- Home
- Entertainment
- Cine World
- ಸೂಪರ್ ಹಿಟ್ ಸಿನಿಮಾ ನೀಡಿದ್ದ ಸ್ಟಾರ್ ನಟ, ಬ್ಯುಸಿನೆಸ್’ಗಾಗಿ ಫಿಲಂಗೆ ಹೇಳಿದ ಗುಡ್ ಬೈ.. ಈಗ ಕೋಟ್ಯಾಧಿಪತಿ!
ಸೂಪರ್ ಹಿಟ್ ಸಿನಿಮಾ ನೀಡಿದ್ದ ಸ್ಟಾರ್ ನಟ, ಬ್ಯುಸಿನೆಸ್’ಗಾಗಿ ಫಿಲಂಗೆ ಹೇಳಿದ ಗುಡ್ ಬೈ.. ಈಗ ಕೋಟ್ಯಾಧಿಪತಿ!
ತಮಿಳು ಚಿತ್ರರಂಗದಲ್ಲಿ ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ನೀಡಿದ್ದ ಸೂಪರ್ ಸ್ಟಾರ್ ನಟ ಪ್ರಶಾಂತ್, ನಂತರ ಬ್ಯುಸಿನೆಸ್ ಆರಂಭಿಸೋದಕ್ಕಾಗಿ ಸಿನಿಮಾಗೆ ಗುಡ್ ಬೈ ಹೇಳಿದ್ದರು. ಇದೀಗ ಕೋಟ್ಯಾಧಿಪತಿಯಾಗಿದ್ದಾರೆ.

ತಮಿಳು ಸಿನಿಮಾದಲ್ಲಿ 90ರ ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಚಿಗುರು ಮೀಸೆಯ, ಹ್ಯಾಂಡ್ಸಮ್ ನಟ ಪ್ರಶಾಂತ್ (Actor Prashanth) ಯಾರಿಗೆ ತಾನೆ ನೆನಪಿಲ್ಲ ಅಲ್ವಾ? ಜೀನ್ಸ್, ಜೋಡಿ, ಕಣ್ಣೆದಿರೇ ತೋಂಡ್ರಿನಾಲ್, ಕಾದಲ್ ಕವಿತೈ, ಪಾರ್ಥೇನ್ ರಸಿತೇನ್, ಚಾಕಲೇಟ್, ಮಜುನು, ತಮಿಳ್ ಮೊದಲಾದ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಸ್ಟಾರ್ ನಟ ಪ್ರಶಾಂತ್.
ಪ್ರಶಾಂತ್ 1990 ರ ದಶಕದಲ್ಲಿ ತಮಿಳು ಚಿತ್ರರಂಗದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಜೀನ್ಸ್ (1998) ನಂತಹ ಬ್ಲಾಕ್ಬಸ್ಟರ್ ಚಲನಚಿತ್ರಗಳಲ್ಲಿ ನಟಿಸಿದರು, ಈ ಸಿನಿಮಾದಲ್ಲಿ ಪ್ರಶಾಂತ್ ಐಶ್ವರ್ಯಾ ರೈ (Aishwarya Rai) ಜೊತೆ ಸ್ಕ್ರೀನ್ ಶೇರ್ ಮಾಡಿದ್ದರು.
ಆದಾಗ್ಯೂ, 2001 ರ ನಂತರ ಸಿನಿಮಾ ಲೈಫ್ ನಲ್ಲಿ ಏರಿಳಿತಗಳು ಶುರುವಾಗಲು ಆರಂಭವಾದವು, ಸಾಲು ಸಾಲು ಸಿನಿಮಾಗಳಲ್ಲಿ ಸೋಲು ಅನುಭವಿಸಿದ ಬಳಿಕ ಪ್ರಶಾಂತ್, ತಮ್ಮ ಕರಿಯರ್ ಬಗ್ಗೆ ಮತ್ತೊಮ್ಮೆ ಯೋಚನೆ ಮಾಡಲು ಆರಂಭಿಸಿದರು. ಅವರು ನಟನೆಯಿಂದ ದೂರ ಸರಿದು ಹೊಸ ಸವಾಲನ್ನು ಸ್ವೀಕರಿಸಲು ನಿರ್ಧರಿಸಿದರು. ಅದುವೇ ಬ್ಯುಸಿನೆಸ್.
ಇಂದು, ಪ್ರಶಾಂತ್ ಭಾರತದ ಅತಿದೊಡ್ಡ ಜ್ಯುವೆಲ್ಲರಿ ಶಾಪಿಂಗ್ (jewellery shopping) ತಾಣವಾದ ಪ್ರಶಾಂತ್ ರಿಯಲ್ ಗೋಲ್ಡ್ ಟವರ್ ನ (Prashanth Real Gold Tower) ಹೆಮ್ಮೆಯ ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಚೆನ್ನೈನಲ್ಲಿರುವ ಈ ಅಪ್ರತಿಮ 17 ಅಂತಸ್ತಿನ ಮಾಲ್ 170,000 ಚದರ ಅಡಿ ವಿಸ್ತೀರ್ಣದಲ್ಲಿ ಉನ್ನತ ಆಭರಣ ಬ್ರಾಂಡ್ಗಳನ್ನು ಹೊಂದಿದೆ.
ರತ್ನಶಾಸ್ತ್ರಜ್ಞೆ (gemologist) ಮತ್ತು ಆಭರಣ ವಿನ್ಯಾಸಕಿಯಾಗಿರುವ ಅವರ ಸಹೋದರಿ ಪ್ರೀತಿ ತ್ಯಾಗರಾಜನ್ ನಿರ್ವಹಿಸುತ್ತಿರುವ ಈ ಮಾಲ್ ನಲ್ಲಿ ಫುಡ್ ಕೋರ್ಟ್, ಎಟಿಎಂಗಳು ಮತ್ತು 200+ ಕಾರುಗಳ ಪಾರ್ಕಿಂಗ್ ಜಾಗ ಕೂಡ ಇದೆ. 2011 ರಲ್ಲಿ ಪ್ರಾರಂಭವಾದ ಇದು ಚೆನ್ನೈ ಮತ್ತು ಅದರಾಚೆಗಿನ ಆಭರಣ ಶಾಪಿಂಗ್ ನ ಬಹು ಮುಖ್ಯ ತಾಣಗಳಲ್ಲಿ ಒಂದಾಗಿದೆ.
ಸಿನೆಮಾದಿಂದ ಬ್ಯುಸಿನೆಸ್ ವರೆಗೂ ಪ್ರಶಾಂತ್ ಅವರ ಜರ್ನಿ ನಿಜಕ್ಕೂ ಪ್ರೇರಣಾತ್ಮಕವಾಗಿದೆ (Inspirational story). ಅವರು ತಮ್ಮ ಉದ್ಯಮಗಳ ಮೂಲಕ ತಮಿಳುನಾಡಿನಾದ್ಯಂತ ದೊಡ್ಡ ಯಶಸ್ಸನ್ನು ಗಳಿಸಿದ್ದಾರೆ. ಟಿ ನಗರದಲ್ಲೂ ಒಂದು ಆಭರಣ ಮಾಲ್ ನಿರ್ಮಾಣ ಮಾಡಿದ್ದಾರೆ ಪ್ರಶಾಂತ್. ಆ ಮೂಲಕ ತಿಂಗಳಿಗೆ ಕೋಟಿ ಕೋಟಿ ಆದಾಯ ಪಡೆದುಕೊಳ್ಳುತ್ತಿದ್ದಾರೆ ಇವರು.
ಆಗೊಂದು ಈಗೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದ ಪ್ರಶಾಂತ್ ಇದೀಗ 5 ವರ್ಷಗಳ ಬಳಿಕ ಮತ್ತೆ ಕಂ ಬ್ಯಾಕ್ ಮಾಡಿದ್ದಾರೆ. ಅಂಧಗನ್ ಎನ್ನುವ ಸಿನಿಮಾದಲ್ಲಿ ನಾಯಕನಾಗಿ ಹಾಗೂ ಗೋಟ್ (The Greatest of All Time) ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಪ್ರಶಾಂತ್ ನಟಿಸಿದ್ದಾರೆ.