Happy Birthday Rekha: ಸೌತ್ ಸಿನಿ ಇಂಡಸ್ಟ್ರಿಯ ಸ್ಟಾರ್ ಕಪಲ್ ಮಗಳು ಈ ಬಾಲಿವುಡ್ ಸುಂದರಿ
- ಸೌತ್‌ನ ಟಾಪ್ ನಟನ ಮಗಳು ಬಾಲವುಡ್‌ನ ಸುಂದರಿ ರೇಖಾ
- ಮದುವೆಯಾಗದ ಜೋಡಿಗೆ ಹುಟ್ಟಿದ ಮಗಳು ಟಾಪ್ ನಟಿ
ಬಾಲಿವುಡ್ ಟಾಪ್ ನಟಿಯರಲ್ಲಿ ರೇಖಾ ಹೆಸರು ಟಾಪ್ ಸ್ಥಾನದಲ್ಲಿದೆ. ಇಂದಿಗೆ ಬಾಲಿವುಡ್ ಎಂಟ್ರಿ ಕೊಡೊ ನಟಿಯರಿಗೂ ರೇಖಾ ರೋಲ್ ಮಾಡೆಲ್.
ಸಿನಿಮಾ ಇಂಡಸ್ಟ್ರಿಯಲ್ಲೇ ಎಲ್ಲರೂ ಮೆಚ್ಚುವ ನಟಿ ಈಕೆ. ಸೌಂದರ್ಯ ಹಾಗೂ ಪ್ರತಿಭೆಯ ಖನಿ. ಸಿಲ್ಸಿಲಾ, ಉಮ್ರೊ ಜಾನ್ ಸೇರಿದಂತೆ ಹಿಟ್ ಸಿನಿಮಾಗಳನ್ನು ಕೊಟ್ಟ ನಟಿ ಇವರು. ಹಿರಿಯ ನಟಿ ಕುರಿತು ನೀವರಿಯದ ಕೆಲವು ವಿಚಾರಗಳಿವು.
ರೇಖಾ ಅವರ ನಿಜವಾದ ಹೆಸರು ಭಾನುರೇಖ ಗಣೇಶನ್. ಅವರು ದಕ್ಷಿಣ ನಟ ಜೆಮಿನಿ ಗಣೇಶನ್ ಹಾಗೂ ತಲುಗು ನಟಿ ಪುಷ್ಪವಲ್ಲಿ ಅವರ ಪುತ್ರಿ.
ಬಹಳಷ್ಟು ಜನರು ರೇಖಾ ಏಕೈಕ ಪುತ್ರಿ ಎಂದುಕೊಂಡಿದ್ದಾರೆ. ಆದರೆ ಇದು ನಿಜವಲ್ಲ. ಅವರಿಗೆ ತಂದೆಯ ಇನ್ನೊಂದು ಹೆಂಡತಿಯ ಮೂಲಕ ಒಬ್ಬ ಸಹೋದರನಿದ್ದಾನೆ. ನಟಿ ತನ್ನೆಲ್ಲ ಸಹೋದರರೊಂದಿಗೆ ಉತ್ತಮ ಸಂಬಂಧದಲ್ಲಿದ್ದಾರೆ ಎನ್ನಲಾಗಿದೆ.
ರೇಖಾ ಮೇಕಪ್ ಲವರ್. ಮೇಕಪ್ ಕುರಿತು ವಿಪರೀತ ಆಸಕ್ತಿ ಇರೋ ರೇಖಾ ಗಗನಸಖಿಯರೊಂದಿಗೆ ಗೆಳೆತನ ಮಾಡ್ತಿದ್ರಂತೆ. ಅವರು ರೇಖಾಗೆ ಬೆಸ್ಟ್ ಬ್ರಾಂಡ್ ಮೇಕಪ್ ಐಟಂ ತಂದುಕೊಡುತ್ತಿದ್ದರು ಎನ್ನಲಾಗಿದೆ.
ರೇಖಾ ಅವರ ಸಿನಿಮಾ ಜೀವನ ಹೂವಿನ ಮೇಲಿನ ನಡಿಗೆಯಾಗಿರಲಿಲ್ಲ. ತಮ್ಮ ಹದೆಗೆಟ್ಟ ಆರ್ಥಿಕ ಸ್ಥಿತಿಯಿಂದಾಗಿ ರೇಖಾ ಬಿ ಹಾಗೂ ಸಿ ಲೆವೆಲ್ ಸಿನಿಮಾಗಳಲ್ಲಿಯೂ ನಟಿಸಬೇಕಾಗಿ ಬಂದಿತ್ತು.
ಅವರ ಬಾಲ್ಯವೂ ಅಂಥಹ ಸುಮಧುರ ದಿನಗಳಾಗಿರಲಿಲ್ಲ. ತಂದೆ ಜೆಮಿನಿ ಗಣೇಶನ್ ಕೂಡಾ ರೇಖಾ ಅವರ ಕಾಳಜಿ ವಹಿಸಲಿಲ್ಲ. ರೇಖಾ ಅವರ ತಾಯಿಯನ್ನು ಜೆಮಿನಿ ಮದುವೆಯೇ ಆಗಿರಲಿಲ್ಲ. ಹಾಗಾಗಿಯೇ ಅವರಿಬ್ಬರ ಸಂಬಂಧ ಕೊನೆವರೆಗೂ ಅನೈತಿಕ, ಅಕ್ರಮವಾಗಿಯೇ ಉಳಿದಿತ್ತು.
ಅದ್ಭುತ ಸುಂದರಿಯಾಗಿದ್ದ ರೇಖಾ ಅವರ ಹೆಸರು ರಾಜ್ ಬಬ್ಬರ್, ವಿನೋದ್ ಮೆಹ್ರಾ, ಯಶ್ ಕೊಹ್ಲಿ, ಅಮಿತಾಭ್ ಬಚ್ಚನ್ ಅಕ್ಷಯ್ ಕುಮಾರ್ ಜೊತೆ ಕೇಳಿ ಬಂದಿತ್ತು.
ಡ್ರೀಮ್ ಗರ್ಲ್ ಹೇಮಾ ಮಾಲಿನಿ ಇವರ ಬೆಸ್ಟ್ ಫ್ರೆಂಡ್. ಅವರಿಬ್ಬರು ಅತ್ಯಂತ ಆತ್ಮೀಯ ಗೆಳತಿಯರು. ಅವರ ಸ್ನೇಹ ಹಲವು ವರ್ಷ ಹಳೆಯದು. ಇಬ್ಬರೂ ಖ್ಯಾತ ನಟಿಯರು ಹಾಗೂ ಗೆಳತಿಯರೂ ಹೌದು.