ಸಾರಾ- ತೈಮೂರ್ ನಿಂದ, ಪೂಜಾ -ಆಲಿಯಾವರೆಗೂ… ಈ ಸ್ಟಾರ್ ಕಿಡ್ಸ್ ವಯಸ್ಸಿನ ಅಂತರ ಎಷ್ಟು?
ಸಾರಾ ಅಲಿ ಖಾನ್-ತೈಮೂರ್ ಅಲಿ ಖಾನ್ ನಿಂದ ಆರ್ಯನ್ ಖಾನ್-ಅಬ್ರಾಮ್ ವರೆಗೆ ಹೆಚ್ಚು ವಯಸ್ಸಿನ ಅಂತರವನ್ನು ಹೊಂದಿರುವ ಸೆಲೆಬ್ರಿಟಿ ಸ್ಟಾರ್ ಕಿಡ್ಸ್ ವಿವರ ಇಲ್ಲಿದೆ.
ಬಾಲಿವುಡ್ ಚಿತ್ರರಂಗ (bollywood) ಯಶಸ್ಸಿನ ಉತ್ತುಂಗದಲ್ಲಿರೋದಕ್ಕೆ ಸ್ಟಾರ್ ಕಿಡ್ಸ್ ಮುಖ ಕಾರಣ ಅನ್ನೋದ್ರಲ್ಲಿ ತಪ್ಪಿಲ್ಲ. ಯಾಕಂದ್ರೆ ಹೆಚ್ಚಿನ ನಟರು ಫಿಲ್ಮಿ ಹಿನ್ನೆಲೆಯಿಂದ ಬಂದವರೆ. ಈಗ ವಿಚಾರ ಅದಲ್ಲ ಬಾಲಿವುಡ್ ಸ್ಟಾರ್ ಕಿಡ್ಸ್ ನಡುವಿನ ದೊಡ್ಡ ವಯಸ್ಸಿನ ಅಂತರದ ಬಗ್ಗೆ ಮಾಹಿತಿ ಇದೆ. ಸಾರಾ ಅಲಿ ಖಾನ್-ತೈಮೂರ್ ಅಲಿ ಖಾನ್ನಿಂದ ಆರ್ಯನ್ ಖಾನ್-ಅಬ್ರಾಮ್ ವರೆಗೆ; ತುಂಬಾ ವಯಸ್ಸಿನ ಅಂತರವನ್ನು ಹೊಂದಿರುವ ಸೆಲೆಬ್ರಿಟಿ ಸ್ಟಾರ್ ಕಿಡ್ಸ್ ಬಗ್ಗೆ ಇಲ್ಲಿದೆ ಮಾಹಿತಿ.
ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಪುತ್ರಿ ಸಾರಾ ಅಲಿ ಖಾನ್ (Sara Ali Khan), ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಮಗು ತೈಮೂರ್. ತೈಮೂರ್ ತನ್ನ ಮಲ ಸಹೋದರಿ ಸಾರಾಗಿಂತ 23 ವರ್ಷ ಚಿಕ್ಕವನು.
ಇಶಾನ್ ಖಟ್ಟರ್ ಅವರು ಶಾಹಿದ್ ಕಪೂರ್ (Shahid Kapoor) ಅವರ ಮಲ ಸಹೋದರ. ಶಾಹಿದ್ ಇಶಾನ್ ಗಿಂತ 14 ವರ್ಷ ದೊಡ್ಡವರು ಎಂದು ಹೇಳಲಾಗುತ್ತದೆ. ಇಬ್ಬರೂ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಪೂಜಾ ಭಟ್ ಮತ್ತು ಅವರ ಮಲ ಸಹೋದರಿ ಆಲಿಯಾ ಭಟ್ (Alia Bhatt) ಉದ್ಯಮದಲ್ಲಿ ತಮ್ಮ ನಟನೆಯಿಂದ ಜನಪ್ರಿಯತೆ ಪಡೆದಿದ್ದಾರೆ. ಆಲಿಯಾ ಪೂಜಾಗಿಂತ 21 ವರ್ಷ ಚಿಕ್ಕವರು ಅನ್ನೋದು ನಿಮಗೆ ಗೊತ್ತಾ?
ಇಶಾನ್ ಖಟ್ಟರ್ ಅವರು ಶಾಹಿದ್ ಕಪೂರ್ (Shahid Kapoor) ಅವರ ಮಲ ಸಹೋದರ. ಶಾಹಿದ್ ಇಶಾನ್ ಗಿಂತ 14 ವರ್ಷ ದೊಡ್ಡವರು ಎಂದು ಹೇಳಲಾಗುತ್ತದೆ. ಇಬ್ಬರೂ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಅಮೀರ್ ಖಾನ್ (Aamir Khan) ಜುನೈದ್ ಖಾನ್ ಮತ್ತು ಆಜಾದ್ ರಾವ್ ಖಾನ್ ಅವರ ತಂದೆ. ಜುನೈದ್ ತನ್ನ ಮಲ ಸಹೋದರ ಆಜಾದ್ ಗಿಂತ 18 ವರ್ಷ ದೊಡ್ಡವನು. ಅಜಾದ್ ತಾಯಿ ಕಿರಣ್ ರಾವ್.
ಜಾನ್ವಿ ಕಪೂರ್ ಮತ್ತು ಅರ್ಜುನ್ ಕಪೂರ್ (Arjun Kapoor) ನಿರ್ದೇಶಕ ಬೋನಿ ಕಪೂರ್ ಅವರ ಮಕ್ಕಳು. ಇಬ್ಬರಿಗೂ ಬರೋಬ್ಬರಿ 12 ವರ್ಷಗಳ ವಯಸ್ಸಿನ ಅಂತರವಿದೆ.
ತ್ರಿಶಾಲಾ ದತ್ ಸಂಜಯ್ ದತ್ (Sanjay Dutt) ಮತ್ತು ಅವರ ಮೊದಲ ಹೆಂಡತಿಯ ಮಗಳು, ಇಕ್ರಾ ಮತ್ತು ಶಹ್ರಾನ್ ಸಂಜಯ್ ಮತ್ತು ಅವರ ಎರಡನೇ ಹೆಂಡತಿಯ ಮಕ್ಕಳು. ತ್ರಿಶಾಲಾ ತನ್ನ ಮಲ ಒಡಹುಟ್ಟಿದವರಿಗಿಂತ 22 ವರ್ಷ ದೊಡ್ಡವಳು.