ಯಾವ ಹೀರೋಗಳಿಗೂ ಕಮ್ಮಿಯಿಲ್ಲ ಟಾಲಿವುಡ್‌ನ ಈ ಹ್ಯಾಂಡ್ಸಮ್ ನಿರ್ದೇಶಕರು!
ಟಾಲಿವುಡ್‌ನಲ್ಲಿ ಸಾಕಷ್ಟು ಯುವ ನಿರ್ದೇಶಕರಿದ್ದಾರೆ. ಅವರಲ್ಲಿ ಕೆಲವರು ಹೀರೋಗಳಂತೆ ಕಾಣುತ್ತಾರೆ. ಯಾವ ನಿರ್ದೇಶಕರು ಹೀರೋಗಳಿಗಿಂತ ಹ್ಯಾಂಡ್ಸಮ್ ಅಂತ ನೋಡೋಣ.
ಟಾಲಿವುಡ್‌ನ ಯಶಸ್ವಿ ನಿರ್ದೇಶಕ ಅನಿಲ್ ರವಿಪುಡಿ. 40ರ ಹರೆಯದ ಸ್ಟೈಲಿಶ್ ನಿರ್ದೇಶಕ. ಹೀರೋ ಆಗ್ತೀರಾ ಅಂತ ಕೇಳಿದ್ರೆ, ಅದಕ್ಕೆ ಚಾನ್ಸೇ ಇಲ್ಲ ಅಂತಾರೆ.
ಹೀರೋ ಮೆಟೀರಿಯಲ್ ಅನ್ನಿಸಿಕೊಳ್ಳುವ ಇನ್ನೊಬ್ಬ ನಿರ್ದೇಶಕ ವಶಿಷ್ಠ ಮಲ್ಲಾಡಿ. 39ರ ಹರೆಯದ ಹ್ಯಾಂಡ್ಸಮ್ ನಿರ್ದೇಶಕ. ಕಲ್ಯಾಣ್ ರಾಮ್ ಜೊತೆ 'ಬಿಂಬಿಸಾರ' ಸಿನಿಮಾ ಮಾಡಿದ್ದಾರೆ.
ಕಡಿಮೆ ವಯಸ್ಸಿನಲ್ಲಿ ಹೆಚ್ಚು ಸಿನಿಮಾ ನಿರ್ದೇಶಿಸಿದ ಪ್ರಶಾಂತ್ ವರ್ಮ. 35ರ ಹರೆಯದ ಹ್ಯಾಂಡ್ಸಮ್ ಟಾಲಿವುಡ್‌ನ ನಿರ್ದೇಶಕ.
ಹೀರೋಗಳ ಲುಕ್ ಅನ್ನೇ ಮೀರಿಸುವ ಯುವ ನಿರ್ದೇಶಕ ಬಾಬಿ. ಮೆಗಾ ಹೀರೋಗಳ ಫ್ಯಾಮಿಲಿ ಜೊತೆ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ.
ನಿರ್ದೇಶಕ ಮತ್ತು ನಟ ತರುಣ್ ಭಾಸ್ಕರ್ ಅವರು 'ಪೆಳ್ಳಿ ಚೂಪುಲು' ಸಿನಿಮಾ ನಿರ್ದೇಶಿಸಿದ್ದಾರೆ. 'ಮೀಕು ಮಾತ್ರಮೇ ಚೆಪ್ತ' ಸಿನಿಮಾದಲ್ಲಿ ನಟಿಸಿದ್ದಾರೆ.
ರಾಹುಲ್, ವೆಂಕಿ, ಸುಜಿತ್ ಮುಂತಾದ ನಿರ್ದೇಶಕರು ಹೀರೋಗಳಂತೆ ಹ್ಯಾಂಡ್ಸಮ್ ಆಗಿದ್ದಾರೆ. ಆದ್ರೆ ನಿರ್ದೇಶಕರಾಗಿಯೇ ಗುರುತಿಸಿಕೊಳ್ಳಲು ಇವರುಗಳು ಇಷ್ಟ ಪಡುತ್ತಾರೆ.