Happy Birthday: ಸೌತ್‌ನ ಕ್ಯೂಟ್ ನಟಿ ಉಪ್ಪೇನಾ ಚೆಲುವೆಗೆ 18 ವರ್ಷ
- ಉಪ್ಪೇನಾ ಚೆಲುವೆಗೆ 18 ವರ್ಷದ ಖುಷಿ
- ಹ್ಯಾಪಿ ಬರ್ತ್‌ಡೇ ಕೃತಿ ಶೆಟ್ಟಿ
ಉಪ್ಪೇನಾ ಸುಂದರಿ ಕೃತಿ ಶೆಟ್ಟಿ 18 ವರ್ಷದ ತುಂಬಿದ ಸಂಭ್ರಮದಲ್ಲಿದ್ದಾರೆ. ಮುಂಬೈನಲ್ಲಿ ಹುಟ್ಟಿ ಟಾಲಿವುಡ್‌ನಲ್ಲಿ ಮಿಂಚಿದ ಈ ಸೌತ್ ಸುಂದರಿಗೆ ಇಂದು ಬರ್ತ್‌ಡೇ ಸಂಭ್ರಮ
ಉಪ್ಪೇನಾ ಸಿನಿಮಾ ಮೂಲಕ ಯುವಕರ ನೆಚ್ಚಿನ ಕ್ರಶ್ ಆದ ಮುದ್ದು ನಗುವಿನ ಚೆಲುವೆ ಅಂಧಧೂನ್‌ನ ತೆಲುಗು ರಿಮೇಕ್‌ನಲ್ಲಿ ಕಾಣಿಸಿಕೊಡ ನಂತರ ನಿತಿನ್, ಟ್ವಿಟರ್‌ನಲ್ಲಿ ತಮ್ಮ ಮುಂದಿನ ಚಿತ್ರವನ್ನು ಎಂಎಸ್ ರಾಜಶೇಖರ್ ರೆಡ್ಡಿ ಜೊತೆ ಎನೌನ್ಸ್ ಮಾಡಿದ್ದರು.
ಮಚೆರ್ಲಾ ನಿಯೋಜಕವರ್ಗಂ ಎಂದು ಹೆಸರಿಸಲಾಗಿರುವ ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ವಿನಾಯಕ ಚತುರ್ಥಿಯಂದು ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿ ಪೂಜೆಯ ನಂತರ ಚಿತ್ರೀಕರಣ ಆರಂಭಿಸಲಾಗಿತ್ತು.
ಈ ಸಿನಿಮಾದಲ್ಲಿ ಅಂಧ ಪಿಯಾನೋ ವಾದಕನಾಗಿ ನಟಿಸುತ್ತಿರುವ ನಿತಿನ್, ತಮ್ಮ 31 ನೇ ಚಿತ್ರವನ್ನು ನಿರ್ದೇಶಕ ಎಂ.ಎಸ್ ರಾಜಶೇಖರ್ ರೆಡ್ಡಿ ಜೊತೆ ಘೋಷಿಸಿದ್ದಾರೆ.
ಆಕ್ಷನ್ ಥ್ರಿಲ್ಲರ್ ಎಂದು ಕರೆಯಲ್ಪಡುವ ಮಾಚೆರ್ಲಾ ನಿಯೋಜಕವರ್ಗಂನಲ್ಲಿ ಉಪ್ಪೇನಾ ಚೆಲುವೆ ಕೃತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಉಪ್ಪೇನಾ ಸಿನಿಮಾದಲ್ಲಿ ವಿಜಯ್ ಸೇತುಪತಿ ಮಗಳಾಗಿ ನಟಿಸಿದ್ದ ಕೃತಿ ಶೆಟ್ಟಿ ಸಿನಿಮಾಗಿಂತಲೂ ಪ್ರಮೋಷನ್‌ನಲ್ಲಿ ಕಂಡು ಬಂದ ಮುಗ್ಧ ಲುಕ್‌ನಿಂದ ವೈರಲ್ ಆಗಿದ್ದರು