ತಾಯಿಗಾಗಿ ಪ್ರೀತಿಸಿದ ನಟಿಯ ಬಿಟ್ಟ ಬಾಲಿವುಡ್ ನಟ ಗೋವಿಂದ!
First Published Dec 22, 2020, 4:38 PM IST
80 ಮತ್ತು 90ರ ದಶಕಗಳಲ್ಲಿ ಹೆಚ್ಚು ಹಿಟ್ ಚಿತ್ರಗಳನ್ನು ನೀಡಿದ ಬಾಲಿವುಡ್ ನಟ ಗೋವಿಂದ ಅವರಿಗೆ 57 ವರ್ . 21 ಡಿಸೆಂಬರ್ 1963 ರಂದು ಮುಂಬೈನ ವಿರಾರ್‌ನಲ್ಲಿ ಜನಿಸಿದ ಗೋವಿಂದರ ನಟನೆ ಮತ್ತು ಡ್ಯಾನ್ಸ್ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದೆ. ಕಾಮಿಡಿ, ಆ್ಯಕ್ಷನ್ ಮತ್ತು ಲವ್ ಟ್ರಯಾಂಗಲ್ ಸೇರಿ ಹಲವು ರೀತಿಯ ಪ್ರಕಾರದ ಚಿತ್ರಗಳನ್ನು ಗೋವಿಂದ ಮಾಡಿದ್ದಾರೆ. ಗೋವಿಂದರ ವೈಯಕ್ತಿಕ ಜೀವನವನ್ನು ಸಾಕಷ್ಟು ಚರ್ಚಿಸಲಾಯಿತು. ನಟಿ ನೀಲಂ ಜೊತೆಗಿನ ಅವರ ಆಫೇರ್ ಸಖತ್ ಸದ್ದು ಮಾಡಿತ್ತು.

ನೀಲಂ ಜೊತೆ ಆಫೇರ್ ಹೊಂದಿದಾಗಲೇ ಗೋವಿಂದ ಸುನೀತಾ ಜೊತೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಗೋವಿಂದ ಅವರು ನೀಲಂರಿಗೆ ಹತ್ತಿರವಾದ ನಂತರ ಸುನೀತಾರ ಜೊತೆ ಎಂಗೇಜ್ಮೇಂಟ್ ಸಹ ಮುರಿದುಕೊಂಡರು ಎಂದೂ ವರದಿಯಾಗಿದ್ದವು.

ಆದರೆ, ನಂತರ ಗೋವಿಂದ ಅವರ ತಾಯಿಗೆ ಈ ವಿಷಯ ತಿಳಿದಾಗ, ಅವರು ಸುನೀತಾರಿಗೆ ಮಾತ್ತು ನೀಡಿದ್ದೇನೆ ಮತ್ತು ನಾನು ಆ ಬಗ್ಗೆ ದೃಡವಾಗಿರುತ್ತೇನೆ. ಇನ್ನು ನೀಲಂ ಅನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಮಗನಿಗೆ ತಿಳಿ ಹೇಳಿದ್ದರಂತೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?