- Home
- Entertainment
- Cine World
- ಅಮ್ಮನಂತೆ ಆರೈಕೆ ಮಾಡಿದ ಗೆಳೆಯ ರಾಕಿ ಜೈಸ್ವಾಲ್ ಬಗ್ಗೆ ಕ್ಯಾನ್ಸರ್ ಪೀಡಿತ ನಟಿ ಹೀನಾ ಖಾನ್ ಮಾತು
ಅಮ್ಮನಂತೆ ಆರೈಕೆ ಮಾಡಿದ ಗೆಳೆಯ ರಾಕಿ ಜೈಸ್ವಾಲ್ ಬಗ್ಗೆ ಕ್ಯಾನ್ಸರ್ ಪೀಡಿತ ನಟಿ ಹೀನಾ ಖಾನ್ ಮಾತು
ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಹೀನಾ ಖಾನ್, ತಮ್ಮ ಕಷ್ಟದ ಸಮಯದಲ್ಲಿ ಜೊತೆಗಿದ್ದ ಗೆಳೆಯ ರಾಕಿ ಜೈಸ್ವಾಲ್ ಬಗ್ಗೆ ಭಾವುಕ ಬರಹವನ್ನು ಬರೆದಿದ್ದಾರೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ರಾಕಿ ನಿರಂತರ ಬೆಂಬಲ ನೀಡಿದ್ದಾರೆ.

ಹಿಂದಿ ಕಿರುತೆರೆ ಲೋಕದ ನಟಿ ಹೀನಾ ಖಾನ್ ಕ್ಯಾನ್ಸರ್‌ನಿಂದ ಬಳಲುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಳೆದ ವರ್ಷ ಜುಲೈನಲ್ಲಿ ಅವರು ತಾನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಅಲ್ಲದೇ ನಿರಂತರವಾಗಿ ಕ್ಯಾನ್ಸರ್‌ನಿಂದ ಆಗುತ್ತಿರುವ ನೋವು ಭಾದೆಗಳ ಬಗ್ಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಚಾರವನ್ನು ಹಂಚಿಕೊಳ್ಳುತ್ತಲೇ ಸ್ತನ ಕ್ಯಾನ್ಸರ್‌ನಿಂದಾಗುತ್ತಿರುವ ಸಂಕಟ ಮಾನಸಿಕ ಬಾಧೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಆದರೆ ಈ ಕಷ್ಟದ ಸಮಯದಲ್ಲಿ ಅವರ ಜೊತೆಗಿದ್ದು, ಮಗುವಿನಂತೆ ಅವರನ್ನು ನೋಡಿಕೊಂಡ ತಾಯಿಮನಸ್ಸಿನ ಗೆಳೆಯ ರಾಕಿ ಜೈಸ್ವಾಲ್ ಬಗ್ಗೆ ಅವರು ಭಾವುಕವಾದ ಬರಹವೊಂದನ್ನು ಬರೆದುಕೊಂಡಿದ್ದಾರೆ. ಆ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಟಿ ಹೀನಾ ಖಾನ್ ತನ್ನ ಗೆಳೆಯ ರಾಕಿ ಜೈಸ್ವಾಲ್ ಗಾಗಿ ಒಂದು ಸುಧೀರ್ಘ ಬರಹವನ್ನು ಬರೆದಿದ್ದಾರೆ. ಇದರ ಜೊತೆಗೆ ಅವರು ಜೊತೆಗಿರುವ ಕಷ್ಟ ಕಾಲದ ಹಲವು ಫೋಟೋಗಳು ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ವಿರುದ್ಧದ ಹೋರಾಟದ ಉದ್ದಕ್ಕೂ ಗೆಳೆಯ ರಾಕಿ ತನ್ನ ಜೊತೆ ಜೊತೆಗೆ ಬೆಂಬಲವಾಗಿ ಹೇಗೆ ನಿಂತಿದ್ದರು ಎಂಬುದನ್ನು ಹೀನಾ ವಿವರಿಸಿದ್ದಾರೆ. ಆತ ನನಗಾಗಿ ತಲೆ ಬೋಳಿಸಿಕೊಂಡ, ವೈದ್ಯರನ್ನು ಭೇಟಿ ಮಾಡುವ ಮೊದಲು ಚೆನ್ನಾಗಿ ತಯಾರಿ ನಡೆಸಿದ್ದ ಮತ್ತು ತನ್ನನ್ನು ಅದೆಷ್ಟು ಕಾಳಜಿಯಿಂದ ನೋಡಿಕೊಂಡ ಎಂದು ಅವರು ಬರೆದುಕೊಂಡಿದ್ದಾರೆ. ಅವರ ಬರಹದ ಸಾರಾಂಶ ಇಲ್ಲಿದೆ.
'ನನಗೆ ತಿಳಿದ ಅತ್ಯಂತ ಒಳ್ಳೆಯ ಮನುಷ್ಯ, ನಾನು ತಲೆ ಬೋಳಿಸಿಕೊಂಡಾಗ ಅವನು ತನ್ನ ತಲೆಯನ್ನು ಬೋಳಿಸಿಕೊಂಡ ಮತ್ತು ನನ್ನ ತಲೆಯಲ್ಲಿ ಮತ್ತೆ ಕೂದಲು ಬೆಳೆಯಲು ಪ್ರಾರಂಭಿಸಿದಾಗ ಮಾತ್ರ ಅವನು ತನ್ನ ತಲೆಕೂದಲನ್ನುಬೆಳೆಯಲು ಬಿಟ್ಟ. ನನ್ನ ಆತ್ಮವನ್ನು ನೋಡಿಕೊಳ್ಳುವ ಮನುಷ್ಯನಿಗೆ, ಯಾವಾಗಲೂ 'ನನಗೆ ನೀನು ಸಿಕ್ಕಿರುವೆ ಎಂದು ಹೇಳುವ ಮನುಷ್ಯನಿಗೆ. ನನ್ನ ಬಿಟ್ಟುಕೊಡಲು ನೂರು ಕಾರಣಗಳಿದ್ದರೂ ನನ್ನ ಪಕ್ಕದಲ್ಲೇ ಇರುವ ಮನುಷ್ಯನಿಗೆ, ಹಿಡಿದಿಟ್ಟುಕೊಳ್ಳಲು ಮಾತ್ರ ತಿಳಿದಿರುವ ಈ ನಿಸ್ವಾರ್ಥ ಮನುಷ್ಯನಿಗೆ' ಎಂದು ಹೀನಾ ಖಾನ್ ತಮ್ಮ ಗೆಳೆಯ ರಾಕಿ ಜೈಸ್ವಾಲ್ ಬಗ್ಗೆ ವಿವರಿಸಿದ್ದಾರೆ.
'ನಾವು ತುಂಬಾ ಕಷ್ಟಗಳನ್ನು ಅನುಭವಿಸಿದ್ದೇವೆ.. ಪ್ರತಿಯೊಂದು ಕಷ್ಟದ ಸಮಯದಲ್ಲಿಯೂ ನಾವು ನಿಜವಾಗಿಯೂ ಒಟ್ಟಿಗೆ ಬದುಕಿದ್ದೇವೆ ಮತ್ತು ಪರಸ್ಪರ ಜೊತೆಯಾಗಿ ನಿಂತಿದ್ದೇವೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯದ ಸವಾಲುಗಳನ್ನು ಎದುರಿಸಿದ ಅತ್ಯಂತ ಕಠಿಣ ಸಮಯಗಳನ್ನು ದಾಟಿ ಬಂದಿದ್ದೇವೆ. ನಾವಿಬ್ಬರೂ ನಮ್ಮ ತಂದೆಯನ್ನು ಕಳೆದುಕೊಂಡು ಒಬ್ಬರಿಗೊಬ್ಬರು ಅಳುತ್ತಾ ಸಾಂತ್ವನ ಹೇಳಿದ್ದೆವು.
ಕೋವಿಡ್ ಸಾಂಕ್ರಾಮಿಕ ರೋಗದ ಉತ್ತುಂಗದಲ್ಲಿ ಅವನಿಗೆ ಕೋವಿಡ್ ಇರಲಿಲ್ಲ ಎಂಬುದು ನನಗೆ ನೆನಪಿದೆ, ಆದರೆ ಅವನು ನನ್ನೊಂದಿಗೆ ಇರಲು ನಿರ್ಧರಿಸಿದ. ಅವನು ದಿನವಿಡೀ 3 ಮಾಸ್ಕ್‌ಗಳನ್ನು ಧರಿಸಿ ನನ್ನನ್ನು ನೋಡಿಕೊಂಡ. ಅದು ಅವನೇ! ವಿಶೇಷವಾಗಿ ನನ್ನ ರೋಗನಿರ್ಣಯದ ಈ ಹಂತದಲ್ಲಿ, ಅವನು ನನಗೆ ಸುದ್ದಿ ತಿಳಿಸಿದ ದಿನದಿಂದ ನಾವು ನಮ್ಮ ಪೆಟ್ ಸ್ಕ್ಯಾನ್‌ಗಳಿಗೆ ಸೆಕೆಂಡುಗಳ ಮೊದಲು ಆತಂಕದಿಂದ ಎಣಿಸುತ್ತಿದ್ದ ದಿನದವರೆಗೆ ಅವನು ಎಲ್ಲವನ್ನೂ ಬಿಟ್ಟು ನನ್ನನ್ನು ನೋಡಿಕೊಳ್ಳುತ್ತಿದ್ದಾನೆ.
ನಾವು ಯಾವುದೇ ವೈದ್ಯರನ್ನು ಭೇಟಿಯಾಗುವ ಮೊದಲು ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸುವುದರಿಂದ ಹಿಡಿದು ನಾನು ಗುಣಮುಖವಾಗುವ ಸರಿಯಾದ ದಿಕ್ಕಿನಲ್ಲಿ ಮುಂದುವರಿಯುತ್ತಿದ್ದೇನೆ ಎಂದು ಅವರು ಖಚಿತಪಡಿಸಿಕೊಳ್ಳುವವರೆಗೆ ಆತನ ಕಡೆಯ ಸಂಶೋಧನೆಯನ್ನು ಮಾಡುವವರೆಗೆ. ನಾವು ಕೀಮೋವನ್ನು ಪ್ರಾರಂಭಿಸಿದ ದಿನದಿಂದ ನಾನು ಲೇಸರ್ ಚಿಕಿತ್ಸೆ ಮೂಲಕ ಹೋಗುತ್ತಿರುವ ಇಂದಿನವರೆಗೆ ಅವನು ನನ್ನ ಮಾರ್ಗದರ್ಶಕ ಬೆಳಕಾಗಿದ್ದಾನೆ.
ನನ್ನನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ನನಗೆ ಬಟ್ಟೆ ಹಾಕುವವರೆಗೆ, ಅವನು ಎಲ್ಲವನ್ನೂ ಮಾಡಿದ್ದಾನೆ ಅವನು ನನ್ನ ಸುತ್ತಲೂ ಯಾರೂ ತೂರಲಾಗದ ರಕ್ಷಣೆಯ ಕ್ಷೇತ್ರವನ್ನು ಸೃಷ್ಟಿಸಿದ್ದಾನೆ. ಈ ಪ್ರಯಾಣ, ವಿಶೇಷವಾಗಿ ಕಳೆದ ಎರಡು ತಿಂಗಳುಗಳು ನನಗೆ ಬಹಳಷ್ಟು ಕಲಿಸಿದವು ಮತ್ತು ನನ್ನ ಬದುಕಿನಲ್ಲಿ ಬಂದ ಅತ್ಯುತ್ತಮ ವಿಷಯ ನೀನು..
ಅದು ಸುಲಭವಲ್ಲದಿದ್ದಾಗಲೂ ನೀವು ತೋರಿಸಿದ ಮಾರ್ಗ, ನನ್ನನ್ನು ಸರಿಪಡಿಸಿದ ಮತ್ತು ಸುತ್ತಲಿನ ಎಲ್ಲವನ್ನೂ ಸರಿಪಡಿಸಿದ ರೀತಿ.. ನೀವು ಉಳಿದುಕೊಂಡ ರೀತಿ, ನೀವು ನನಗೆ ಮೊದಲು ನನ್ನನ್ನು ಪ್ರೀತಿಸಲು ಕಲಿಸಿದ್ದೀರಿ, ನನಗೆ ಉಸಿರಾಡಲು ತುಂಬಾ ಸುಲಭವಾಗುವಂತೆ ಮಾಡಿದ್ದೀರಿ, ಇದಕ್ಕಾಗಿ ನಾನು ನನ್ನ ಹೃದಯದಾಳದಿಂದ ಧನ್ಯವಾದ ಸಲ್ಲಿಸುವೆ.
ನಾನು ನಿಮಗೆ ನೋವುಂಟು ಮಾಡಿದ್ದರೆ ಅದಕ್ಕೆ ನನಗೆ ತುಂಬಾ ವಿಷಾದವಿದೆ, ಹಾಗೂ ನನಗೆ ತಿಳಿದಿದೆ, ನಾನು ಹಾಗೆ ಮಾಡಿದ್ದೇನೆ ಎಂದು. ನಾವಿಬ್ಬರೂ ಈ ಮೊದಲು ಮತ್ತು ಈ ಸಮಯದಲ್ಲಿ ಜೊತೆಯಾಗಿ ನಕ್ಕಿದ್ದೇವೆ, ಅಳುತ್ತಿದ್ದೇವೆ, ಪರಸ್ಪರ ಕಣ್ಣೀರು ಒರೆಸಿದ್ದೇವೆ. ಮತ್ತು ನಮ್ಮ ಜೀವನದುದ್ದಕ್ಕೂ ನಾವು ಅದನ್ನು ಮುಂದುವರಿಸುತ್ತೇವೆ.
ನಾನು ನಿನ್ನನ್ನು ಪ್ರೀತಿಸುತ್ತೇನೆ ನೀನು ನಿಜವಾಗಿಯೂ ನನಗೆ ಸಿಕ್ಕ ದೇವರ ಆಶೀರ್ವಾದ. ನನ್ನ ಎಲ್ಲಾ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಆಗಾಗ್ಗೆ ಅವನಿಗೆ ಹೀಗೆ ಹೇಳುತ್ತಾರೆ. ಹಾಗೂ ಇಂದು ನಾನೂ ಕೂಡ ಅದನ್ನೇ ಹೇಳುತ್ತಿದ್ದೇನೆ. ಇಂತಹ ಹುಡುಗನೊಬ್ಬ ಎಲ್ಲಾ ಹೆಣ್ಣು ಮಕ್ಕಳಿಗೂ ಸಿಗಲಿ ಎಂದು ನಾನು ಬಯಸುತ್ತೇನೆ ಎಂದು ಹೀನಾ ಖಾನ್ ಬರೆದುಕೊಂಡಿದ್ದಾರೆ.