರಲ್ಲಿ 'ನಶಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ಅವರು 'ದಿ ಜರ್ನಿ ಆಫ್ ಕರ್ಮ'ದಲ್ಲಿ ಕಾಣಿಸಿಕೊಂಡರು.
ಪೂನಂ ಪಾಂಡೆ 2017 ರಲ್ಲಿ ತನ್ನ ವೀಡಿಯೊಗಳನ್ನು ತಲುಪಿಸಲು ಪ್ಲೇ ಸ್ಟೋರ್‌ನಲ್ಲಿ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು.