ವಾಯ್ಸ್ ಚೆನ್ನಾಗಿರಬೇಕು ಎಂದು ವೀರ್ಯದ ಕಾಕ್ಟೆಲ್ ಕುಡಿತಾರಂತೆ ಈ ಖ್ಯಾತ ಗಾಯಕಿ!
ಗಾಯಕರು ತಮ್ಮ ವಾಯ್ಸ್ ಚೆನ್ನಾಗಿರಲು ಏನೇನೋ ಔಷಧಿಗಳನ್ನು ಕುಡಿಯುತ್ತಿರುತ್ತಾರೆ. ಆದರೆ ಇಲ್ಲೊಬ್ಬರು ಸಿಂಗರ್ ತಮ್ಮ ವಾಯ್ಸ್ ಸ್ವೀಟ್ ಆಗಿರಲಿ ಎಂದು ಸ್ಪರ್ಮ್ ಕುಡಿಯುತ್ತಾರಂತೆ.

ನಟರು ಚಿತ್ರರಂಗದಲ್ಲಿ ಉಳಿಯಲು ಏನು ಮಾಡಲ್ಲ ಹೇಳಿ? ತಮ್ಮ ಫಿಟ್ನೆಸ್, ಸೌಂದರ್ಯ ಹೆಚ್ಚಿಸಿಕೊಳ್ಳಲು ಏನೇನೋ ಮಾಡುತ್ತಾರೆ. ಹಾಗೆಯೇ ಅನೇಕ ಗಾಯಕರು ತಮ್ಮ ಧ್ವನಿಯ ಪಿಚ್ ಕಾಪಾಡಿಕೊಳ್ಳಲು ಬಿಸಿನೀರನ್ನು ಕುಡಿಯುತ್ತಾರೆ. ಐಸ್ ಕ್ರೀಂ ಸೇರಿ ಕೆಲವು ವಸ್ತುಗಳಿಂದ ದೂರಾನು ಉಳಿಯುತ್ತಾರೆ. ಆದರೆ ಎಲ್ಲವನ್ನೂ ಮಾಡೋದು ಅಷ್ಟೊಂದು ಸುಲಭ ಅಲ್ಲ.
ಇಲ್ಲೊಬ್ಬ ಗಾಯಕಿ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (viral video) ಆಗುತ್ತಿದ್ದು, ತಮ್ಮ ವಾಯ್ಸ್ ಚೆನ್ನಾಗಿರಬೇಕೆಂದು ಅವರು ಏನನ್ನು ಕುಡಿಯುತ್ತಾರೆ ಎಂದು ಹೇಳಿರುವ ಈ ವಿಡೀಯೋ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಅಮೇರಿಕನ್ ಖ್ಯಾತ ಗಾಯಕಿ ಜೆಸ್ಸಿಕಾ ಸಿಂಪ್ಸನ್ (Singer Jessica Simpson) ತನ್ನ ಮಧುರ ಧ್ವನಿಯ ರಹಸ್ಯವನ್ನು ಬಹಿರಂಗಪಡಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 44 ವರ್ಷದ "ಸ್ವೀಟ್ ಕಿಸಸ್" ಮತ್ತು "ಇನ್ ದಿ ಸ್ಕಿನ್" ಗಾಯಕಿ ತನ್ನ ಧ್ವನಿಯನ್ನು ಆರೋಗ್ಯಕರವಾಗಿಡಲು ಹಾವಿನ ವೀರ್ಯವನ್ನು ಒಳಗೊಂಡಿರುವ ಚೀನೀ ಗಿಡಮೂಲಿಕೆಗಳ ಕಾಕ್ಟೈಲ್ ಅನ್ನು ಕುಡಿಯುವುದಾಗಿ ಹೇಳಿಕೊಂಡಿದ್ದಾರೆ.
ಹೌದು, ನೀವು ಸರಿಯಾಗಿಯೇ ಓದಿದ್ದೀರಿ, ಜೆಸ್ಸಿಕಾ ತನ್ನ ಧ್ವನಿಯನ್ನು ಸುಧಾರಿಸಲು ಹಾವಿನ ವೀರ್ಯವನ್ನು (snake sperm) ಸೇವಿಸುತ್ತಾಳೆ. ಅವರಿಗೆ ಸಂಗೀತ ಕಲಿಸುವ ಮ್ಯೂಸಿಕ್ ಟ್ರೈನರ್ ಅವರೇ ಹಾವಿನ ವೀರ್ಯವನ್ನು ಕುಡಿಯೋದಕ್ಕೆ ಸೂಚಿಸಿದ್ದರು ಎಂದು ತಿಳಿದರೆ ಖಂಡಿತಾ ಅಚ್ಚರಿಯಾಗಬಹುದು.
ಜೆಸ್ಸಿಕಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ (Instagram video) ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ಧ್ವನಿಯನ್ನು ಸ್ವೀಟ್ ಆಗಿರಿಸಲು ತಾವು ಕುಡಿಯುವ ವಿಶೇಷ ಪಾನೀಯದ ಬಗ್ಗೆ ಮಾತನಾಡುತ್ತಾರೆ. ಅವರು ವೀಡಿಯೊದಲ್ಲಿರುವ ಆ ಪಾನೀಯದಲ್ಲಿರುವ ಪದಾರ್ಥಗಳ ಪಟ್ಟಿಯನ್ನು ಬಹಿರಂಗಪಡಿಸಿದಾಗ,ಅಭಿಮಾನಿಗಳಿಗೆ ಅಚ್ಚರಿಯಾಗಿದೆ. ಯಾಕಂದ್ರೆ, ಈ ಪಾನೀಯದಲ್ಲಿ ಚೀನೀ ಗಿಡಮೂಲಿಕೆಗಳನ್ನು ಸೇರಿಸಲಾಗಿದೆ ಎಂದು ಗಾಯಕಿ ಹೇಳಿದ್ದು, ಗೂಗಲ್‌ನಲ್ಲಿ ಹುಡುಕಿದಾಗ ಅದರಲ್ಲಿ ಹಾವಿನ ವೀರ್ಯ ಇರುವುದು ಕಂಡುಬಂದಿದೆ ಎಂದಿದ್ದಾರೆ.
ಆ ಕ್ಲಿಪ್‌ನಲ್ಲಿ, ಜೆಸ್ಸಿಕಾ ತನ್ನ ಸ್ನೇಹಿತರ ಜೊತೆ ಮಾತನಾಡುತ್ತಾ ಏನನ್ನೋ ಕುಡಿಯುತ್ತಿರುತ್ತಾರೆ, ಆವಾಗ ಸ್ನೇಹಿತರೊಬ್ಬರು 'ನೀವು ಏನು ಕುಡಿಯುತ್ತಿದ್ದೀರಿ?' ಎಂದು ಕೇಳುತ್ತಿದ್ದರು. ಅದಕ್ಕೆ ಜೆಸ್ಸಿಕಾ ಅದು ಚೀನೀ ಗಿಡಮೂಲಿಕೆಯಂತಿದೆ ಎಂದು ಉತ್ತರಿಸಿದೆ. ನನ್ನ ಗಾಯನ ತರಬೇತುದಾರರು ಅದನ್ನು ಕುಡಿಯಲು ಹೇಳಿದರು. ಆದರೆ ಗೂಗಲ್ ಮಾಡಿದಾಗ ಅದರಲ್ಲಿ ಹಾವಿನ ವೀರ್ಯವಿರುವುದು ಗೊತ್ತಾಗಿದೆ, ಇದು ತುಂಬಾ ಸ್ವೀಟ್ ಆಗಿದೆ ಎಂದಿದ್ದಾರೆ.
"ಆದ್ದರಿಂದ, ನಿಮಗೆ ಉತ್ತಮ ಗಾಯನ ಬೇಕಾದರೆ, ನೀವು ಹಾವಿನ ವೀರ್ಯವನ್ನು ಕುಡಿಯಬೇಕು" ಎಂದು ಅವರು ಹೇಳಿದ್ದಾರೆ ಜೆಸ್ಸಿಕಾ. ಹಾಲಿವುಡ್ ಗಾಯಕಿ ಈ ವೀಡಿಯೊವನ್ನು ಮೈಕ್ರೊಫೋನ್ ಎಮೋಜಿ ಜೊತೆಗೆ ಹಾವು ಮತ್ತು ಟೆಸ್ಟ್ ಟ್ಯೂಬ್ ಎಮೋಜಿಯೊಂದಿಗೆ ಶೇರ್ ಮಾಡಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.