ಡಿವೋರ್ಸ್‌ ನಂತರ ಪತಿ ಸಂಜಯ್‌ ಕಪೂರ್‌ರಿಂದ ಕರೀಷ್ಮಾಗೆ ಸಿಕ್ಕಿದ್ದೇನು?

First Published Jun 7, 2020, 1:27 PM IST

ಬಾಲಿವುಡ್‌ನ ನಟಿ ಕರಿಷ್ಮಾ ಕಪೂರ್ ದೆಹಲಿಯ ಬ್ಯುಸ್ನೇಸ್‌ ಮ್ಯಾನ್‌ ಸಂಜಯ್‌ ಕಪೂರ್‌ ಅವರನ್ನು ಮದುವೆಯಾಗಿದ್ದರು. ಆದರೀಗ ಈ ಜೋಡಿ ಬೇರೆಯಾಗಿದೆ. ಮದುವೆಯಾಗಿ 11 ವರ್ಷಗಳ ನಂತರದ ನಟಿಯ ವಿಚ್ಛೇದನ ಸಾಕಷ್ಟು ಸುದ್ದಿ ಮಾಡಿತ್ತು. ಎರಡು ಮಕ್ಕಳ ನಂತರ ಕರಿಷ್ಮಾ ಸಂಜಯ್‌ ಬೇರೆಯಾಗಿದ್ದು 2016 ರಲ್ಲಿ. ಇವರು ಪರಸ್ಪರ ಒಪ್ಪಿಗೆ ಮೇಲೆ ಡಿವೋರ್ಸ್‌ ಪಡೆದಿದ್ದು, ಮಕ್ಕಳು ಕರೀಷ್ಮಾರ ಜೊತೆ ಮುಂಬೈಯಲ್ಲಿ ನೆಲೆಸುತ್ತಿದ್ದಾರೆ.  ಡಿವೋರ್ಸ್‌ ನಂತರ ನಟಿಗೆ ದೊರೆತ ಜೀವನಾಂಶ ಈಗ ಮತ್ತೆ ಚರ್ಚೆಯ ವಿಷಯವಾಗಿದೆ.