ಭೂಮಿ ಪೆಡ್ನೇಕರ್ ರೀತಿ ಟೋನ್ಡ್ ಬಾಡಿ ಬೇಕಾ? ಈ ಟಿಪ್ಸ್ ಫಾಲೋ ಮಾಡಿ!
ಭೂಮಿ ಪೆಡ್ನೇಕರ್ ಬಾಲಿವುಡ್‌ನ ಮೊಸ್ಟ್ ಟ್ಯಾಲೆಂಟ್ಡೆಡ್ ನಟಿಯರಲ್ಲಿ ಒಬ್ಬರು. ತಮ್ಮ ಕೆಲಸದೆಡಿಗಿನ ಸಮರ್ಪಣೆಗೆ ಅವರು ಫೇಮಸ್. ಭೂಮಿ ಪೆಡ್ನೇಕರ್ ವೇಯಿಟ್ ಲಾಸ್ ಜರ್ನಿಯ ಸಿಕ್ರೇಟ್ ಇಲ್ಲಿದೆ. ಭೂಮಿ ಪೆಡ್ನೇಕರ್ ರೀತಿಯ ಟೋನ್ಡ್ ಬಾಡಿ ಬೇಕಾದರೆ? ಈ ಟಿಪ್ಸ್ ಫಾಲೋ ಮಾಡಿ.

ಭೂಮಿ ಪೆಡ್ನೇಕರ್ ತನ್ನ ಚೊಚ್ಚಲ ಚಿತ್ರ ದಮ್ ಲಗಾ ಕೆ ಐಸಾದಲ್ಲಿ ಅಧಿಕ ತೂಕದ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಲನಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ, ನಟಿ ತನ್ನ ಅದ್ಭುತ ಟ್ರಾನ್ಸ್‌ಫಾರ್ಮೇಷನ್ ಮೂಲಕ ಎಲ್ಲರನ್ನೂ ಬೆಚ್ಚಿ ಬೀಳಿಸಿದರು.
ಏಕೆಂದರೆ ಅವರು ಅತಿ ಕಡಿಮೆ ಸಮಯದಲ್ಲಿ ಜೀರೋ ಫಿಗರ್ ಸಾಧಿಸಿದ್ದರು. ಭೂಮಿ ಪೆಡ್ನೇಕರ್ ಯಾವುದೇ ಕ್ರಾಶ್ ಡಯಟ್ ಇಲ್ಲದೆ 4 ತಿಂಗಳಲ್ಲಿ 21 ಕೆಜಿ ಇಳಿಸುವಲ್ಲಿ ಯಶಸ್ವಿಯಾದರು.
ಭೂಮಿಯ ವೇಯಿಟ್ ಲಾಸ್ ಜರ್ನಿ ಎಲ್ಲರನ್ನೂ ಆಕರ್ಷಿಸುತ್ತಿದೆ. ನಟಿ ತುಂಬಾ ತೀವ್ರವಾಗಿ ಹಾಗೂ ರೆಗ್ಯುಲರ್ ಆಗಿ ವರ್ಕೌಟ್ ಮಾಡುತ್ತಾರೆ. ತೂಕ ಇಳಿಸಲು ತಮ್ಮನ್ನು ಕಾರ್ಡಿಯೋ ಮತ್ತು ವೇಯಿಟ್ ಟ್ರೈನಿಂಗ್‌ನಲ್ಲಿ ತೊಡಗಿಸಿಕೊಂಡರು.
ಜೊತೆಗೆ ಭೂಮಿ ತಮ್ಮ ಡಯಟ್‌ನಲ್ಲಿ ತುಪ್ಪ ಮತ್ತು ಮಜ್ಜಿಗೆ ಅಳವಡಿಸಿಕೊಂಡರು. ಅವರು ತಮ್ಮ ಆಹಾರದಲ್ಲಿ ತುಪ್ಪ ಮತ್ತು ಮಜ್ಜಿಗೆಗೆ ಬಹಳಷ್ಟು ಸೇವಿಸುತ್ತಾರೆ ಮತ್ತು ಆಹಾರ ಪೋರ್ಶನ್ ಕಂಟ್ರೋಲ್ ಮಾಡುತ್ತಾರೆ ಎಂದು ತಮ್ಮ ತೂಕ ಇಳಿಕೆ ಸೀಕ್ರೇಟ್ ಹಂಚಿಕೊಂಡಿದ್ದಾರೆ ಭೂಮಿ.
ಭೂಮಿ ಮನೆಯಲ್ಲಿ ತಯಾರಿಸಿದ ಆಹಾರವನ್ನು ಪ್ರೀತಿಸುತ್ತಾರೆ ಹಾಗೂ ಅವರು ತಾಯಿಯ ಅಡುಗೆಯನ್ನು ಅವಲಂಬಿಸಿದ್ದಾರೆ. ಹೆಚ್ಚಾಗಿ ಸೊಪ್ಪು ತಿನ್ನುತ್ತಾರೆ. ಅದಷ್ಟೂ ಸಕ್ಕರೆಯನ್ನು ಆವಾಯಿಡ್ ಮಾಡಲು ಪ್ರಯತ್ನಿಸುವ ಪೆಡ್ನೇಕರ್ ಸಕ್ಕರೆ ಬದಲಿಗೆ ಸ್ಟೀವಿಯಾ, ಬೆಲ್ಲ ಅಥವಾ ಖರ್ಜೂರದ ಸಿರಪ್‌ಗಳನ್ನು ಸೇವಿಸುತ್ತಾರೆ.
ಡಿಟಾಕ್ಸ್ ವಾಟರ್ ತುಂಬಾ ಸಹಾಯಕ ಎಂದು ಭೂಮಿ ಹೇಳುತ್ತಾರೆ. ಅಲೋವೆರಾ ರಸ, ಸೌತೆಕಾಯಿಗಳನ್ನು ಸೇವಿಸುವ ಮೂಲಕ ದೇಹದಿಂದ ಟಾಕ್ಸಿನ್ ದೂರವಿರಿಸಲು ಇಷ್ಟಪಡುತ್ತಾರೆ ಈ ನಟಿ.
ಭೂಮಿ ಕೂಡ ಚೀಟ್ ಡೇ ಮಾಡುತ್ತಾರೆ. ಐದು ದಿನಗಳ ಕಾಲ ಕಠಿಣವಾದ ವರ್ಕೌಟ್‌ಗಳನ್ನು ಮಾಡುತ್ತಾರೆ ಮತ್ತು ಚೀಟ್ ಮೀಲ್‌ನ ತನ್ನ ಆಸೆಯನ್ನು ಪೂರೈಸುತ್ತಾರೆ. ತೂಕ ಇಳಿಸಿಕೊಳ್ಳಲು ಸ್ಥಿರತೆ ಮತ್ತು ಬದ್ಧತೆ ಮುಖ್ಯ ಎಂದು ಭೂಮಿ ನಂಬುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.