ಐಶ್ವರ್ಯಾ ರೈ ಈ ಗುಣ ನಾದಿನಿ ಶ್ವೇತಾಗೆ ಇಷ್ಟವಾಗೋಲ್ವಂತೆ!
ಬಾಲಿವುಡ್‌ನ ದಿವಾ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಪ್ರತಿಷ್ಠಿತ ಬಚ್ಚನ್ ಫ್ಯಾಮಿಲಿಯ ಸೊಸೆ. ಅಭಿಷೇಕ್ ಬಚ್ಚನ್‌ರನ್ನು ಮದುವೆಯಾಗಿರುವ ಐಶ್ವರ್ಯಾಗೆ ನಾದಿನಿ ಇದ್ದಾರೆ. ಅವರೇ ಶ್ವೇತಾ ಬಚ್ಚನ್. ಶ್ವೇತಾಗೆ ತಮ್ಮ ಅತ್ತಿಗೆ ಐಶ್‌ರ ಇಷ್ಟವಾಗದಿರುವ ಗುಣದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಐಶ್ವರ್ಯಾರ ಬಗ್ಗೆ ನಾದಿನಿ ಶ್ವೇತಾಗೆ ಇಷ್ಟವಾಗದ ವಿಷಯ ಯಾವುದು ಗೊತ್ತಾ?
ಶ್ವೇತಾ ತನ್ನ ಸಹೋದರ ಅಭಿಷೇಕ್ ಬಚ್ಚನ್ ಜೊತೆ ಕರಣ್ ಜೋಹರ್ ಚಾಟ್ ಶೋಗೆ ಹಾಜರಾಗಿದ್ದರು.
ಆ ಸಂದರ್ಭದಲ್ಲಿ ಶ್ವೇತಾ ಹಲವು ವಿಷಯಗಳನ್ನು ಕನ್ಫೆಸ್ ಮಾಡಿಕೊಂಡಿದ್ದಾರೆ.
2019 ರಲ್ಲಿ ತನ್ನ ಸಹೋದರನೊಂದಿಗೆ ಕಾಫಿ ವಿಥ್ ಕರಣ್‌ನಲ್ಲಿ ಶ್ವೇತಾ ಕಾಣಿಸಿಕೊಂಡಾಗ ಅಲ್ಲಿ ಅವರು ತಮ್ಮ ಅತ್ತಿಗೆಯ ಬಗ್ಗೆ ಇಷ್ಟ ಪಡದ ಕೆಲವು ಸಂಗತಿಗಳನ್ನು ಹಂಚಿಕೊಂಡರು.
ಅಭಿಷೇಕ್ ಮತ್ತು ಐಶ್ವರ್ಯಾ 2007ರಲ್ಲಿ ವಿವಾಹವಾದರು.
ಬಚ್ಚನ್ ಕುಟುಂಬ ಸದಸ್ಯರೆಲ್ಲರೂ ಐಶ್ ಜೊತೆ ಬಹ ಸ್ವೀಟ್, ಕೇರಿಂಗ್ ಹಾಗೂ ಪ್ರೀತಿಯ ಬಾಂಡಿಂಗ್ ಹಂಚಿಕೊಂಡಿದ್ದಾರೆ.
ಕರಣ್ ಜೋಹರ್, ಅಭಿಷೇಕ್ ಮತ್ತು ಶ್ವೇತಾ ಬಚ್ಚನ್ ಅವರು ಬಾಲ್ಯದಿಂದಲೂ ಒಬ್ಬರಿಗೊಬ್ಬರು ಪರಿಚಿತರು. ಈ ಮೂವರು ಒಟ್ಟಿಗೆ ಸೇರಿದಾಗ ಬಹಳಷ್ಟು ಮಾತುಕತೆಗಳು ಬಹಿರಂಗಗೊಂಡಿವೆ.
Rapid Fire roundನಲ್ಲಿ ಐಶ್ವರ್ಯಾರ ಟೈಮ್ ಮ್ಯಾನೇಂಜ್‌ಮೆಂಟ್ ಗುಣವನ್ನು ಶ್ವೇತಾ ಇಷ್ಟಪಡುವುದಿಲ್ಲ, ಎಂದಿದ್ದಾರೆ.
ಮತ್ತು ಐಶ್ ಎಂದಿಗೂ ಸರಿಯಾಗಿ ವಾಪಸ್ಸು ಕಾಲ್ ಮಾಡುವುದಿಲ್ಲ. ಅದನ್ನು ಅವರು ದ್ವೇಷಿಸುತ್ತಾರೆ ಎಂದು ಬಹಿರಂಗಪಡಿಸಿದರು.
ಅಭಿಷೇಕ್‌ಗೆ ತನ್ನ ಹೆಂಡತಿ ಪ್ಯಾಕ್ ಮಾಡುವ ರೀತಿ ಇಷ್ಟವಿಲ್ಲ. ಆದರೆ ಅದನ್ನು ಸಹಿಸಿಕೊಳ್ಳುತ್ತೇನೆಂದು ನಟ ರಿವೀಲ್ ಮಾಡಿದ್ದರು.
ಹೆಂಡತಿ ಅಥವಾ ತಾಯಿ, ಅಭಿಷೇಕ್ ಯಾರಿಗೆ ಹೆಚ್ಚು ಹೆದರುತ್ತಾರೆ ಎಂದು ಕೇಳಿದಾಗ, ತಕ್ಷಣ ಶ್ವೇತಾ ಐಶ್ ಎಂದು ಉತ್ತರಿಸಿದ್ದರು.
ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಐಶ್ವರ್ಯಾ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ ಕೊನೆಯ ಬಾರಿಗೆ ಲುಡೋ ಚಿತ್ರದಲ್ಲಿ ನಟಿಸಿದ್ದ ಅಭಿಷೇಕ್ ಬಚ್ಚನ್ ಮುಂಬರುವ ದಿನಗಳಲ್ಲಿ ಬಿಗ್ ಬುಲ್ ಮತ್ತು ಕಹಾನಿ ಸಿನಿಮಾಗಳಲ್ಲಿ ಕಾಣಿಕೊಳ್ಳಲಿದ್ದಾರೆ.