ಕೋಲ್ಕತ್ತಾ ವೈದ್ಯೆ ಅತ್ಯಾಚಾರದ ಬಗ್ಗೆ ಮಾತನಾಡಿದ ನಟಿ, ಮಾಜಿ ಟಿಎಂಸಿ ಎಂಪಿ ಮಿಮಿ ಚಕ್ರವರ್ತಿಗೆ ಬೆದರಿಕೆ ಕರೆ!
ಕೊಲ್ಕತ್ತಾದಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರವನ್ನು ಯಾವ ನಾಗರಿಕ ಸಮಾಜವೂ ಸಮರ್ಥಿಸಲು ಸಾಧ್ಯವಿಲ್ಲ. ಆ ಕಾರಣದಿಂದಾಗಿಯೇ ದೇಶವ್ಯಾಪಿ ಮುಷ್ಕರಗಳು ನಡೆಯುತ್ತಿದ್ದು, ಅತ್ಯಾಚಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ. ಆದರೆ, ಕೆಲವು ಕೊಳಕು ಮನಸ್ಸುಗಳು ಏನೋ ಹೇಳುವ ಭರದಲ್ಲೋ, ಅಥವಾ ಬೇರೆಯದ್ದೇ ರಾಜಕೀಯ ಸದುದ್ದೇಶದಿಂದಲೇ ವಿಭಿನ್ನವಾದ ಹೇಳಿಕೆ ನೀಡುತ್ತಿದ್ದಾರೆ. ಅದರಲ್ಲಿ ಮಾಜಿ ಟಿಎಂಸಿ ಸಂಸದೆ, ನಟಿಯೂ ಹೊರತಾಗಿಲ್ಲ. ಲಿಂಗ ಆಧಾರಿತ ಹಿಂಸಾಚಾರದ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿರುವ ಮಿಮಿ ಹೇಳಿಕೆಗೆ ಇದೀಗ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಈ ನಟಿ ಮೇಲೂ ಅತ್ಯಚಾರವೆಸಗುವ ಬೆದರಿಕೆ ಕರೆಗಳು ಕೇಳಿ ಬರುತ್ತಿವೆ. ಏನಿದು ಹೇಳಿಕೆ?
ಮಿಮಿ ಚಕ್ರವರ್ತಿ
ಮಾಜಿ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಿಮಿ ಚಕ್ರವರ್ತಿ, ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣವನ್ನು ಪ್ರತಿಭಟಿಸಿ ಪೋಸ್ಟ್ ಹಂಚಿಕೊಂಡ ನಂತರ ತಮಗೆ ಅತ್ಯಾಚಾರ ಬೆದರಿಕೆ ಕರೆಗಳು ಮತ್ತು ಅಶ್ಲೀಲ ಸಂದೇಶಗಳು ಬರುತ್ತಿವೆ ಎಂದು ಹೇಳುತ್ತಿದ್ದಾರೆ. ವಿಶೇಷವಾಗಿ ಲಿಂಗ ಆಧಾರಿತ ಹಿಂಸಾಚಾರದ ವಿರುದ್ಧ ಮಾತನಾಡುವ ಮಹಿಳೆಯರ ವಿರುದ್ಧ ಆನ್‌ಲೈನ್ ಕಿರುಕುಳ ಹೆಚ್ಚುತ್ತಿದೆ. ಬೆದರಿಕೆ ಕರೆಗಳು ಬಂದರೂ, ಮಿಮಿ ನ್ಯಾಯ ಮತ್ತು ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ತಮ್ಮ ಹೋರಾಟ ಮುಂದುವರಿಸಿದ್ದಾರೆ.
ಆನ್‌ಲೈನ್ ಕಿರುಕುಳ
ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣದ ಬಗ್ಗೆ ತಮ್ಮ ಪ್ರತಿಭಟನಾ ಪೋಸ್ಟ್ ಶೇರ್ ಮಾಡಿಕೊಂಡ ನಂತರ ತಮಗೆ ಅತ್ಯಾಚಾರ ಬೆದರಿಕೆಗಳು ಮತ್ತು ಅಶ್ಲೀಲ ಸಂದೇಶಗಳು ಬಂದಿವೆ ಎಂದು ಮಾಜಿ ತೃಣಮೂಲ ಕಾಂಗ್ರೆಸ್ ಸಂಸದೆ ಮತ್ತು ಪ್ರಸಿದ್ಧ ನಟಿ ಮಿಮಿ ಚಕ್ರವರ್ತಿ ಬಹಿರಂಗಪಡಿಸಿದ್ದಾರೆ. ಈ ಕ್ರೂರ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನಂತರ ಕಿರುಕುಳ ಪ್ರಾರಂಭವಾಗಿದೆ. ಇದನ್ನು ಯಾವುದೇ ಅಳುಕಿಲ್ಲದೇ ಪ್ರತಿಭಟಿಸುವುದಾಗಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ
ಮಿಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶ ಕೊಳಕು ಮನಸ್ಸಿನ ಮನುಷ್ಯರ ಬಗ್ಗೆ ಸ್ಪಷ್ಟ ಚಿತ್ರಣ ನೀಡುತ್ತದೆ. ಪಬ್ಲಿಕ್ ಫಿಗರ್ಸ್ ಸಮಾಜದ ಆಗು ಹೋಗುಗಳ ಬಗ್ಗೆ ಇಂಥದ್ದೊಂದು ಹೇಳಿಕೆ ಕೊಟ್ಟರೆ ಇಷ್ಟು ವಿರೋಧ ವ್ಯಕ್ತವಾಗೋದು ಯಾಕೆ? ಈ ನಡುವೆ ಮಹಿಳೆಯರ ವಿರುದ್ಧ ಆನ್‌ಲೈನ್ ಕಿರುಕುಳವೂ ಹೆಚ್ಚಾಗುತ್ತಿದ್ದು, ಈ ಬಗ್ಗೆಯೂ ಸೈಬರ್ ಸೆಲ್ ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಕೋಲ್ಕತ್ತಾ ಸೈಬರ್ ಪೊಲೀಸರನ್ನು ಟ್ಯಾಗ್ ಮಾಡಿ ಕೆಲವು ಅಶ್ಲೀಲ, ನೀಚ ಸಂದೇಶಗಳನ್ನು ಶೋರ್ ಮಾಡಿಕೊಂಡಿದ್ದಾರೆ ನಟಿ.
ಕಪಟತನವನ್ನು ಬಯಲು ಮಾಡುವುದು!
ಇಂಥ ಗೊಡ್ಡು ಬೆದರಿಕೆಗಳಿಗೆ ಹೆದರಿ, ಯಾವುದೇ ಆಲೋಚನೆಗಳಿಂದ ಹಿಂದೆ ಸರಿಯುವುದಿಲ್ಲವೆಂದು ಸ್ಪಷ್ಟಪಡಿಸಿರುವ ಮಿಮಿ, ಇಂಥ ಕೆಟ್ಟು ಮನಸ್ಥಿತಿಯುಳ್ಳವರು ಪಡೆದುಕೊಂಡ ಶಿಕ್ಷಣ ಹಾಗೂ ಸಂಸ್ಕಾರದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಇಂಥ ಆನ್‌ಲೈನ್ ಕಿರುಕುಳದ ವಿರುದ್ಧ ಕಟ್ಟುನಿಟ್ಟಾದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸಾರ್ವಜನಿಕ ಪ್ರತಿಭಟನೆಯಲ್ಲಿ ಭಾಗಿ
ಆನ್‌ಲೈನ್ ಅಭಿಯಾನದ ಹೊರತಾಗಿ, ಮಿಮಿ ಕೊಲ್ಕತ್ಕಾ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿರುದ್ದ ನಡೆಯುತ್ತಿರುವ ಪ್ರತಿಭಟನೆಯಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಮಹಿಳೆಯರ ವಿರುದ್ಧ ನಡೆಯುತ್ರಿರುವ ಅಪರಾಧಕ್ಕೆ ಮುಕ್ತಿ ಹಾಡುವಂಥ ಕ್ರಮಗಳಿಗ ೆಸಂಬಂಧಿಸಿದವರು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಮಿಮಿ ನಿಲುವು
ಪಬ್ಲಿಕ್ ಫಿಗರ್ ಆದವರು ಇಂಥ ವಿಷಯದಲ್ಲಿ ಸ್ಪಷ್ಟ ನಿಲುವು ಹೊಂದಿರಬೇಕಾದ ಅಗತ್ಯವಿದ್ದು, ಸಮಾಜದ ಅಂಕು ಡೊಂಕುಗಳ ವಿರುದ್ಧ ಧ್ವನಿ ಎತ್ತಬೇಕೆಂದು ಆಗ್ರಹಿಸಿದ್ದಾರೆ. ಇಂಥ ಸಂದರ್ಭದಲ್ಲಿ ಕೆಲವು ಹಿನ್ನಡೆ ಆಗುವುದು ಗ್ಯಾರಂಟಿ. ಆದರೆ, ಯಾವುದಕ್ಕೂ ಅಂಜದೇ ತಮ್ಮ ಹೋರಾಟ ಮುಂದುವರಿಸಬೇಕೆಂದು ಹೇಳಿದ್ದಾರೆ.
ಸೈಬರ್ ಭದ್ರತೆಯ ಮಹತ್ವ
ಕೇವಲ ದೈಹಿಕ ಅತ್ಯಾಚಾರ ಮಾತ್ರವಲ್ಲ, ಸೋಷಿಯಲ್ ಮೀಡಿಯಾ ಮೂಲಕವೂ ಮಹಿಳೆಯರ ಮೇಲೆ ಮಾನಸಿಕ ಅತ್ಯಾಚರಗಳು ನಡೆಯುತ್ತಲೇ ಇರುತ್ತವೆ. ಇವನ್ನು ತಡೆಯುವುದು ಎಲ್ಲರ ಹೊಣೆ. ಆದರಲ್ಲಿಯೂ ಸೈಬರ್ ಪೊಲೀಸ್ ಹಾಗೂ ಅಪರಾಧ ತಡೆ ಘಟಕಗಳ ಹೆಚ್ಚು ಸಕ್ರಿಯವಾಗಬೇಕೆಂದು ಹೇಳಿದ್ದಾರೆ.