ಪೂಜಾ ಹೆಗಡೆಯಿಂದ ರಶ್ಮಿಕಾ ಮಂದಣ್ಣವರೆಗೆ; ಸ್ಟೈಲ್ ಸ್ಟೇಟ್ಮೆಂಟ್‌ಗೆ ಫೇಮಸ್ ಈ ನಟಿಯರು!
ಬಿ-ಟೌನ್ ಸೆಲೆಬ್ರಿಟಿಗಳು ತ್ಮಮ ಬೋಲ್ಡ್ ಹಾಗೂ ಯ್ಯೂನಿಕ್ ಫ್ಯಾಷನ್ ಮೂಲಕ ಗಮನ ಸೆಳೆಯುತ್ತಾರೆ. ಕೆಲವು ನಟಿಯರು ತಮ್ಮ ಫ್ಯಾಷನ್ ಹಾಗೂ ಲುಕ್‌ಗಳಿಂದ ಜನರ ಹೃದಯಗಳನ್ನು ಕದಿಯುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಇದೇ ರೀತಿ ತಮ್ಮ ಕ್ಲಾಸಿ ಲುಕ್ ಮತ್ತು ಫ್ಯಾಷನ್ ಸ್ಟೇಟ್ಮೆಂಟ್‌ಗಳ ಮೂಲಕ ಚಿತ್ರರಂಗವನ್ನು ಆಳುತ್ತಿರುವ ನಟಿಯರು ಇವರು. ಈ ಪಟ್ಟಿಯಲ್ಲಿ ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ (Rashmika Mandanna) ಪ್ರಮುಖರು.
ರಶ್ಮಿಕಾ ಮಂದಣ್ಣ :
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ತನ್ನ ಬಹುಕಾಂತೀಯ ಸೌಂದರ್ಯ ಮತ್ತು ಅವರ ಕಿಲ್ಲರ್ ಫ್ಯಾಶನ್ ಸೆನ್ಸ್‌ನಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ಕಿರಿಕ್ ಪಾರ್ಟಿಯ ಮೂಲಕ ಕೆರಿಯರ್ ಆರಂಭಿಸಿದ ರಶ್ಮಿಕಾ ಚಲೋ ಮೂಲಕ ತೆಲಗು ಚಿತ್ರಗಳಿಗೆ ಮೂಲಕ ಪಾದಾರ್ಪಣೆ ಮಾಡಿದರು.
ಈಗ ರಶ್ಮಿಕಾ ಅವರು ವಿಕಾಸ್ ಬಹ್ಲ್‌ನ ಗುಡ್‌ಬೈ ಚಿತ್ರದ ಮೂಲಕ ಬಾಲಿವುಡ್‌ನಲ್ಲೂ ತಮ್ಮ ಹವಾ ಸೃಷ್ಟಿಸಲೂ ಸಿದ್ಧರಾಗಿದ್ದಾರೆ. ತಮ್ಮ ಸ್ಟೈಲ್ ಹಾಗೂ ಸ್ಟೈಲ್ ಸ್ಟೇಟ್ಮೆಂಟ್‌ನಿಂದ ಸಖತ್ ಫೇಮಸ್ ಆಗಿರುವ ರಶ್ಮಿಕಾ ಅವರು ನ್ಯಾಷನಲ್ ಕ್ರಶ್ ಎಂಬ ಟೈಟಲ್ ಸಹ ಪಡೆದಿದ್ದಾರೆ.
ನಿಧಿ ಅಗರ್ವಾಲ್:
ಫ್ಯಾಷನ್ ಐಕಾನ್ ನಿಧಿ ಅಗರ್ವಾಲ್ ಸವ್ಯಸಾಚಿ (ತೆಲುಗು) ಮತ್ತು ಈಶ್ವರನ್ (ತಮಿಳು) ನಂತಹ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಅವರು ತಮ್ಮಡ್ಯಾನ್ಸ್ ಡ್ರಾಮಾ ಮುನ್ನಾ ಮೈಕೆಲ್‌ನೊಂದಿಗೆ ಬಾಲಿವುಡ್‌ಗೂ ಪ್ರವೇಶ ಮಾಡಿದ್ದಾರೆ. ಅವರು ತಮ್ಮ ಪ್ರತಿಭೆ,ಲುಕ್ ಮತ್ತು ಫ್ಯಾಶನ್‌ನಿಂದಾಗಿ ನಿಧಿ ಸಖತ್ ಫ್ಯಾನ್ ಫಾಲೋವರ್ಸ್ ಗಳಿಸಿದ್ದಾರೆ.
ಪೂಜಾ ಹೆಗ್ಡೆ :
2010 ರ ಐ ಆಮ್ ಶೀ-ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಎರಡನೇ ರನ್ನರ್-ಅಪ್ ಆಗಿ ಕಿರೀಟವನ್ನು ಪಡೆದರು ಪೂಜಾ ಹೆಗ್ಡೆ ಅವರ ಫ್ಯಾಷನ್ ಸ್ಟೈಟ್ಮೆಂಟ್‌ಗಳಿಂದ ಎಲ್ಲರನ್ನೂ ತಮ್ಮೆಡೆಗೆ ಸೆಳೆದುಕೊಂಢಿದ್ದಾರೆ. ಆಕೆಯ ರೆಡ್ ಕಾರ್ಪೆಟ್ ಪ್ರದರ್ಶನಗಳು ಹೃದಯಗಳನ್ನು ಕದಿಯುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ SIIMA ಪ್ರಶಸ್ತಿ ವಿಜೇತ ನಟಿ ತೆಲುಗು ಚಿತ್ರರಂಗದ ಫೇಮಸ್ ಹೆಸರು.
‘ಅಲಾವೈಕುಂಠಪುರಮುಲೂ’, ‘ಒಕಾ ಲೈಲಾ ಕೋಸಂ’, ಮತ್ತು ‘ಅರವಿಂದ ಸಮೇತ ವೀರ ರಾಘವ’ ಚಿತ್ರಗಳಅವರ ಅಭಿನಯವು ಆಕೆಗೆ ಉದ್ಯಮದಲ್ಲಿ ಪ್ರಮುಖ ಸ್ಥಾನವನ್ನು ತಂದುಕೊಟ್ಟಿತು. ಅವರು ಮೊಹೆನ್‌ಜೋ ದಾರೋ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು ನಂತರ ಸಾಜಿದ್ ನಾಡಿಯಾಡ್‌ವಾಲಾ ಅವರ ಹೌಸ್‌ಫುಲ್ 4 ನಲ್ಲಿ ಕಾಣಿಸಿಕೊಂಡರು.
ಕಿಯಾರಾ ಅಡ್ವಾಣಿ :
ಕಬೀರ್ ಸಿಂಗ್ ಫೇಮ್ ನಟಿ ಕಿಯಾರಾ ಅಡ್ವಾಣಿ ತಮ್ಮ ಕೂಲ್ ಹಾಗೂ ಚಿಕ್ ಫ್ಯಾಶನ್ ಸೆನ್ಸ್‌ನಿಂದ ತಮ್ಮ ಅಭಿಮಾನಿಗಳನ್ನು ರಂಜಿಸುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಪ್ರತಿ ಬಾರಿ ಕಾಣಿಸಿಕೊಂಡಾಗ,ಅವರು ತಮ್ಮ ಲುಕ್ ಹಾಗೂಕ್ಲಾಸಿ ಡ್ರೆಸ್‌ಸೆನ್ಸ್ ಮೂಲಕ ಕ್ರೇಂದ್ರಬಿಂದುವಾಗುತ್ತಾರೆ.
ಸೌತ್ ಫಿಲ್ಮ್ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ ಅವರು ಕಬೀರ್ ಸದಾನಂದರ ಹಾಸ್ಯ ಚಿತ್ರ ಫಗ್ಲಿ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಅವರು MS ಧೋನಿ, ಕಬೀರ್ ಸಿಂಗ್, ಗುಡ್ ನ್ಯೂಜ್, ಶೇರ್ಷಾ, ಭೂಲ್ ಭುಲೈಯಾ 2 ಮತ್ತು ಜುಗ್ಜಗ್ ಜೀಯೋದಲ್ಲಿ ವಿಭಿನ್ನ ಪಾತ್ರಗಳೊಂದಿಗೆ ವಿಸ್ಮಯಗೊಳಿಸಿದ್ದಾರೆ.