ಪಬ್ಲಿಕ್‌ನಲ್ಲಿ ಕಿಸ್ ಮಾಡಿದ ಸೆಲೆಬ್ರೆಟಿಗಳು: ಫೋಟೋಸ್ ವೈರಲ್!
ಕಿಸ್ಸಿಂಗ್ ಹಾಗೂ ಇಂಟಿಮೇಟ್ ಸೀನ್‌ಗಳು ಬಾಲಿವುಡ್ ಸಿನಿಮಾಗಳಲ್ಲಿ ತುಂಬಾ ಕಾಮನ್. ಆದರೆ ಸ್ಟಾರ್‌ಗಳು ಅಫ್‌ಸ್ಕ್ರೀನ್‌ನಲ್ಲಿ, ಅದೂ ಪಬ್ಲಿಕ್ ಸ್ಥಳಗಳಲ್ಲಿ ತಮ್ಮ ಪಾರ್ಟನರ್‌ಗೆ ಕಿಸ್ ಮಾಡಿದ ಹಲವು ಉದಾಹರಣೆಗಳಿವೆ. ಇಂತಹ ಅನೇಕ ಥ್ರೋಬ್ಯಾಕ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ಸೆಲೆಬ್ರಿಟಿಗಳು ಎಲ್ಲ ಮಿತಿಗಳನ್ನು ಮೀರಿ ಸಾರ್ವಜನಿಕವಾಗಿ ಚುಂಬಿಸುತ್ತಿರುವುದು ಕಂಡುಬಂದಿದೆ. ಈ ಪಟ್ಟಿಯಲ್ಲಿ ಅಮಿತಾಬ್ ಬಚ್ಚನ್ ಸಹ ಇದ್ದಾರೆ.
ಅಂದಹಾಗೆ, ಅಮಿತಾಬ್-ಜಯಾ ಮಾತ್ರವಲ್ಲ , ಅಮೀರ್ ಖಾನ್-ಕಿರಣ್ ರಾವ್ ಅವರಿಂದ ಸನ್ನಿ ಲಿಯೋನ್-ಡೇನಿಯಲ್ ವೆಬರ್, ಹೃತಿಕ್ ರೋಷನ್-ಸುಜೇನ್ ಖಾನ್, ಪ್ರಿಯಾಂಕಾ ಚೋಪ್ರಾ-ನಿಕ್ ಜೊನಸ್, ಅನೇಕ ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ಲಿಪ್‌ಲಾಕ್ ಮಾಡಿ ಸುದ್ದಿಯಾಗಿದ್ದಾರೆ.
ಕೆಲವು ವರ್ಷಗಳ ಹಿಂದೆ, ಬಿಗ್ ಬಿ ಅವರಿಗೆ ಪ್ರಶಸ್ತಿ ಪ್ರದರ್ಶನದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು. ಅವರು ಆವಾರ್ಡ್ ಪಡೆದ ನಂತರ ಪತ್ನಿ ಜಯಾ ಬಚ್ಚನ್ ಅವರನ್ನು ಚುಂಬಿಸಿದರು. ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿವೆ
ಅದು ಸಾರ್ವಜನಿಕ ಸ್ಥಳವಾಗಲಿ ಅಥವಾ ಯಾವುದೇ ಕಾರ್ಯಕ್ರಮವಾಗಲಿ, ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೊನಾಸ್ ಕಿಸ್ ಮಾಡುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಪ್ರಿಯಾಂಕಾ ಮಾಧ್ಯಮ ಛಾಯಾಗ್ರಾಹಕರ ಮುಂದೆ ಸಹ ನಿಕ್‌ಗೆ ಮುತ್ತಿಟ್ಟಿದ್ದಾರೆ.
ಹೃತಿಕ್ ರೋಷನ್ ಮತ್ತು ಸುಸ್ಸೇನ್ ಖಾನ್ ಬಾಲ್ಯದಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಕೆಲವು ವರ್ಷಗಳ ಡೇಟಿಂಗ್ ನಂತರ, ಇಬ್ಬರೂ ಮದುವೆಯಾದರು ಆದರೆ ನಂತರ ವಿಚ್ಛೇದನ ಪಡೆದರು. ಇಬ್ಬರೂ ಸಾರ್ವಜನಿಕವಾಗಿ ಹಲವು ಬಾರಿ ಚುಂಬಿಸುತ್ತಿರುವುದು ಕಂಡುಬಂದಿದೆ.
ಕೆಲವು ವರ್ಷಗಳ ಹಿಂದೆ, ಅಮೀರ್ ಖಾನ್ ತಮ್ಮ ಹುಟ್ಟುಹಬ್ಬವನ್ನು ಮಾಧ್ಯಮಗಳ ಮುಂದೆ ಆಚರಿಸಿದರು. ಈ ಸಮಯದಲ್ಲಿ ಅವರ ಪತ್ನಿ ಕಿರಣ್ ರಾವ್ ಕೂಡ ಜೊತೆಗಿದ್ದರು. ಕೇಕ್ ಕತ್ತರಿಸಿದ ನಂತರ, ಕಿರಣ್ಆಮೀರ್ ಗೆ ಕೇಕ್ ತಿನ್ನಿಸಿದಾಗ, ಅವರು ಎಲ್ಲರ ಮುಂದೆ ತನ್ನ ಪತ್ನಿಗೆ ಮುತ್ತಿಟ್ಟರು. ಆದರೆ ಈಗ ದಂಪತಿ ಈಗ ಬೇರ್ಪಟ್ಟಿದ್ದಾರೆ.
ರಣವೀರ್ ಸಿಂಗ್ ಯಾವಾಗಲೂ ಪತ್ನಿ ದೀಪಿಕಾ ಪಡುಕೋಣೆ ಜೊತೆ ರೊಮ್ಯಾಂಟಿಕ್ ಆಗಿರುವುದು ಕಾಣುತ್ತೇವೆ. ಆದರೆ, ಮದುವೆಗೆ ಮುಂಚೆ ದೀಪಿಕಾ ಮತ್ತು ರಣವೀರ್ ಡೇಟ್ ಮಾಡುತ್ತಿದ್ದ ಸಮಯದಲ್ಲಿ ನಟ ಪಾರ್ಟಿಯಲ್ಲಿ ದೀಪಿಕಾಳನ್ನು ಚುಂಬಿಸುತ್ತಿದ್ದರು.
ಈ ವಿಷಯದಲ್ಲಿ ಗಾಯಕ ಮಿಕಾ ಸಿಂಗ್ ಎಲ್ಲಾ ಮಿತಿಯನ್ನು ದಾಟಿದ್ದರು. ವರ್ಷಗಳ ಹಿಂದೆ ಅವರು ತಮ್ಮ ಹುಟ್ಟುಹಬ್ಬದ ಪಾರ್ಟಿಗೆ ತಮ್ಮ ಸ್ನೇಹಿತರನ್ನು ಆಹ್ವಾನಿಸಿದ್ದರು. ಅವರಲ್ಲಿ ರಾಖಿ ಸಾವಂತ್ ಕೂಡ ಒಬ್ಬರು. ಪಾರ್ಟಿಯ ಸಮಯದಲ್ಲಿ ಇದ್ದಕ್ಕಿದ್ದಂತೆ ಮಿಕಾ ರಾಕಿ ಸಾವಂತ್ ಅವರನ್ನು ಹಿಡಿದು ಚುಂಬಿಸಿದರು. ಇದು ನಂತರ ಸಾಕಷ್ಟು ಗದ್ದಲಗಳನ್ನು ಸೃಷ್ಟಿಸಿತು ಮತ್ತು ರಾಖಿ ಮಿಕಾ ವಿರುದ್ಧ ದೂರು ಸಹ ದಾಖಲಿಸಿದ್ದರು.
ಕೆಲವು ವರ್ಷಗಳ ಹಿಂದೆ ಹಾಲಿವುಡ್ ನಟ ರಿಚರ್ಡ್ ಗೆರೆ ಭಾರತಕ್ಕೆ ಬೇಟಿ ನೀಡಿದ್ದರು. ಈ ಸಮಯದಲ್ಲಿ, ಅವರು ಒಂದು ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿಯನ್ನು ಬಿಗಿಯಾಗಿ ಚುಂಬಿಸಿದರು. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದ್ದವು ಮತ್ತು ತೀವ್ರವಾಗಿ ಟೀಕಿಸಲ್ಪಟ್ಟವು.
ಸನ್ನಿ ಲಿಯೋನ್ ಕೂಡ ಪತಿ ಡೇನಿಯಲ್ ವೆಬರ್ ಅವರನ್ನು ಹಲವು ಬಾರಿ ಸಾರ್ವಜನಿಕವಾಗಿ ಚುಂಬಿಸಿದ್ದಾರೆ. ಅಷ್ಟೇ ಅಲ್ಲ, ಇನ್ಸ್ಟಾಗ್ರಾಮ್ ನಲ್ಲಿ ತನ್ನ ಪತಿಗೆ ಮುತ್ತಿಡುವ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಪ್ರಸ್ತುತ, ನಟಿ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ.