ಫರ್ಹಾನ್ ಅಖ್ತರ್ ಅವರ ಬ್ಯಾಚುಲರ್ ಪಾರ್ಟಿಯಲ್ಲಿ ಶಿಬಾನಿ ದಾಂಡೇಕರ್?
ಬಾಲಿವುಡ್ ನಟ ಫರ್ಹಾನ್ (Farhan Akhtar) ಅಖ್ತರ್ ಫೆಬ್ರವರಿ 21 ರಂದು ಶಿಬಾನಿ ದಾಂಡೇಕರ್ (Shibani Dandekar) ಅವರನ್ನು ಎರಡನೇ ಬಾರಿಗೆ ಮದುವೆಯಾಗಲಿದ್ದಾರೆ. ಫರ್ಹಾನ್ ಮತ್ತು ಶಿಬಾನಿ ಈಗ ನಾಲ್ಕು ವರ್ಷಗಳಿಂದ ಡೇಟಿಂಗ್ (Dating) ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಫರ್ಹಾನ್ ಅವರ ತಂದೆ ಜಾವೇದ್ ಅಖ್ತರ್ ಅವರು ತಮ್ಮ ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ ಮದುವೆ ನಡೆಯಲಿದೆ ಮತ್ತು ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಖಚಿತಪಡಿಸಿದರು.ಫರ್ಹಾನ್ ಅಖ್ತರ್ ಅವರ ಬ್ಯಾಚುಲರ್ ಪಾರ್ಟಿ 9Bacheralate party) ಫೋಟೋಗಳು ಹೊರಬಂದಿದೆ.
ಫರ್ಹಾನ್ ಮತ್ತು ಶಿಬಾನಿ ತಮ್ಮ ಮದುವೆಯ ದಿನದಂದು ಸಬ್ಯಸಾಚಿ ಡಿಸೈನ್ ಮಾಡಿದ ಔಟ್‌ಫಿಟ್ ಧರಿಸುತ್ತಾರೆ. ಫರ್ಹಾನ್ ಇತ್ತೀಚೆಗೆ ತಮ್ಮ ಬ್ಯಾಚುಲರ್ ಪಾರ್ಟಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮತ್ತು ಶಿಬಾನಿ ಕೂಡ ಪಾರ್ಟಿಯಲ್ಲಿ ಭಾಗವಹಿಸಿದಂತೆ ಕಾಣುತ್ತದೆ.
ತಾಂತ್ರಿಕವಾಗಿಯೂ ತಾನು ಪಾರ್ಟಿಯ ಭಾಗವಾಗಿದ್ದೇನೆ ಎಂದು ಶಿಬಾನಿ ಪ್ರತಿಕ್ರಿಯಿಸಿದ್ದಾರೆ. ಫೋಟೋದಲ್ಲಿ ಫರ್ಹಾನ್ ಮತ್ತು ಶಿಬಾನಿಯ ಮುಖವಾಡಗಳನ್ನು ಕಾಣಬಹುದು. The boys are back in town #stagdaynightfever' ಎಂದು ಫರ್ಹಾನ್ ಶೀರ್ಷಿಕೆ ನೀಡಿದ್ದಾರೆ.
TOI ಗೆ ನೀಡಿದ ಸಂದರ್ಶನದಲ್ಲಿ, ಫರ್ಹಾನ್ ಅವರ ತಾಯಿ ಹನಿ ಇರಾನಿ ಅವರು ಮದುವೆಯ ಬಗ್ಗೆ ಮಾತನಾಡಿದ್ದಾರೆ. ಅವರು ಎಷ್ಟು ಸಂತೋಷವಾಗಿದ್ದಾರೆ, ಇಡೀ ಕುಟುಂಬವು ಮದುವೆಗಾಗಿ ಎದುರು ನೋಡುತ್ತಿದೆ. ವಿವಾಹಿತರಲ್ಲಿ, ದಂಪತಿ ಸಂತೋಷವಾಗಿರುವುದು ಮತ್ತು ಮುಂದೆ ಅದ್ಭುತವಾದ ಜೀವನ ಬಹಳ ಮುಖ್ಯ ಎಂದು ಹನಿ ಇರಾನಿ ಹೇಳಿದ್ದಾರೆ.
ಜಾವೇದ್ ಅಖ್ತರ್ (Javed Akthar) ಕೂಡ ಮದುವೆಯ ಬಗ್ಗೆ ಮಾತನಾಡುತ್ತಾ, ಶಿಬಾನಿ ದಾಂಡೇಕರ್ ಒಳ್ಳೆಯ ಹುಡುಗಿ ಎಂದಿದ್ದಾರೆ. ಎಲ್ಲಾ ಕುಟುಂಬ ಸದಸ್ಯರು ಅವಳನ್ನು ಇಷ್ಟ ಪಡುತ್ತಾರೆ. 'ಅವಶ್ಯಕವಾದ ವಿಷಯವೆಂದರೆ ಅವಳು ಮತ್ತು ಫರ್ಹಾನ್ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತಾರೆ, ಅದು ಅದ್ಭುತ,' ಎಂದರು.
ಶಿಬಾನಿ ದಾಂಡೇಕರ್ ಕೂಡ ಫರ್ಹಾನ್ ಅವರ ಪುತ್ರಿಯರಾದ ಅಕಿರಾ ಮತ್ತು ಶಕ್ಯಾ ಅವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ನಟ ಮೊದಲು 2000 ರಲ್ಲಿ ಅಧುನಾ ಭಬಾನಿ ಅವರನ್ನು ವಿವಾಹವಾದರು ಮತ್ತು ನಂತರ 2017 ರಲ್ಲಿ ಅವರು ಬೇರ್ಪಟ್ಟರು. ಅಧುನಾ ಭಬಾನಿ ಕೇಶ ವಿನ್ಯಾಸಕಿ ಮತ್ತು BBLUNT ನ ಕೋ-ಹೋಸ್ಟ್.
ಫರ್ಹಾನ್ ಅಖ್ತರ್ ಅವರು ತಮ್ಮ ಮುಂದಿನ ನಿರ್ದೇಶನದ ಜೀ ಲೆ ಜರಾ ಎಂಬ ರೋಡ್ ಟ್ರಿಪ್ ಸಿನಿಮಾ ಮಾಡಲಿದ್ದಾರೆ ಮತ್ತು ಆ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ (Priyanka Chopra Jonas), ಆಲಿಯಾ ಭಟ್ (Alia Bhat), ಕತ್ರಿನಾ ಕೈಫ್ (Katrina Kaif) ಪ್ರಮುಖ ಪಾತ್ರಗಳಲ್ಲಿದ್ದಾರೆ ಎಂದು ಘೋಷಿಸಿದ್ದಾರೆ.