ಜಾತಕದಲ್ಲಿ ಸಮಸ್ಯೆ - ಆಲಿಯಾ ರಣಬೀರ್ ಮದುವೆಗೆ ಮತ್ತೊಂದು ಕಂಟಕ!
ಬಾಲಿವುಡ್‌ನ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಹಳ ಸಮಯದಿಂದ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಇಬ್ಬರ ಮದುವೆ ಬಗ್ಗೆ ಆಗಾಗ್ಗೆ ವರದಿಗಳು ಬರುತ್ತವೆ. ಕೆಲವು ದಿನಗಳ ಹಿಂದೆ ಆಲಿಯಾ ಮತ್ತು ರಣಬೀರ್ ಈ ವರ್ಷದ ಕೊನೆಯ ವೇಳೆಗೆ ವಿವಾಹವಾಗಲಿದ್ದಾರೆ ಎಂದು ರೂಮರ್ ಇತ್ತು. ಆದರೆ ಈ ಮದುವೆ ಯಾವಾಗ ನಡೆಯುತ್ತದೆ ಎಂದು ಸಮಯವೇ ಹೇಳಬೇಕು. ಏಕೆಂದರೆ ಕೆಲವು ತಿಂಗಳ ಹಿಂದೆ ಜ್ಯೋತಿಷಿಯೊಬ್ಬರು ಅಲಿಯಾ ಜಾತಕವನ್ನು ನೋಡಿ ಈ ಮದುವೆಗೆ ಆಗುವ ಅಡೆತಡೆಗಳ ಬಗ್ಗೆ ಹೇಳಿದ್ದರಂತೆ. ಅದಕ್ಕೆ ಸರಿಯಾಗಿ ರಣಬೀರ್ ತಂದೆ ರಿಷಿ ಕಪೂರ್ ಅಸುನೀಗಿದ್ದೂ ಜ್ಯೋತಿಷಿ ಸಲಹೆಗೆ ಇಂಬು ಕೊಟ್ಟಂತೆ ಆಗಿದೆ.

ಅಲಿಯಾ ಮತ್ತು ರಣಬೀರ್‌ರ ಜಾತಕದ ಪ್ರಕಾರ ಈ ಜೋಡಿ 2019ರ ಅಕ್ಟೋಬರ್ ನಿಂದ 2020ರ ಅಂತ್ಯದೊಳಗೆ ಹಸೆಮಣೆ ಏರುತ್ತಾರೆ ಎಂದು ಎಂದು ಜ್ಯೋತಿಷಿ ಆಚಾರ್ಯ ವಿನೋದ್ ಕುಮಾರ್ ಹೇಳುತ್ತಾರೆ.

ಶುಕ್ರ ಗ್ರಹ ಪ್ರೀತಿ ಮತ್ತು ಪ್ರಣಯದಡೆಗೆ ತೋರಿಸುತ್ತಿದೆ ಹಾಗೂ ಎರಡೂ ಜಾತಕಗಳಲ್ಲಿನ ನಕ್ಷತ್ರಗಳು ಅತ್ಯಂತ ಸಕಾರಾತ್ಮಕವಾಗಿವೆ. ಆದಾಗ್ಯೂ, ಆಲಿಯಾ ಭಟ್ ಅವರ ಜಾತಕವು ಸಮಸ್ಯೆಯನ್ನು ಸೂಚಿಸುತ್ತದೆ, ಇದು ಕೆಲವು ಗೊಂದಲ ಅಥವಾ ತಪ್ಪು ತಿಳುವಳಿಕೆಗೆ ಕಾರಣವಾಗಬಹುದು. ಈ ಕಾರಣದಿಂದಾಗಿ, ಮದುವೆ ವಿಳಂಬವಾಗಬಹುದು.

ಎರಡೂ ಕುಟುಂಬಗಳು ಅವರ ಜ್ಯೋತಿಷಿಗಳ ಜೊತೆ ಮಾತಾಡಿ ಈ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತವೆ ಎಂದು ನನಗೆ ಖಾತ್ರಿಯಿದೆ. ಈ ಜೋಡಿಗಳು ಈ ಸಮಸ್ಯೆಯನ್ನು ಪರಿಹರಿಸಿದರೆ ಅದು ಅವರ ವೃತ್ತಿಜೀವನದ ಬೆಳವಣಿಗೆಯಲ್ಲಿ ಬಹಳ ಸಕಾರಾತ್ಮಕ ಸಂಗತಿ ಎಂದು ಸಾಬೀತುಪಡಿಸುತ್ತದೆ. ಅಲ್ಲದೆ, ಮುಂದಿನ ವರ್ಷಗಳಲ್ಲಿ ಪ್ರಗತಿಯನ್ನು ಸಾಗಿಸಿ ಮುಂದುವರಿಯುತ್ತಾರೆ - ಆಚಾರ್ಯ ವಿನೋದ್ ಕುಮಾರ್.

ಈ ಮೊದಲು ರಣಬೀರ್ ಮತ್ತು ಆಲಿಯಾ ಇಬ್ಬರೂ ಅನೇಕ ಬ್ರೇಕ್‌ಅಪ್‌ಗಳನ್ನು ಹೊಂದಿದ್ದಾರೆಂದು ತಿಳಿದೇ ಇದೆ. ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯವನ್ನು ನೀಡುತ್ತಿದ್ದು, ಮದುವೆ ವಿಳಂಬಕ್ಕೆ ಒಂದು ಕಾರಣವೂ ಆಗಿರಬಹುದು.

ಕೆಲವು ದಿನಗಳ ಹಿಂದೆ ಈ ಜೋಡಿ ಡಿಸೆಂಬರ್‌ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳಲಿದೆ ಎಂಬ ಸುದ್ದಿ ಹರಿದಾಡಿತ್ತು.

ಅವರು ಡಿಸೆಂಬರ್‌ನಲ್ಲೇ ವಿವಾಹವಾಗಲಿದ್ದಾರೆ, ಆದರೆ ಮುಂಬೈನಲ್ಲಿಯೇ ಎಂದು ಈಗ ಇತ್ತೀಚಿನ ವರದಿಗಳು ಹೇಳುತ್ತೀವೆ.

ವರದಿಗಳ ಪ್ರಕಾರ, ವಿವಾಹದ ಕಾರ್ಯಗಳು ಡಿಸೆಂಬರ್ 21ರಿಂದ ಪ್ರಾರಂಭವಾಗಲಿದ್ದು, ಮುಂದಿನ 4 ದಿನಗಳವರೆಗೆ ನೆಡೆಯುತ್ತದೆ. ಈ ವರ್ಷದ ಕೊನೆಯಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆಯಾದ ನಂತರ ಇಬ್ಬರೂ ಮದುವೆಯಾಗಲಿದ್ದಾರಂತೆ .

ಮೇ 2018ರಲ್ಲಿ ಸೋನಮ್ ಕಪೂರ್ ಅವರ ಮದುವೆಗೆ ಒಟ್ಟಿಗೆ ತಲುಪಿದ ನಂತರದಿಂದ ಆಲಿಯಾ-ರಣಬೀರ್ ಅಫೇರ್ ಸುದ್ದಿ ಅಫಿಶಿಯಲ್ ಆಗಿ ಬೆಳಕಿಗೆ ಬಂತು.

ರಣಬೀರ್ ಮತ್ತು ಆಲಿಯಾ ಮೊದಲ ಬಾರಿಗೆ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅಯಾನ್ ಮುಖರ್ಜಿ ಅವರ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್ ಮತ್ತು ಡಿಂಪಲ್ ಕಪಾಡಿಯಾ ನಟಿಸಿದ್ದಾರೆ.