ಹೋಳಿ 2022: ರಣಬೀರ್ ಕಪೂರ್ ಸೇರಿದಂತೆ ಈ ಸ್ಟಾರ್ಸ್‌ಗೆ ಹೋಳಿ ಹಬ್ಬ ಇಷ್ಷವಿಲ್ಲ ಕಾರಣವೇನು ಗೊತ್ತಾ?
ಹೋಳಿ ಹಬ್ಬವನ್ನು (Holi 2022) ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ ಕೆಲವು ಬಾಲಿವುಡ್ ತಾರೆಯರು ಬಣ್ಣಗಳಿಂದ ದೂರವಿರುತ್ತಾರೆ, ಅವರು ಹೋಳಿ ಹಬ್ಬವನ್ನು ಇಷ್ಟಪಡುವುದಿಲ್ಲ ಅಥವಾ ಕೆಲವು ಕಾರಣದಿಂದ ಅವರು ಬಣ್ಣಗಳಿಂದ ದೂರವಿರುತ್ತಾರೆ. ಹೋಳಿಯಿಂದ ದೂರವಿರುವ ಬಾಲಿವುಡ್ ಸೆಲೆಬ್ರಿಟಿಗಳು ಯಾರಾರು ನೋಡಿ ಮತ್ತು ಹಿಂದಿನ ಕಾರಣವೇನು ಗೊತ್ತಾ?
ಕರೀನಾ ಕಪೂರ್ ಬಾಲ್ಯದಲ್ಲಿ ಹೋಳಿ ಹಬ್ಬವನ್ನು ಪ್ರೀತಿಸುತ್ತಿದ್ದರು. ಆದರೆ ರಾಜ್ ಕಪೂರ್ ನಿಧನದ ನಂತರ ಅವರು ಹೋಳಿ ಆಡುವುದನ್ನು ನಿಲ್ಲಿಸಿದರು. ಸಂದರ್ಶನವೊಂದರಲ್ಲಿ, ದಾದಾ ರಾಜ್ ಕಪೂರ್ ನಿರ್ಗಮನದ ನಂತರ ತಾನು ಹೋಳಿ ಆಡುವುದಿಲ್ಲ ಎಂದು ಕರೀನಾ ಹೇಳಿದ್ದರು. ಒಂದು ಕಾಲದಲ್ಲಿ ಆರ್‌ಕೆ ಸ್ಟುಡಿಯೋದಲ್ಲಿ ಆಚರಿಸಿದ ಹೋಳಿ ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ.
ಆಲಿಯಾ ಭಟ್ ಬಾಯ್‌ಫ್ರೆಂಡ್ ರಣಬೀರ್ ಕಪೂರ್ ಕೂಡ ಹೋಳಿಯ ಬಣ್ಣಗಳನ್ನು ಇಷ್ಟಪಡುವುದಿಲ್ಲ. ಅವರು ಈ ದಿನ ಬಣ್ಣಗಳಿಂದ ದೂರವಿರಲು ಆದ್ಯತೆ ನೀಡುತ್ತಾರೆ. 'ಯೇ ಜವಾನಿ ಹೈ ದೀವಾನಿ' ಚಿತ್ರದಲ್ಲಿ ಹೋಳಿ ಹಾಡಿನ 'ಬಲಂ ಪಿಚ್ಕರಿ' ಚಿತ್ರೀಕರಣ ನಡೆಯುತ್ತಿರುವಾಗ, ಅವರು ತುಂಬಾ ಅನ್‌ಕಂಫರ್ಟಬಲ್ ಆಗಿದ್ದರು ಎಂದು ಹೇಳಲಾಗುತ್ತದೆ.
ಜಾನ್ ಅಬ್ರಹಾಂಗೆ ಹೋಳಿ ಹಬ್ಬ ಇಷ್ಟವಿಲ್ಲ. ಅವರು ಈ ದಿನ ಬಣ್ಣಗಳನ್ನು ತಮ್ಮಿಂದ ದೂರವಿಡುತ್ತಾರೆ. ಹೋಳಿ ಬಣ್ಣಗಳಲ್ಲಿ ರಾಸಾಯನಿಕಗಳನ್ನು ಬಳಸುತ್ತಾರೆ. ಇದು ದೇಹ ಮತ್ತು ಪ್ರಕೃತಿ ಎರಡಕ್ಕೂ ಅಪಾಯಕಾರಿ.ಅದಕ್ಕಾಗಿಯೇ ಅವರು ಅದರಿಂದ ದೂರ ಉಳಿಯುತ್ತಾರೆ ಎನ್ನುತ್ತಾರೆ ನಟ. ಅವರ 'ಅಟ್ಯಾಕ್' ಚಿತ್ರ ಏಪ್ರಿಲ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಇದು ಆಕ್ಷನ್ ಸಿನಿಮಾವಾಗಿದೆ.
ಕೃತಿ ಸನನ್ ಅಭಿನಯದ 'ಬಚ್ಚನ್ ಪಾಂಡೆ' ಚಿತ್ರ ಹೋಳಿ ದಿನದಂದು ಥಿಯೇಟರ್‌ಗೆ ಬಂದಿದೆ. ಆದರೆ ನಟಿ ಹೋಳಿಯಿಂದ ದೂರ ಉಳಿಯಲು ಬಯಸುತ್ತಾರೆ. ಹೋಳಿ ಹಬ್ಬ ಅವರಿಗೆ ಇಷ್ಟವಿಲ್ಲವೆಂದಲ್ಲ. ಆದರೆ ಶೂಟಿಂಗ್‌ನಿಂದಾಗಿ ಬಣ್ಣದಿಂದ ದೂರ ಉಳಿದಿದ್ದಾರೆ.
ಬಾಲಿವುಡ್ ಆಕ್ಷನ್ ಹೀರೋ ಟೈಗರ್ ಶ್ರಾಫ್ ಕೂಡ ಹೋಳಿ ಆಡುವುದಿಲ್ಲ. ಅವರು ಬಣ್ಣಗಳಿಗೆ ಹೆದರುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಹೋಳಿಯಿಂದಾಗಿ ನೀರು ವ್ಯರ್ಥವಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಅದಕ್ಕಾಗಿಯೇ ಈ ದಿನ ಅವರು ಹೋಳಿ ಆಡುವುದನ್ನು ತಪ್ಪಿಸಲು ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುತ್ತಾರೆ.
ಪೂಜಾ ಹೆಗ್ಡೆ ಕೂಡ ಹೋಳಿ ಬಣ್ಣದಿಂದ ದೂರ ಉಳಿದಿದ್ದಾರೆ. ಈ ಬಣ್ಣ ಬಹುಕಾಲ ಉಳಿಯುತ್ತದೆ. ನಾನು ಶೂಟ್ ಮಾಡಬೇಕು. ಅದಕ್ಕಾಗಿಯೇ ನಾನು ಹೋಳಿ ಆಡುವುದಿಲ್ಲ ಎಂಬ ಕಾರಣವನ್ನು ತಿಳಿಸಿದ್ದಾರೆ.
ರಣವೀರ್ ಸಿಂಗ್ ಕೂಡ ಹೋಳಿ ಹಬ್ಬವನ್ನು ಇಷ್ಟಪಡುವುದಿಲ್ಲ. ಅವರು ಈ ದಿನ ಬಣ್ಣಗಳಿಂದ ದೂರವಿರಲು ಇಷ್ಟ ಪಡುತ್ತಾರೆ. ಇದರ ಹಿಂದಿನ ಕಾರಣವನ್ನು ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ. ಆದರೂ ದೀಪಿಕಾ ಪಡುಕೋಣೆ ಹೋಳಿ ಆಡಲು ಇಷ್ಟಪಡುತ್ತಾರೆ.