ಬಾಲಿವುಡ್ ದಿವಾ ರೇಖಾ ಜೀವನಕ್ಕೆ ಏನು ಮಾಡ್ತಾರೆ ಗೊತ್ತಾ?
ಬಾಲಿವುಡ್ ಎವರ್‌ಗ್ರೀನ್ ನಟಿ ರೇಖಾ ಫೇಮಸ್ ಸ್ಟಾರ್‌ಗಳಲ್ಲಿ ಒಬ್ಬರು. ತಮ್ಮ ಕಾಲದಲ್ಲಿ ಟಾಪ್ ನಟಿಯರಲ್ಲಿ ಮೊದಲಿಗರು. ಈಗ ಸಿನಿಮಾಗಳಲ್ಲಿ ರೇಖಾ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಆದರೆ ಅವರ ಜೀವನಕ್ಕೆ ಏನು ಮಾಡುತ್ತಾರೆ ನಟಿ ಎಂಬುದು ಫ್ಯಾನ್ಸ್‌ಗೆ ಕುತೂಹಲ. ಇಲ್ಲಿದೆ ನೋಡಿ.
ಈ ದಿನಗಳಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳದ ನಟಿ ರೇಖಾ ತಮ್ಮ ಜೀವನೋಪಾಯಕ್ಕೆ ಏನು ಮಾಡ್ತಾರೆ ಗೊತ್ತಾ?
ಒಮ್ಮೆ ಪತ್ರಕರ್ತ ಮತ್ತು ಬ್ಲಾಗರ್ ಸೌಮ್ಯದಿಪ್ತಾ ಬ್ಯಾನರ್ಜಿಯನ್ನು ಸ್ನೇಹಿತರು ಟ್ಟೀಟರ್ ಲೈವ್‌ಗೆ ಇನ್ವೈಟ್ ಮಾಡಿದ್ದರು. ಅಲ್ಲಿ ಅವರು ಜನರ ದೀರ್ಘಕಾಲದ ಪ್ರಶ್ನೆಗಳಿಗೆ ಉತ್ತರಿಸಿದರು.
ಬಾಲಿವುಡ್‌ನ ದಿವಾ ರೇಖಾ ಹೇಗೆ ಜೀವನೋಪಾಯಕ್ಕೆ ಹೇಗೆ ಸಂಪಾದಿಸುತ್ತಾರೆಂದು ತಿಳಿಯಲು ಹಲವರು ಬಯಸಿದ್ದರು.
ಅವರು ಈಗ ಚಲನಚಿತ್ರಗಳಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಆದರೂ ನಟಿಯ ಆದಾಯದ ಮೂಲ ಯಾವುದು ಎಂದು ಬ್ಯಾನರ್ಜಿ ಬಹಿರಂಗಪಡಿಸಿದರು. 2009 ರಲ್ಲಿ ನಟಿಯ ಜೊತೆ ನಡಿಸಿದ ಸಂದರ್ಶನವನ್ನು ನೆನಪಿಸಿಕೊಂಡರು..
ರೇಖಾಳ ಕುಟುಂಬ ಸಾಕಷ್ಟು ಆಸ್ತಿಯನ್ನು ಹೊಂದಿದ್ದು, ಅದನ್ನು ಬಾಡಿಗೆಗೆ ಕೊಟ್ಟಿದ್ದಾರೆ.
ಪರದೆಯ ಮೇಲೆ ಕಾಣಿಸಿಕೊಳ್ಳುವುದು ಕಡಿಮೆ ಇದ್ದರೂ, ಸಾಕಷ್ಟು ಹಣ ಗಳಿಸುತ್ತಾರೆ ನಟಿ.
ಬ್ರಾಂಡ್‌ಗಳು ಮತ್ತು ಕ್ಯಾಂಪೈನ್‌ಗಳಿಂದ ಆಕೆಗೆ ಹೆಚ್ಚಿನ ಹಣ ಸಂಪಾದಿಸುವ ಇತರೆ ಮೂಲಗಳಾಗಿವೆ.
ಜಾಹಿರಾತು ಫಲಕಗಳಿಗಾಗಿ ಅಥವಾ ಫೋಟೋಶೂಟ್‌ಗಳನ್ನು ಮಾಡಲು ಜನರು ತಮ್ಮ ಮುಖವನ್ನು ಬಳಸಲು ಅವರು
ಪರ್ಮೀಶನ್ ಕೊಡುವ ಮೂಲಕ ಸಂಪಾದಿಸುತ್ತಾರೆ.
ನಟಿ ರಾಜ್ಯಸಭಾ ಸದಸ್ಯೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮತ್ತು ಸಮಾರಂಭಗಳಲ್ಲಿ ರಿಬ್ಬನ್ ಕಟ್ ಮಾಡಲು, ಖಾಸಗಿ ಕಾರ್ಯಕ್ರಮಗಳು, ಬ್ಯುಸಿನೆಸ್ ಲಾಂಚ್ ಪಾರ್ಟಿ ಇತ್ಯಾದಿಗಳಿಂದ ಉತ್ತಮ ಮೊತ್ತವನ್ನು ಗಳಿಸುತ್ತಾರೆ.
ಎವರ್‌ಗ್ರೀನ್ ನಟಿ ರೇಖಾ ಇಂದಿಗೂ ಸ್ವತಃ ದೊಡ್ಡ ಬ್ರಾಂಡ್ ಆಗಿದ್ದಾರೆ.